ನವದೆಹಲಿ: ಭಾರತದ ನಾಯಕ ವಿರಾಟ್ ಕೊಹ್ಲಿ ಈಗ ಐಸಿಸಿಯಿಂದ ಅಮಾನತುಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ಈ ಸಾರಿ ಕೊಹ್ಲಿ  ಅವರು 1 ಟೆಸ್ಟ್ ಅಥವಾ ಎರಡು ಏಕದಿನ ಅಥವಾ ಎರಡು ಟಿ 20 ಐಗಳಿಗೆ ಕಾರಣವಾಗುವ ನಿಷೇಧವನ್ನು ಎದುರಿಸಬೇಕಾಗುತ್ತದೆ ಎನ್ನಲಾಗಿದೆ. 


ಇತ್ತೀಚಿಗೆ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಮೂರನೇ ಟಿ 20 ಪಂದ್ಯದ ಸಮಯದಲ್ಲಿ ಐಸಿಸಿ ನೀತಿ ಸಂಹಿತೆಯ ಹಂತ 1 ಅನ್ನು ಉಲ್ಲಂಘಿಸಿದ ನಂತರ ಅವರಿಗೆ ಅವಗುಣ ಅಂಕವನ್ನು ನೀಡಲಾಯಿತು. ಐಸಿಸಿ ನಿಯಮದ ಪ್ರಕಾರ 24 ತಿಂಗಳ ಅವಧಿಯಲ್ಲಿ ನಾಲ್ಕು ಅವಗುಣ ಅಂಕಗಳನ್ನು ಪಡೆದಲ್ಲಿ ಅಂತವರನ್ನು ಅಮಾನತುಗೊಳಿಸುವ ಅಂಕಗಳಾಗಿ ಪರಿವರ್ತಿಸಲಾಗುತ್ತದೆ. ಎರಡು ಅಮಾನತು ಅಂಕಗಳನ್ನು ಪಡೆದಲ್ಲಿ ಆಗ ಅವರನ್ನು ನಿಷೇಧಿಸಲಾಗುತ್ತದೆ.  


ಈಗ ವಿರಾಟ್ ಕೊಹ್ಲಿ 2020 ರ ಫೆಬ್ರವರಿಯ ಮೊದಲು ಮತ್ತೊಮ್ಮೆ ನೀತಿ ಸಂಹಿತೆಯನ್ನು ಉಲ್ಲಂಘಿಸಿದರೆ, ನಂತರ ಅವರಿಗೆ ಅಮಾನತುಗೊಳಿಸುವ ಹಂತಕ್ಕೆ  ಹಸ್ತಾಂತರಿಸಲಾಗುವುದು, ಈಗಾಗಲೇ ಅವರು ಮೂರು ಅಂಕಗಳನ್ನು ಪಡೆದಿದ್ದಾರೆ. ಈಗ ಅವರ ದಾಖಲೆಯಲ್ಲಿ ಅಮಾನತುಗೊಳಿಸುವ ಹಂತವನ್ನು ತಪ್ಪಿಸಲು ಮುಂದಿನ ನಾಲ್ಕು ತಿಂಗಳು ಅವರು ಜಾಗರೂಕರಾಗಿರಬೇಕು.


ವಿರಾಟ್ ಕೊಹ್ಲಿ ಅಕ್ಟೋಬರ್ 2 ರಿಂದ ವೈಜಾಗ್‌ನಲ್ಲಿ ಪ್ರಾರಂಭವಾಗುವ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದ್ದಾರೆ. ಅದರ ನಂತರ ನವೆಂಬರ್‌ನಲ್ಲಿ ಬಾಂಗ್ಲಾದೇಶ ಪ್ರವಾಸದಲ್ಲಿ ಮತ್ತು ಜನವರಿಯಲ್ಲಿ ಜಿಂಬಾಬ್ವೆ ಮತ್ತು ಆಸ್ಟ್ರೇಲಿಯಾ ವಿರುದ್ಧದ ತವರು ಸರಣಿಯಲ್ಲಿಯೂ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.