Lytton Das stunning diving catch: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೂರು ಏಕದಿನ ಪಂದ್ಯಗಳ ಸರಣಿಯು ಇಂದಿನಿಂದ ಆರಂಭವಾಗಿದೆ. ಈ ಸರಣಿಯ ಮೊದಲ ಪಂದ್ಯ ಢಾಕಾದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಬಾಂಗ್ಲಾ ನಾಯಕ ಲಿಟ್ಟನ್ ದಾಸ್ ಅವರ ಅದ್ಭುತ ಕ್ಯಾಚ್ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. ಜೊತೆಗೆ ಕ್ರೀಸ್ ನಲ್ಲಿದ್ದ ವಿರಾಟ್ ಕೊಹ್ಲಿ ಸಂಪೂರ್ಣವಾಗಿ ಶಾಕ್ ಆಗಿದ್ದಾರೆ.


COMMERCIAL BREAK
SCROLL TO CONTINUE READING

ನ್ಯೂಜಿಲೆಂಡ್‌ನಲ್ಲಿ ನಡೆದ ಏಕದಿನ ಮತ್ತು T20I ಸರಣಿಯಲ್ಲಿ ಭಾಗವಹಿಸದ ವಿರಾಟ್ ಕೊಹ್ಲಿ ಇದೀಗ ಬಾಂಗ್ಲಾ ಸರಣಿಯ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದಾರೆ. ಮೆನ್ ಇನ್ ಬ್ಲೂ ತಂಡವು ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅವರ ವಿಕೆಟ್ ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೆ ಸಿಲುಕಿತು. ತ್ವರಿತವಾಗಿ ಎರಡು ವಿಕೆಟ್‌ಕಳೆದುಕೊಂಡಂತೆ, ವಿರಾಟ್ ಕೊಹ್ಲಿ ಮೇಲೆ ಅಭಿಮಾನಿಗಳು ಅಪಾರ ನಂಬಿಕೆ ಇಟ್ಟರು.


ಇದನ್ನೂ ಓದಿ: Babar Azam Record: ವಿರಾಟ್-ರೋಹಿತ್ ಜೊತೆಯಾಗಿ ಮಾಡಲಾಗದ್ದನ್ನು ಮಾಡಿ ಮತ್ತೊಂದು ದಾಖಲೆ ಬರೆದ ಬಾಬರ್ ಅಜಮ್!


ಕೊಹ್ಲಿ ಬೌಂಡರಿಯೊಂದಿಗೆ ತಮ್ಮ ಆಟ ಪ್ರಾರಂಭಿಸಿದರೂ ಕೂಡ ಅದನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. 11ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಶಕೀಬ್ ಅಲ್ ಹಸನ್‌ಗೆ ಔಟಾದರು. ಅದೇ ಓವರ್‌ನಲ್ಲಿ ರೋಹಿತ್ ಅವರ ವಿಕೆಟ್ ಕೂಡ ಉರುಳಿತ್ತು.


ಶಕೀಬ್ ಆಫ್-ಸ್ಟಂಪ್ ಮೂಲಕ ರೋಹಿತ್ ಶರ್ಮಾರನ್ನು ಔಟ್ ಮಾಡಿದರೆ, ಕೊಹ್ಲಿಯನ್ನು ಕ್ಯಾಚ್ ಔಟ್ ಆಗುವಂತೆ ಮಾಡಿದರು. ಆದರೆ ವಿರಾಟ್ ಕೊಹ್ಲಿ ಬ್ಯಾಟ್ ತಗುಲು ಮುಂದಕ್ಕೆ ಹೋದ ಚೆಂಡನ್ನು ಲಿಟ್ಟನ್ ದಾಸ್ ಕ್ಯಾಚ್ ಹಿಡಿರ ಶೈಲಿ ಎಲ್ಲರನ್ನು ಮಂತ್ರ ಮುಗ್ದರನ್ನಾಗಿಸಿದೆ.


ಮಿಂಚಿನಂತೆ ಹಾರಿ ಕ್ಷಣಾರ್ಧದಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಚೆಂಡನ್ನು ಕ್ಯಾಚ್ ಹಿಡಿದರು. 


Paige Spiranac: ಮೈದಾನದಲ್ಲಿಯೇ ಬಟ್ಟೆ ಬಿಚ್ಚಿ ರೊನಾಲ್ಡೋ ಗೆಲುವನ್ನು ಸಂಭ್ರಮಿಸಿದ ಆಟಗಾರ್ತಿ!!


ಕಳೆದ ತಿಂಗಳು, ಅವರು T20 ವಿಶ್ವಕಪ್ 2022 ರಲ್ಲಿ ಭಾರತದ ವಿರುದ್ಧ 27 ಎಸೆತಗಳಲ್ಲಿ 60 ರನ್ ಗಳಿಸಿದರು. ಆದರೆ ಅವರ ಪ್ರಯತ್ನಗಳು ವ್ಯರ್ಥವಾಗಿ, ಬಾಂಗ್ಲಾದೇಶ ಐದು ರನ್‌ಗಳಿಂದ ಪಂದ್ಯವನ್ನು ಕಳೆದುಕೊಂಡಿತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.