ಟಾಪ್ 10 ICC ಟೆಸ್ಟ್ ರಾಂಕಿಂಗ್‌ನಲ್ಲಿ ಭಾರತದ ಒಬ್ಬನೇ ಆಟಗಾರ,`ವಿರಾಟ್ ಕೊಹ್ಲಿ` !
ICC test ranking : ಐಸಿಸಿಯು ನೂತನ ಟೆಸ್ಟ್ ರಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತ ತಂಡವು 2ನೇ ಸ್ಥಾನದಲ್ಲಿದೆ. ಆದರೆ ಆಭರತ ಆಟಗಾಋರು ಟೆಸ್ಟ್ ರಾಂಕಿಂಗ್‌ನಲ್ಲಿ ಹಿಂದೇಟು ಹಾಕಿದ್ಧಾರೆ. ವಿಋಆಟ್ ಕೊಹ್ಲಿ ಒಬ್ಬರನ್ನು ಹೊರತು ಪಡಿಸಿ ಇನ್ನುಳಿದ ಭಾರತದ ಯಾವುದೆ ಆಟಗಾರರು ಅಗ್ರ ಹತ್ತರಲ್ಲಿ ಕಾಣಿಸಿಕೊಂಡಿಲ್ಲ.
ICC test batting ranking : 2023ರಲ್ಲಿ ಭಾರತ ತಂಡದ ಆಟಗಾರರು ಅತ್ಯಧ್ಬುತ ಪ್ರದರ್ಶನವನ್ನು ನೀಡಿದ್ಧಾರೆ. ಟಿ20 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಭಾರತೀಯ ಆಟಗಾರರದ್ದೆ ಮೇಲು-ಗೈ. ಟೆಸ್ಟ್ ಪಂದ್ಯದಲ್ಲೂ ಭಾರತ ತಂಡ ಉತ್ತಮ ಪ್ರದರ್ಶನವನ್ನು ನೀಡಿದೆ. ಆದರೆ ಟಾಪ್ 10 ಟೆಸ್ಟ್ ರಾಂಕಿಂಗ್‌ನಲ್ಲಿ ಭಾರತ ಒಬ್ಬ ಆಟಗಾರನ್ನು ಹೊರತು ಪಡಿಸಿದರೆ ಯಾವುದೇ ಆಟಗಾರನಿಗೂ ಸ್ಥಾನ ದೊರೆತಿಲ್ಲ.
ಟಿ20 ರಾಂಕಿಗ್‌ನಲ್ಲಿ ಸೂರ್ಯಾಕುಮಾರ್ ಯಾದವ್ ಹಾಗೂ ಯುವ ಆಟಗಾರ ರುತುರಾಜ್ ಗಾಯಕ್ವಾಡ್, ಇಬ್ಬರು ಆಟಗಾರರು ಟಾಪ್ 10ನಲ್ಲಿ ಸ್ಥಾನ ಪಡೆದಿದ್ಧಾರೆ. ಸೂರ್ಯಕುಮಾರ್ 887 ಅಂಕಗಳಿಂದ ಅಗ್ರ 1 ನೇ ಸ್ಥಾನದಲ್ಲಿದ್ದರೆ. ರುತುರಾಜ್ 8ನೇ ಸ್ಥಾನವನ್ನು ಅಲಂಕರಿಸಿದ್ಧಾರೆ.
ಇದನ್ನು ಓದಿ-ಟೆಸ್ಟ್ ಕ್ರಿಕೆಟ್ ಸಂಕಷ್ಟಕ್ಕೆ ಸಿಲುಕಿದೆ, ಇದಕ್ಕೆ ಟಿ20 ಕ್ರಿಕೆಟ್ ಕಾರಣ ! ಎಬಿ ಡಿ ವಿಲಿಯರ್ಸ್...
ಇನ್ನು ಏಕದಿನದಲ್ಲಿ ಕ್ರಿಕೆಟ್‌ನಲ್ಲಿ ಭಾರತದ ಮೂವರು ಆಟಗಾರರು ಮುಂಚೂಣಿಯಲ್ಲಿದ್ಧಾರೆ. ಶುಭ್ಮನ್ ಗಿಲ್ 801 ಅಂಕಗಳಿಂದ 2 ನೇ ರಾಂಕಿಗ್‌ನಲ್ಲಿದ್ದರೆ, ವಿರಾಟ್ ಕೊಹ್ಲಿ 768 ಅಂಕಗಳಿಂದ 3ನೇ ಸ್ತಾನವನ್ನು ಮತ್ತು ರೋಹಿತ್ ನಂತರದ ಸ್ಥಾನವನ್ನು ತುಂಬಿದ್ಧಾರೆ.
ಆದರೆ ಟೆಸ್ಟ್ ರಾಂಕಿಗ್‌ನಲ್ಲಿ ಮಾತ್ರ ಭಾರತ ಆಟಗಾರ ಕೊರೆತೆ ಇರುವುದು ಎದ್ದು ಕಾಣುತ್ತಿದೆ. ಭಾರತ ತಂಡವು ಟೆಸ್ಟ್ ಮಾದರಿಯ ಕ್ರಿಕೆಟ್‌ನಲ್ಲಿ ಅಗ್ರ ಸ್ಥಾನವನ್ನು ಪಡೆದಿದ್ದರೂ, ಆಟಗಾರರಿಗೆ ಆ ಅವಕಾಶ ಗಿಟ್ಟಿಸಿಕೊಳ್ಳಲಾಗಲಿಲ್ಲ.
ಇದನ್ನು ಓದಿ-ಟೀಂ ಇಂಡಿಯಾಕೆ ಇನ್ನೊಂದು ಆಘಾತ! ಸೂರ್ಯಾಗೆ ಎದುರಾಯ್ತು ಹರ್ನಿಯಾ ಸಮಸ್ಯೆ .
ವಿರಾಟ್ ಕೊಹ್ಲಿಯನ್ನು ಹೊರತು ಪಡಿಸಿ ಯಾವುದೇ ಆಟಗಾರರು ಟಾಪ್ 10 ಟೆಸ್ಟ್‌ನ ರಾಂಕಿಂಗ್ ಕಂಡುಬಂದಿಲ್ಲ. ಅಗ್ರ ಹತ್ತರಲ್ಲಿ ಭಾರತದ ಪರ ವಿರಾಟ್ ಒಬ್ಬರೆ ಸ್ಥಾನ ಪಡೆದ ಆಟಗಾರ ಆಗಿದ್ಧಾರೆ. ವಿರಾಟ್ 761 ಅಂಕಗಳಿಂದ 9ನೇ ಸ್ಥಾನದಲ್ಲಿದ್ದಾರೆ. ಇವರನ್ನು ಹೊರತು ಪಡಿಸಿದರೆ, ಕಾರು ಅಪಘಾತಕ್ಕೆ ಈಡಾಗಿ ತಂಡದಿಂದ ಹೊರಗುಳಿದಿರುವ ರಿಷಭ್ 12 ನೇ ಸ್ಥಾನದಲ್ಲಿದಾರೆ.
ಟೆಸ್ಟ್ ರಾಂಕಿಂಗ್ ಅಗ್ರ 10ರ ಪಟ್ಟಿ :
ಹೆಸರು ಅಂಕ
1.ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್) - 864
2.ಜೋ ರೂಟ್ (ಇಂಗಲೆಂಡ್) - 859
3.ಸ್ಟೀವನ್ ಸ್ಮಿತ್ (ಆಸ್ಟ್ರೇಲಿಯಾ) - 820
4.ಡೇರಿಲ್ ಮಿಚೆಲ್ ( ನ್ಯೂಜಿಲೆಂಡ್) - 786
5.ಉಸ್ಮನ್ ಖವಾಜ (ಆಸ್ಟ್ರೇಲಿಯಾ) - 785
6.ಬಾಬರ್ ಆಜಂ (ಪಾಕಿಸ್ತಾನ) - 782
7.ಮಾರ್ನಸ್ ಲ್ಯಾಬುಸ್ಚಾಗ್ನೆ (ಆಸ್ಟ್ರೇಲಿಯಾ) - 777
8.ಹ್ಯಾರಿ ಬ್ರೂಕ್ (ಇಂಗ್ಲೆಂಡ್) - 773
9.ವಿರಾಟ್ ಕೊಹ್ಲಿ (ಭಾರತ) - 761
10.ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ) - 754
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.