ಬೆಂಗಳೂರು : ಆರಂಭದಿಂದಲೂ ಐಪಿಎಲ್ ತಂಡ ಆರ್‌ಸಿಬಿಯ ಅವಿಭಾಜ್ಯ ಅಂಗವಾಗಿರುವ ವಿರಾಟ್ ಕೊಹ್ಲಿ, ಸಧ್ಯ ಆರಂಭಗಳಿರುವ 15ನೇ ಸೀಸನ್ ಆಡಲು ಟೀಂ ಸೇರಿಕೊಳ್ಳಲಿದ್ದಾರೆ. ಅದು ಮೂರು ದಿನಗಳ ಕಡ್ಡಾಯ ಕ್ವಾರಂಟೈನ್ ಮುಗಿದ ನಂತರ ತಂಡ ಸೇರಿಕೊಳ್ಳಲಿದ್ದಾರೆ. 


COMMERCIAL BREAK
SCROLL TO CONTINUE READING

ಆರ್‌ಸಿಬಿ ಅಭಿಮಾನಿಗಳು(RCB Fans) ಕಳೆದ ಕೆಲವು ದಿನಗಳಿಂದ ಈ ಸುದ್ದಿಗಾಗಿ ಕಾತುರದಿಂದ ಕಾಯುತ್ತಿದ್ದರು, ಏಕೆಂದರೆ ತಂಡದ ಇತರ ಎಲ್ಲಾ ಆಟಗಾರರು ಈಗಾಗಲೇ ತರಬೇತಿ ಶಿಬಿರಕ್ಕೆ ಸೇರಿಕೊಂಡಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ಮೆಗಾ  ಹರಾಜಿನ ಮೊದಲು ವಿರಾಟ್ ಕೊಹ್ಲಿಯನ್ನು ಆರ್‌ಸಿಬಿ ಫ್ರಾಂಚೈಸಿ 15 ಕೋಟಿಗೆ ಉಳಿಸಿಕೊಂಡಿದೆ. ಈ ಬಹು ನಿರೀಕ್ಷಿತ ಸುದ್ದಿಯನ್ನು ಆರ್‌ಸಿಬಿ ಸೋಮವಾರ ಟ್ವೀಟ್ ಮೂಲಕ ಮಾಹಿತಿ ನೀಡಿದೆ. 


IPL 2022: ಐಪಿಎಲ್‌ನಲ್ಲಿ ಮತ್ತೆ ಪ್ರಸಿದ್ಧ ಮಹಿಳಾ ಆ್ಯಂಕರ್‌ ಎಂಟ್ರಿ


ವಿರಾಟ್ ಕೊಹ್ಲಿ(Virat Kohli) ಸತತ ಎಂಟು ಸೀಸನ್ ಗಳಲ್ಲಿ ಆರ್‌ಸಿಬಿಗೆ ನಾಯಕತ್ವ ವಹಿಸಿದ್ದರು. ಆದ್ರೆ, ಈ 15ನೇ ಸೀಸನ್ ಆರಂಭದ ಮೊದಲು ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದರು. ಈಗ ಇವರ ಸ್ಥಾನವನ್ನು ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ತುಂಬಿದ್ದಾರೆ. ಹಾಗಾಗಿ ಕೊಹ್ಲಿ ಬ್ಯಾಟ್ಸಮನ್ ಆಗಿ ಆಡಲಿದ್ದಾರೆ. ವಿರಾಟ್ ಕೊಹ್ಲಿ 'Renewed Energy' ಮತ್ತು ಹೊಸ ಆರ್‌ಸಿಬಿ ನಾಯಕನೊಂದಿಗಿನ ಅವರ ಬಾಂಧವ್ಯದ ಕುರಿತು ಮಾತನಾಡುತ್ತಿರುವ ವೀಡಿಯೊವನ್ನು ಆರ್‌ಸಿಬಿ ಟ್ವೀಟ್ ಮಾಡಿದೆ.


AB de Villers and Glenn Maxell) ನಂತಹ ಆಟಗಾರರನ್ನು ಹೊಂದಿದ್ದರೂ ಆರ್‌ಸಿಬಿ ಇಲ್ಲಿಯವರೆಗೂ ಒಂದು ಭಾರಿಯೂ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ, ಅವರು ಇಲ್ಲಿಯವರೆಗೆ ಮೂರು ಐಪಿಎಲ್ ಫೈನಲ್‌ ತಲುಪಿದೆ. ಆದರೆ ಮ್ಯಾಚ್ ಮದ್ರ ಗೆದ್ದಿಲ್ಲ. ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 5 ಐಪಿಎಲ್ ಶತಕಗಳೊಂದಿಗೆ 129.94 ಸ್ಟ್ರೈಕ್ ರೇಟ್‌ನಲ್ಲಿ 207 ಇನ್ನಿಂಗ್ಸ್‌ಗಳಿಗೆ 37.39 ಸರಾಸರಿಯಲ್ಲಿ 6283 ರನ್ ಗಳಿಸುವ ಮೂಲಕ ಐಪಿಎಲ್‌ನಲ್ಲಿ ಪ್ರಮುಖ ರನ್ ಸ್ಕೋರರ್ ಆಗಿದ್ದಾರೆ. ಐಪಿಎಲ್ 2022 ರಲ್ಲಿ ಆರ್‌ಸಿಬಿ ಮಾರ್ಚ್ 27 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಪ್ರಾರಂಭಿಸಲಿದೆ.


ಇದನ್ನೂ ಓದಿ : Women World Cup 2022: ಸುದೀರ್ಘ 13 ವರ್ಷಗಳ ಬಳಿಕ ವಿಶ್ವಕಪ್ ನಲ್ಲಿ ಗೆಲುವು ಸಾಧಿಸಿದ ಪಾಕ್ ತಂಡ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.