ಏಷ್ಯಾಕಪ್ ಮಧ್ಯೆಯೇ ಜೂಜಾಡಿದ ಪಾಕಿಸ್ತಾನ ತಂಡದ ಇಬ್ಬರು ಪ್ರಮುಖ ಸದಸ್ಯರು! ಶಿಸ್ತುಕ್ರಮಕ್ಕೆ ICC ಹೆಜ್ಜೆ

Pakistan Cricket Team controversy: ಮಳೆ ಮತ್ತು ಕೆಟ್ಟ ಹವಾಮಾನದ ಕಾರಣ ಈ ಪಂದ್ಯವನ್ನು ಸೆಪ್ಟೆಂಬರ್ 10 ರಂದು ಪೂರ್ಣಗೊಳಿಸಲಾಗದೆ, ಮೀಸಲು ದಿನದಂದು ಅಂದರೆ ಸೆಪ್ಟೆಂಬರ್ 11 ರಂದು ಮುಂದುವರೆಸಲಾಗುತ್ತಿದೆ

Written by - Bhavishya Shetty | Last Updated : Sep 11, 2023, 12:05 PM IST
    • ಪಾಕ್ ತಂಡಕ್ಕೆ ಸಂಬಂಧಿಸಿದ ಸುದ್ದಿಯೊಂದು ಬೆಳಕಿಗೆ ಬಂದಿದೆ.
    • ಕೊಲಂಬೊದಲ್ಲಿನ ಕ್ಯಾಸಿನೊಗೆ ಭೇಟಿ ನೀಡಿ ವಿವಾದಕ್ಕೆ ಒಳಗಾದ ಪಾಕ್ ಸದಸ್ಯರು
    • ಪಿಸಿಬಿ ಅಧಿಕಾರಿಗಳ ಅಪಕ್ವ ಮತ್ತು ಅಸಡ್ಡೆಯ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.
ಏಷ್ಯಾಕಪ್ ಮಧ್ಯೆಯೇ ಜೂಜಾಡಿದ ಪಾಕಿಸ್ತಾನ ತಂಡದ ಇಬ್ಬರು ಪ್ರಮುಖ ಸದಸ್ಯರು! ಶಿಸ್ತುಕ್ರಮಕ್ಕೆ ICC ಹೆಜ್ಜೆ title=
Pakistan Team Members Controversy

Controversy, India vs Pakistan: ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಸೂಪರ್-4 ಸುತ್ತಿನ ಪಂದ್ಯ ಕೊಲಂಬೊದಲ್ಲಿ ಮುಂದುವರಿದಿದೆ. ಮಳೆ ಮತ್ತು ಕೆಟ್ಟ ಹವಾಮಾನದ ಕಾರಣ ಈ ಪಂದ್ಯವನ್ನು ಸೆಪ್ಟೆಂಬರ್ 10 ರಂದು ಪೂರ್ಣಗೊಳಿಸಲಾಗದೆ, ಮೀಸಲು ದಿನದಂದು ಅಂದರೆ ಸೆಪ್ಟೆಂಬರ್ 11 ರಂದು ಮುಂದುವರೆಸಲಾಗುತ್ತಿದೆ. ಆದರೆ ಈ ಮಧ್ಯೆ ಪಾಕ್ ತಂಡಕ್ಕೆ ಸಂಬಂಧಿಸಿದ ಸುದ್ದಿಯೊಂದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: 1524 ದಿನಗಳ ನಂತರ ಟೀಂ ಇಂಡಿಯಾಗೆ ಎದುರಾಯ್ತು ಆ ಒಂದು ಸನ್ನಿವೇಶ…! ಹೆಚ್ಚಾಯ್ತು ಅಭಿಮಾನಿಗಳ ಎದೆಬಡಿತ

ಈ ಪಂದ್ಯದಲ್ಲಿ ಭಾರತ ತಂಡ ಮೊದಲ ದಿನ ಅಂದರೆ ಸೆ.10ರಂದು (ಆಟ ನಿಲ್ಲಿಸುವವರೆಗೆ) 2 ವಿಕೆಟ್‌’ಗೆ 147 ರನ್ ಗಳಿಸಿತ್ತು. ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಅರ್ಧಶತಕ ಗಳಿಸಿದ್ದರು. ಸ್ಪೋಟಕ ಆರಂಭ ನೀಡಿದ್ದ ಆರಂಭಿಕರು ಮೊದಲ ವಿಕೆಟ್‌’ಗೆ 121 ರನ್‌’ಗಳ ಆರಂಭಿಕ ಜೊತೆಯಾಟವನ್ನು ಆಡಿದ್ದರು. ರೋಹಿತ್ 49 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 56 ರನ್ ಗಳಿಸಿದ್ದರು. ಮತ್ತೊಂದೆಡೆ ಗಿಲ್ 52 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 58 ರನ್ ಸೇರಿಸಿದರು. ಇನ್ನು ವಿರಾಟ್ ಕೊಹ್ಲಿ (8 ರನ್) ಮತ್ತು ಕೆಎಲ್ ರಾಹುಲ್ (17 ರನ್) ಕ್ರೀಸ್‌’ನಲ್ಲಿದ್ದಾರೆ.

ಜೂಜಾಡಿದ ಪಾಕ್ ಸದಸ್ಯರು:

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಧ್ಯಮ ವ್ಯವಸ್ಥಾಪಕ ಉಮರ್ ಫಾರೂಕ್ ಕಲ್ಸನ್ ಮತ್ತು ಮಂಡಳಿಯ ಜನರಲ್ ಮ್ಯಾನೇಜರ್ (ಅಂತರರಾಷ್ಟ್ರೀಯ ಕ್ರಿಕೆಟ್) ಅದ್ನಾನ್ ಅಲಿ ಅವರು ಕೊಲಂಬೊದಲ್ಲಿನ ಕ್ಯಾಸಿನೊಗೆ ಭೇಟಿ ನೀಡಿ ವಿವಾದಕ್ಕೆ ಒಳಗಾಗಿದ್ದಾರೆ. ಇಬ್ಬರೂ ಏಷ್ಯಾಕಪ್‌’ನಲ್ಲಿ ಪಾಕಿಸ್ತಾನ ತಂಡದ ಜೊತೆಗಿದ್ದಾರೆ.

ಇದನ್ನೂ ಓದಿ: ವಿರಾಟ್ ಕೊಹ್ಲಿಗೆ ಬೆಳ್ಳಿ ಬ್ಯಾಟ್ ಉಡುಗೊರೆ ನೀಡಿದ ಶ್ರೀಲಂಕಾ ಬ್ಯಾಟರ್! ಇದರ ಬೆಲೆ, ವಿಶೇಷತೆ ಏನು?

ಪಾಕಿಸ್ತಾನದ ಹಲವು ಕ್ರಿಕೆಟ್ ಅಭಿಮಾನಿಗಳು ಈ ಬಗ್ಗೆ ಆಕ್ರೋಶ ಹೊರಹಾಕಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪಿಸಿಬಿ ಅಧಿಕಾರಿಗಳ ಅಪಕ್ವ ಮತ್ತು ಅಸಡ್ಡೆಯ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ. ಆದರೆ ಈ ವಿವಾದಕ್ಕೆ ಸ್ಪಷ್ಟನೆ ನೀಡಲು ಯತ್ನಿಸಿದ ಅಧಿಕಾರಿಗಳು, “ಊಟ ಮಾಡಲೆಂದು ಕ್ಯಾಸಿನೊಗೆ ಹೋಗಿದ್ದೆವು” ಎಂದು ಹೇಳಿದ್ದಾರೆ. ಇದೀಗ ಉನ್ನತ ಸಮಿತಿ ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News