IPL 2022 : 11 ವರ್ಷಗಳ ನಂತರ ಐಪಿಎಲ್‌ಗೆ ಮರಳಿದ ಈ ಸ್ಫೋಟಕ ಬ್ಯಾಟ್ಸ್‌ಮನ್!

ಈ ವರ್ಷದ ಐಪಿಎಲ್‌ನಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಮತ್ತೆ ಎಂಟ್ರಿ ನೀಡುತ್ತಿದ್ದಾನೆ. ಈ ಆಟಗಾರ 11 ವರ್ಷಗಳ ಬಳಿಕ ಈ ಲೀಗ್‌ಗೆ ಮರಳಲು ಸಿದ್ಧರಾಗಿದ್ದಾರೆ.

Written by - Channabasava A Kashinakunti | Last Updated : Mar 21, 2022, 08:04 PM IST
  • IPL 2022 ಗೆ ಈ ಬ್ಯಾಟ್ಸ್‌ಮನ್‌ ಪುನರಾಗಮನ
  • 11 ವರ್ಷಗಳ ನಂತರ ಬಿಗ್ ಲೀಗ್ ಎಂಟ್ರಿ
  • ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ
IPL 2022 : 11 ವರ್ಷಗಳ ನಂತರ ಐಪಿಎಲ್‌ಗೆ ಮರಳಿದ ಈ ಸ್ಫೋಟಕ ಬ್ಯಾಟ್ಸ್‌ಮನ್! title=

ನವದೆಹಲಿ : ಐಪಿಎಲ್ 15ನೇ ಸೀಸನ್ ಇದೇ ತಿಂಗಳ 26ರಿಂದ ಆರಂಭವಾಗಲಿದೆ. ಐಪಿಎಲ್ 2022 ತುಂಬಾ ಆಕರ್ಷಕವಾಗಲಿದೆ ಏಕೆಂದರೆ ಈ ವರ್ಷ 10 ತಂಡಗಳು ಭಾಗವಹಿಸಲಿವೆ. ಈ ವರ್ಷದ ಐಪಿಎಲ್‌ನಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಮತ್ತೆ ಎಂಟ್ರಿ ನೀಡುತ್ತಿದ್ದಾನೆ. ಈ ಆಟಗಾರ 11 ವರ್ಷಗಳ ಬಳಿಕ ಈ ಲೀಗ್‌ಗೆ ಮರಳಲು ಸಿದ್ಧರಾಗಿದ್ದಾರೆ.

11 ವರ್ಷಗಳ ನಂತರ ಐಪಿಎಲ್ ಗೆ ರಿಎಂಟ್ರಿ

ಹೌದು, ಐಪಿಎಲ್‌ನಲ್ಲಿ ಈ ಆಟಗಾರನ ಪುನರಾಗಮನ 11 ವರ್ಷಗಳೆ ಬೇಕಾಯಿತು. ಈ ಆಟಗಾರ ಬೇರೆ ಯಾರೂ ಅಲ್ಲ ಆಸ್ಟ್ರೇಲಿಯಾದ ಮಾರಕ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್(Matthew Wade). ವೇಡ್ ಈ ವರ್ಷ ಗುಜರಾತ್ ಟೈಟಾನ್ಸ್ ಪರ ಆಡಲಿದ್ದಾರೆ. ವೇಡ್ ಕೊನೆಯ ಬಾರಿಗೆ ಐಪಿಎಲ್‌ನಲ್ಲಿ ಆಡಿದ್ದು 2011 ರಲ್ಲಿ. ಆ ಸೀಸನ್ ಅವರಿಗೆ ಹೆಚ್ಚು ವಿಶೇಷವಾಗಿರಲಿಲ್ಲ ಮತ್ತು ಅವರು ಕೇವಲ 3 ಪಂದ್ಯಗಳನ್ನು ಆಡಿದ್ದರು. ಈ ವೇಳೆ ಅವರು 22 ರನ್ ಗಳಿಸಿದರು. ಆದರೆ ಈಗ ವೇಡ್ ಮೊದಲಿನ ಬ್ಯಾಟ್ಸ್‌ಮನ್ ಆಗಿಲ್ಲ. ವೇಡ್ ಈಗಾಗಲೇ ತುಂಬಾ ಡೆಂಜರ್ ಆಗಿದ್ದರೆ. ಅಲ್ಲದೆ,ಇತ್ತೀಚೆಗೆ ಆಸ್ಟ್ರೇಲಿಯಾವನ್ನು T20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಇದನ್ನೂ ಓದಿ : Team India : ಸ್ನೇಹಿತನಿಂದ ಶತ್ರುವಾದ ಟೀಂ ಇಂಡಿಯಾದ ಈ 3 ಸ್ಟಾರ್ ಆಟಗಾರರು!

ಕೋಟ್ಯಂತರ ರೂ.ಗೆ ಖರೀದಿಸಿದ ಗುಜರಾತ್ 

ಈ ಬಾರಿಯ ಮೆಗಾ ಹರಾಜಿನಲ್ಲಿ ಮ್ಯಾಥ್ಯೂ ವೇಡ್ ಗೆ ಸಾಕಷ್ಟು ಬೇಡಿಕೆ ಬಂದಿದ್ದು, ಗುಜರಾತ್ ಟೈಟಾನ್ಸ್(Gujarat Titans) 2 ಕೋಟಿ, 40 ಲಕ್ಷಕ್ಕೆ ಮ್ಯಾಥ್ಯೂ ವೇಡ್ ಅವರನ್ನು ತನ್ನ ಪಾಳೆಯಕ್ಕೆ ಸೇರಿಸಿಕೊಂಡಿದೆ. ಐಪಿಎಲ್‌ನ ಈ ಬಿಗ್ ಡೀಲ್ ಸಿಕ್ಕ ಕೂಡಲೇ ಮ್ಯಾಥ್ಯೂ ವೇಡ್ ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ಗೆ ವಿದಾಯ ಹೇಳಿದರು. ಮ್ಯಾಥ್ಯೂ ವೇಡ್ ಇಂಗ್ಲೆಂಡ್‌ನ ದೇಶೀಯ ಪಂದ್ಯಾವಳಿಯ ಕೌಂಟಿ ಕ್ರಿಕೆಟ್‌ನಲ್ಲಿ ವೋರ್ಸೆಸ್ಟರ್‌ಶೈರ್ ಕ್ಲಬ್‌ಗಾಗಿ ಆಡಿದರು. ಮ್ಯಾಥ್ಯೂ ವೇಡ್ ಐಪಿಎಲ್‌ನಲ್ಲಿ ಎರಡನೇ ಬಾರಿಗೆ ಆಡಲಿದ್ದಾರೆ. ಇದಕ್ಕೂ ಮುನ್ನ ಅವರು 2011ರ ಐಪಿಎಲ್‌ನಲ್ಲಿ ಆಡಿದ್ದರು. ಮ್ಯಾಥ್ಯೂ ವೇಡ್ ನಂತರ ಡೆಲ್ಲಿ ಡೇರ್ ಡೆವಿಲ್ಸ್ ಪರ ಕ್ರಿಕೆಟ್ ಆಡಿದ್ದರು. ಆಗ ದೆಹಲಿಯ ನಾಯಕತ್ವ ವೀರೇಂದ್ರ ಸೆಹ್ವಾಗ್ ಕೈಯಲ್ಲಿತ್ತು.

IPL 2022 ಮತ್ತಷ್ಟು ರೋಚಕವಾಗಿರಲಿದೆ

ಈ ಬಾರಿ ಈ ಆಟಗಾರನನ್ನು ಹೊಸ ಐಪಿಎಲ್ ತಂಡ ಗುಜರಾತ್ ಟೈಟಾನ್ಸ್ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಈ ಬಾರಿ ಐಪಿಎಲ್(IPL) ನಲ್ಲಿ 10 ತಂಡಗಳು ಕಣಕ್ಕಿಳಿಯುವ ಮೂಲಕ ಸಂಭ್ರಮ ಇಮ್ಮಡಿಗೊಳಿಸಲಿದೆ. ಈ ತಂಡದ ನಾಯಕತ್ವ ಹಾರ್ದಿಕ್ ಪಾಂಡ್ಯ ಕೈಯಲ್ಲಿರಲಿದೆ. ಐಪಿಎಲ್ 2022 ರ ಸೀಸನ್ ಅನ್ನು ಭಾರತದಲ್ಲಿ ಮಾರ್ಚ್ 26 ರಿಂದ ಮಾತ್ರ ಆಡಬಹುದು. ಪಂದ್ಯಾವಳಿಯು ಮೇ ತಿಂಗಳ 29 ರವರೆಗೆ ನಡೆಯಲಿದೆ. ಮೊದಲ ಪಂದ್ಯ ಕಳೆದ ವರ್ಷದ ಚಾಂಪಿಯನ್ ಸಿಎಸ್ ಕೆ ಹಾಗೂ ಕೆಕೆಆರ್ ನಡುವೆ ನಡೆಯಲಿದೆ. 

ಇದನ್ನೂ ಓದಿ : Rohit Sharma: ಸಾರಾ ಬಗ್ಗೆ ರೋಹಿತ್ ಕೇಳಿದಾಗ ಈ ಉತ್ತರ ನೀಡಿದ ಅರ್ಜುನ್ ತೆಂಡೂಲ್ಕರ್!

ಪಾಕಿಸ್ತಾನದ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದ

ಮ್ಯಾಥ್ಯೂ ವೇಡ್(Matthew Wade) ಆಸ್ಟ್ರೇಲಿಯಾದ ಟಿ 20 ವಿಶ್ವ ಗೆಲುವಿನ ಪ್ರಮುಖ ಭಾಗವಾಗಿತ್ತು. ಪಾಕಿಸ್ತಾನ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ವೇಡ್ ಸತತ ಮೂರು ಸಿಕ್ಸರ್‌ಗಳನ್ನು ಬಾರಿಸಿ ಸೋತ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಗೆಲುವಿನತ್ತ ಮುನ್ನಡೆಸಿದರು. ವಾಸ್ತವವಾಗಿ ಆಸ್ಟ್ರೇಲಿಯಾ ಗೆಲುವಿಗೆ 30 ಎಸೆತಗಳಲ್ಲಿ 62 ರನ್‌ಗಳ ಅಗತ್ಯವಿತ್ತು. ಶಾಹೀನ್ ಶಾ ಆಫ್ರಿದಿ ಎಸೆದ 19ನೇ ಓವರ್‌ನಲ್ಲಿ ವೇಡ್ ಸತತ ಮೂರು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು. ಇದಾದ ಬಳಿಕ ಆಸ್ಟ್ರೇಲಿಯ ಅಂತಿಮ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ನಿರಾಯಾಸವಾಗಿ ಸೋಲಿಸಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News