Virat Kohli Running Speed: ಟೀಂ ಇಂಡಿಯಾದ ಸ್ಕೋರರ್ ವಿರಾಟ್ ಕೊಹ್ಲಿ ಕೇವಲ ಬ್ಯಾಟಿಂಗ್‌’ಗೆ ಮಾತ್ರವಲ್ಲದೆ ವಿಕೆಟ್‌ಗಳ ನಡುವೆ ವೇಗದ ಓಟಕ್ಕೂ ಹೆಸರುವಾಸಿಯಾಗಿದ್ದಾರೆ. ವಿರಾಟ್ ಕೊಹ್ಲಿಯನ್ನು ಕ್ರಿಕೆಟ್ ಜಗತ್ತಿನ ಫಿಟ್ ಆಟಗಾರರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಕ್ರೀಡೆಯ ಜೊತೆಗೆ ಫಿಟ್ನೆಸ್ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸುವ ಕೊಹ್ಲಿ, 22 ಯಾರ್ಡ್‌’ಗಳ ಪಿಚ್‌’ನಲ್ಲಿ ಎಷ್ಟು ವೇಗವಾಗಿ ಓಡುತ್ತಾರೆ ಎಂಬುದು ನಿಮಗೆ ತಿಳಿದಿದೆಯೇ? ಈ ಪ್ರಶ್ನೆಗೆ ಉತ್ತರ ತಿಳಿದರೆ ಶಾಕ್ ಆಗೋದು ಖಂಡಿತ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಏಷ್ಯಾಕಪ್ ಮಧ್ಯೆಯೇ ಜೂಜಾಡಿದ ಪಾಕಿಸ್ತಾನ ತಂಡದ ಇಬ್ಬರು ಪ್ರಮುಖ ಸದಸ್ಯರು! ಶಿಸ್ತುಕ್ರಮಕ್ಕೆ ICC ಹೆಜ್ಜೆ


ವಿರಾಟ್ ಕೊಹ್ಲಿ ಕೇವಲ ಬ್ಯಾಟಿಂಗ್ ಅಷ್ಟೇ ಅಲ್ಲ, ಅದ್ಭುತ ಫೀಲ್ಡರ್ ಕೂಡ ಹೌದು. ಇನ್ನು ಇವರು ರನ್ ಗಳಿಸುವಾಗ ವಿಕೆಟ್‌’ಗಳ ನಡುವೆ ಓಡುವ ವೇಗದ ಮಿತಿ ಎಷ್ಟೆಂದು ಗೊತ್ತೇ? ಫಿಟ್‌ನೆಸ್‌’ಗೆ ಉತ್ತಮ ಉದಾಹರಣೆಯಾಗಿರುವ ವಿರಾಟ್, 22 ಯಾರ್ಡ್‌’ಗಳ ಪಿಚ್‌’ನಲ್ಲಿ ಗಂಟೆಗೆ 31 ಕಿಲೋಮೀಟರ್ ವೇಗದಲ್ಲಿ ಓಡುತ್ತಾರೆ.


 2023ರ ಏಷ್ಯಾಕಪ್‌’ನ ಸೂಪರ್‌-4 ಪಂದ್ಯದಲ್ಲಿಯೂ ಕೂಡ ವಿರಾಟ್‌ ಪಾಕಿಸ್ತಾನದ ವಿರುದ್ಧ ಈ ವೇಗದಲ್ಲಿ ಓಡಿರುವುದು ಕಂಡುಬಂದಿದೆ.


ವಿರಾಟ್‌’ಗಿಂತ ಕಡಿಮೆಯಿಲ್ಲ ಎಂಎಸ್ ಧೋನಿ…


ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಕೂಡ 22 ಗಜಗಳ ಪಿಚ್‌’ನಲ್ಲಿ ಅತ್ಯಂತ ವೇಗವಾಗಿ ಓಡುತ್ತಾರೆ. 2017 ರಲ್ಲಿ, ಅವರ ವೇಗಕ್ಕೆ ಸಂಬಂಧಿಸಿದ ವೀಡಿಯೊ ಸಾಕಷ್ಟು ವೈರಲ್ ಆಗಿತ್ತು. ಗುವಾಹಟಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಪಂದ್ಯದ ವಿಡಿಯೋ ಇದಾಗಿದೆ. ಈ ಪಂದ್ಯದಲ್ಲಿ ಧೋನಿ ಗಂಟೆಗೆ 31 ಕಿಲೋಮೀಟರ್ ವೇಗದಲ್ಲಿ ಓಡಿರುವುದು ಕಂಡುಬಂದಿತ್ತು. 


ಇದನ್ನೂ ಓದಿ: ವಿರಾಟ್ ಕೊಹ್ಲಿಗೆ ಬೆಳ್ಳಿ ಬ್ಯಾಟ್ ಉಡುಗೊರೆ ನೀಡಿದ ಶ್ರೀಲಂಕಾ ಬ್ಯಾಟರ್! ಇದರ ಬೆಲೆ, ವಿಶೇಷತೆ ಏನು ಗೊತ್ತಾ?


ವಿರಾಟ್ ಕೊಹ್ಲಿ ಭರ್ಜರಿ ಶತಕ:


ಪಾಕಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 94 ಎಸೆತಗಳಲ್ಲಿ ಅಜೇಯ 122 ರನ್ ಗಳಿಸಿದ್ದರು. ವಿರಾಟ್ ಕೊಹ್ಲಿ ಅವರ ಸ್ಫೋಟಕ ಇನ್ನಿಂಗ್ಸ್‌’ನಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್‌’ಗಳು ಸೇರಿದ್ದವು. ವಿರಾಟ್ ಕೊಹ್ಲಿ ಹೊರತಾಗಿ ಕೆಎಲ್ ರಾಹುಲ್ ಕೂಡ 111 ರನ್ ಗಳ ಅಜೇಯ ಇನ್ನಿಂಗ್ಸ್ ಆಡಿದ್ದಾರೆ. ಈ ಇಬ್ಬರು ಆಟಗಾರರ ಬಲದ ಮೇಲೆ ಟೀಂ ಇಂಡಿಯಾ ಪಾಕಿಸ್ತಾನಕ್ಕೆ 357 ರನ್ ಗಳ ಗುರಿ ನೀಡಿದೆ. 6 ತಿಂಗಳ ನಂತರ ಟೀಂ ಇಂಡಿಯಾಕ್ಕೆ ವಾಪಸಾದ ಕೆಎಲ್ ರಾಹುಲ್ ಅದ್ಭುತ ಕಂಬ್ಯಾಕ್ ಮಾಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ