ಟೆಸ್ಟ್ ಪಂದ್ಯಕ್ಕೂ ಮುನ್ನ ತವರಿಗೆ ಮರಳಿದ `ವಿರಾಟ್ ಕೋಹ್ಲಿ`
IND vs SA Test :ಡಿಸೆಂಬರ್ 26ರಂದು ಭಾರತ ಮತ್ತು ದ. ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಪಂದ್ಯ ಆರಂಭಕೂ ಮುನ್ನ ವಿರಾಟ್ ಕೋಹ್ಲಿ ಮನೆಗೆ ತೆರಳಿದ್ದಾರೆ. ಹೆಚ್ಚುವರಿ ಆಟಗಾರ ರುತುರಾಜ್ ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಪಂದ್ಯದಿಂದ ಹೊರಗುಳಿಯಲಿದ್ದಾರೆ.
Virat Kohli :ಭಾರತ vs ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ಇದೇ ಡಿಸೆಂಬರ್ 26ರಿಂದ ಆರಂಭಗೊಳ್ಳಲಿದೆ. ಸೆಂಚೂರಿಯನ್ ಮೈದಾನದಲ್ಲಿ ನಡೆಯುವ ಈ ಪಂದ್ಯಕ್ಕೆ ಎರಡು ತಂಡಗಳು ಪೂರ್ವತಯಾರಿ ನಡೆಸುತ್ತಿವೆ. ದ.ಆಫ್ರಿಕಾದ ನೆಲದಲ್ಲಿ ಟೆಸ್ಟ್ ಸರಣಿ ಆಡಲು ತೆರಳಿದ್ದ ಟೀಂ ಇಂಡಿಯಾಕೆ ದೊಡ್ಡ ತಲೆನೂವು ಉಂಟಾಗಿದೆ. ತಂಡದ ಮೇನ್ ಪ್ಲೇಯರ್ ವಿರಾಟ್ ಕೊಹ್ಲಿಯವರು ತವರಿಗೆರ ಮರಳಿದ್ಧಾರೆ. ಕೌಟುಂಬಿಕ ತುರ್ತು ಪರಿಸ್ಥಿತಿಯಿಂದಾಗಿ ವಿರಾಟ್ ಮನೆಗೆ ತೆರಳಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ದಕ್ಷಿಣ ಆಫ್ರಿಕಾದ ವಿರುಧ್ದದ ಟೆಸ್ಟ್ ಸರಣಿ ಆಡುವ ಉದ್ಧೇಶದಿಂದ ವಿರಾಟ್ ಮತ್ತು ರೋಹಿತ್ ಶರ್ಮಾ ಇಬ್ಬರು ಟಿ20 ಮತ್ತು ಏಕದಿನ ಕ್ರಿಕೇಟ್ ನಿಂದ ಹೊರಗುಳಿದಿದ್ದರು. ಆದರೆ ಡಿಸೆಂಬರ್ 26ರಂದು ಮೊದಲ ಟೆಸ್ಟ್ ಪಂದ್ಯ ಆರಂಭವಾಗುವ ಮುನ್ನ ವಿರಾಟ್ ತವರಿಗೆ ತೆರಳಿದ್ಧಾರೆ. ಈ ಬಗ್ಗೆ ಇಂದು (ಶುಕ್ರವಾರ) ಬಿಸಿಸಿಐ ತಿಳಿಸಿದ್ದು, ವಿರಾಟ್ ಕೌಟುಂಬಿಕ ಸಮಸ್ಯೆಯಿಂದ ಮನೆಗೆ ತೆರಳಿದ್ಧಾರೆ, ಮೊದಲ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ವಾಪಾಸ್ ಆಗಲಿದ್ಧಾರೆ ಎಂದು ಹೇಳಿದೆ
ಇದನ್ನು ಓದಿ-.ಐಸಿಸಿಯ ಆರ್ಮ್‌ಬ್ಯಾಂಡ್ ಚಾರ್ಜ್‌ಗೆ ಸಿಧ್ದಾ! " ಉಸ್ಮಾನ್ ಖವಾಜಾ" ಹೇಳಿಕೆ
ವಿರಾಟ್ ಒಂದು ಕಡೆ ತವರಿಗೆ ವಾಪಾಸ್ ಆಗಿದ್ದರೆ ಇತ್ತಾ ರುತುರಾಜ್ ಗಾಯಕ್ವಾಡ್ ಗಾಯದ ಸಮಸ್ಯೆ ಇಂದ ಬಳಲುತ್ತಿದ್ದಾರೆ. ಹೆಚ್ಚುವರಿ ಬ್ಯಾಟ್‌ಮನ್ ಆಗಿದ್ಧ ರುತುರಾಜ್ ಗಾಯಕ್ವಾಡ್ ಬೆರಳು ಮುರಿತದ ಕಾರಣದಿಂದ ಎರಡು ಟೆಸ್ಟ್ ಸರಣಿಯನ್ನು ಹೊರಗುಳಿದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕ್ಯಾಚ್ ಹಿಡಿಯಲು ಹೋಗಿ ಗಾಯಕ್ವಾಡ್ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಉಂಗುರ ಬೆರಳಿನ ಮೂಳೆ ಮುರಿತದಿಂದ ರುತುರಾಜ್ ಗಾಯಕ್ವಾಡ್ ಎರಡು ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಇದನ್ನು ಓದಿ-.ಭಾರತಕ್ಕೆ ಅನೇಕ ಪದಕ ಗೆದ್ದುಕೊಟ್ಟ ಕುಸ್ತಿಪಟು "ಸಾಕ್ಷಿ ಮಲಿಕ್ " ನಿವೃತ್ತಿ ಘೋಷಣೆ !
ದಕ್ಷಿಣ ಆಫ್ರಿಕಾ ವಿರುದ್ದದ ಟಿ20 ಸರಣಿಯನ್ನು ಡ್ರಾದಲ್ಲಿ ಅಂತ್ಯಗೊಳಿಸಿದರೆ, ಏಕದಿನ ಪಂದ್ಯದಲ್ಲಿ 2-1 ಅಂತರಗಳಿಂದ ಸೃಣಿಯನ್ನು ಗೆದ್ದು ಭಾರತ ತಮ್ಮ ವಶಕ್ಕೆ ಪಡೆದಿತ್ತು, ಈ ದ.ಆಫ್ರಿಕಾ ವಿರುಧ್ದದ 2 ಪಂದ್ಯಗಳ ಟೆಸ್ಟ್ ಸರಣಿಗಳನ್ನು ಆಡಲು ಮುಂದಾಗಿದ್ದು ಇದು ಈ ವರ್ಷದ ಕೊನೆಯ ಪಂದ್ಯವಾಗಲಿದೆ. ಟೆಸ್ಟ್ ಸರಣಿ ಭಾರತ ತಮ್ಮ ವಶಕ್ಕೆ ಪಡೆದುಕೊಂಡರೆ ದಕ್ಷಿಣ ಆಫ್ರಿಕಾ ವಿರುಧ್ದ ಅವರ ನೆಲದಲ್ಲಿ ಎಲ್ಲಾ ಸರಣಿಯನ್ನು ಗೆದ್ದಂತ್ತಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.