Women World Cup 2022: ಸುದೀರ್ಘ 13 ವರ್ಷಗಳ ಬಳಿಕ ವಿಶ್ವಕಪ್ ನಲ್ಲಿ ಗೆಲುವು ಸಾಧಿಸಿದ ಪಾಕ್ ತಂಡ

ICC Women World Cup 2022 - ಮಹಿಳಾ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನ 8 ವಿಕೆಟ್‌ಗಳ ಜಯ ಸಾಧಿಸಿದೆ. ಇದು 13 ವರ್ಷಗಳಲ್ಲಿ ವಿಶ್ವಕಪ್ ಕ್ರಿಕೆಟ್ ನಲ್ಲಿ ಪಾಕಿಸ್ತಾನದ ಮೊದಲ ಗೆಲುವಾಗಿದೆ. ಈ ಗೆಲುವಿನಿಂದ ಭಾರತೀಯ ಮಹಿಳಾ ತಂಡಕ್ಕೂ (Team India) ಲಾಭವಾಗಿದೆ.  

Written by - Nitin Tabib | Last Updated : Mar 21, 2022, 10:37 PM IST
  • ಪಾಕ್ ಮಹಿಳಾ ಕ್ರಿಕೆಟ್ ತಂಡದ ಸಾಧನೆ
  • ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದ ಪಾಕ್
  • ಭಾರತೀಯ ತಂಡಕ್ಕೂ ಕೂಡ ಇದರಿಂದ ಲಾಭ
Women World Cup 2022: ಸುದೀರ್ಘ 13 ವರ್ಷಗಳ ಬಳಿಕ ವಿಶ್ವಕಪ್ ನಲ್ಲಿ ಗೆಲುವು ಸಾಧಿಸಿದ ಪಾಕ್ ತಂಡ title=
Women World Cup 2022

ನವದೆಹಲಿ: Pak Vs WI - ಅನುಭವಿ ಆಫ್ ಸ್ಪಿನ್ನರ್ ನಿದಾ ದಾರ್ ಅವರ ಅದ್ಭುತ ಬೌಲಿಂಗ್ ಮತ್ತು ಆರಂಭಿಕ ಆಟಗಾರ್ತಿ ಮುನೀಬಾ ಅಲಿ ಅವರ ಉಪಯುಕ್ತ ಇನ್ನಿಂಗ್ಸ್‌ನಿಂದಾಗಿ ಸೋಮವಾರ ಇಲ್ಲಿ ನಡೆದ ಪಂದ್ಯದಲ್ಲಿ ಪಾಕ್ ಮಹಿಳಾ ತಂಡ (Pakistan Women Team)  ವೆಸ್ಟ್ ಇಂಡೀಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿದೆ. ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಸತತ 18 ಸೋಲಿನ ಬಳಿಕ ಸಾಧಿಸಿದ ಮೊದಲ ಜಯ ಇದಾಗಿದೆ. ಮಳೆ ಮತ್ತು ಒದ್ದೆಯಾದ ಔಟ್‌ಫೀಲ್ಡ್‌ನಿಂದಾಗಿ ಪಂದ್ಯವನ್ನು 20-20 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಪಾಕಿಸ್ತಾನದ ಈ ಗೆಲುವಿನಿಂದ ಭಾರತ ಮಹಿಳಾ ತಂಡದ ಸೆಮಿಫೈನಲ್ ಆಸೆ ಚಿಗುರಿದಂತಾಗಿದೆ.

ಇದನ್ನೂ ಓದಿ-IPL 2022 : 11 ವರ್ಷಗಳ ನಂತರ ಐಪಿಎಲ್‌ಗೆ ಮರಳಿದ ಈ ಸ್ಫೋಟಕ ಬ್ಯಾಟ್ಸ್‌ಮನ್!

13 ವರ್ಷಗಳ ನಂತರ ಪಾಕಿಸ್ತಾನ ಗೆಲುವು ಸಾಧಿಸಿದೆ (Cricket News)
ಇದಕ್ಕೂ ಮೊದಲು ಟಾಸ್ ಗೆದ್ದ ಪಾಕಿಸ್ತಾನ ತಂಡ, ವೆಸ್ಟ್ ಇಂಡೀಸ್ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿತ್ತು ಮತ್ತು ವೆಸ್ಟ್ ಇಂಡೀಸ್ ತಂಡ ಏಳು ವಿಕೆಟ್‌ಗೆ 89 ರನ್ ಗಳಿಸಲಷ್ಟೇ ಶಕ್ತವಾಯಿತು. ಪಾಕಿಸ್ತಾನ 18.5 ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 90 ರನ್ ಗಳಿಸುವ ಮೂಲಕ ಪಾಯಿಂಟ್‌ಗಳ ಪಟ್ಟಿಯಲ್ಲಿ ತನ್ನ ಖಾತೆಯನ್ನು ತೆರೆದಿದೆ. 2009ರ ನಂತರ ಮಹಿಳಾ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಮೊದಲ ಗೆಲುವು ಇದಾಗಿದೆ. ಆರು ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್‌ಗೆ ಇದು ಮೂರನೇ ಸೋಲಾಗಿದ್ದರೂ ಕೂಡ ಆರು ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಇನ್ನೂ ಮೂರನೇ ಸ್ಥಾನದಲ್ಲಿದೆ. ಸತತ ನಾಲ್ಕು ಸೋಲಿನ ಬಳಿಕ ಪಾಕಿಸ್ತಾನ ತನ್ನ ಮೊದಲ ಗೆಲುವು ದಾಖಲಿಸಿದೆ. ಆದರೂ ಕೂಡ, ಅದು ಇನ್ನೂ ಎಂಟನೇ ಮತ್ತು ಕೊನೆಯ ಸ್ಥಾನದಲ್ಲಿದೆ.

ಇದನ್ನೂ ಓದಿ-Team India : ಸ್ನೇಹಿತನಿಂದ ಶತ್ರುವಾದ ಟೀಂ ಇಂಡಿಯಾದ ಈ 3 ಸ್ಟಾರ್ ಆಟಗಾರರು!

ಪಾಕಿಸ್ತಾನದ ಹಿಂದಿನ ದಾಖಲೆಯನ್ನು ಗಮನಿಸಿದಾಗ, ವೆಸ್ಟ್ ಇಂಡೀಸ್ ಈ ಪಂದ್ಯವನ್ನು ಸುಲಭವಾಗಿ ಗೆಲ್ಲುವ ಮೂಲಕ ಸೆಮಿ-ಫೈನಲ್‌ ಪ್ರವೇಶಿಸಬಹುದು ಎಂದು ನಿರೀಕ್ಷಿಸಲಾಗಿತ್ತು, ಆದರೆ, ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್‌ಗಳು  ರನ್ ಗಳಿಸುವ ತವಕದಲ್ಲಿ ನಿರಂತರವಾಗಿ ತಮ್ಮ ವಿಕೆಟ್‌ಗಳನ್ನು ಕಳೆದುಕೊಂಡರು,  ಪಾಕಿಸ್ತಾನದ ಪರ 35 ವರ್ಷದ ನಿದಾ ದಾರ್, ನಾಲ್ಕು ಓವರ್‌ಗಳಲ್ಲಿ 10 ರನ್‌ ನೀಡಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ನಿಶ್ಚಿತವಾಗಿ ನಿದಾ ಅವರೇ ಈ ಪಂದ್ಯದ ಗೆಲುವಿನ ರೂವಾರಿ ಎಂದರೆ ತಪ್ಪಾಗಲಾರದು.

ಇದನ್ನೂ ಓದಿ-Rohit Sharma: ಸಾರಾ ಬಗ್ಗೆ ರೋಹಿತ್ ಕೇಳಿದಾಗ ಈ ಉತ್ತರ ನೀಡಿದ ಅರ್ಜುನ್ ತೆಂಡೂಲ್ಕರ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News