Babar Azam Record: ವಿರಾಟ್-ರೋಹಿತ್ ಜೊತೆಯಾಗಿ ಮಾಡಲಾಗದ್ದನ್ನು ಮಾಡಿ ಮತ್ತೊಂದು ದಾಖಲೆ ಬರೆದ ಬಾಬರ್ ಅಜಮ್!

Babar Azam New Record in Test Cricket: ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಬರ್ ಅಜಮ್ ಅದ್ಭುತ ಶತಕ ಗಳಿಸಿದ್ದಾರೆ. 168 ಎಸೆತಗಳಲ್ಲಿ 136 ರನ್‌ಗಳ ಇನಿಂಗ್ಸ್‌ ಆಡಿದ್ದಾರೆ. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಬಾಬರ್ ಔಟಾಗುವಾಗ ಪಾಕಿಸ್ತಾನದ ಸ್ಕೋರ್ 475 ರನ್‌ಗಳನ್ನು ತಲುಪಿತ್ತು. ಮೂರನೇ ದಿನದಾಟದ ಅಂತ್ಯಕ್ಕೆ ಪಾಕಿಸ್ತಾನ ಮೊದಲ ಇನಿಂಗ್ಸ್‌ನಲ್ಲಿ ಏಳು ವಿಕೆಟ್‌ಗೆ 499 ರನ್ ಗಳಿಸಿದೆ.

Written by - Bhavishya Shetty | Last Updated : Dec 4, 2022, 08:08 AM IST
    • ಬಾಬರ್ ಅಜಮ್ ಇಂದಿನ ಕ್ರಿಕೆಟ್ ಜಗತ್ತಿನ ಅಗ್ರ ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರು
    • ಬಾಬರ್ ಟೆಸ್ಟ್‌ ಕ್ರಿಕೆಟ್ ನಲ್ಲಿ ತಮ್ಮ ತಂಡವನ್ನು ಮುನ್ನಡೆಸುತ್ತಿದ್ದಾರೆ
    • ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿ ಫಾರ್ಮ್‌ಗೆ ಮರಳಿದ್ದಾರೆ
Babar Azam Record: ವಿರಾಟ್-ರೋಹಿತ್ ಜೊತೆಯಾಗಿ ಮಾಡಲಾಗದ್ದನ್ನು ಮಾಡಿ ಮತ್ತೊಂದು ದಾಖಲೆ ಬರೆದ ಬಾಬರ್ ಅಜಮ್!
Babar Azam

Babar Azam New Record in Test Cricket: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಇಂದಿನ ಕ್ರಿಕೆಟ್ ಜಗತ್ತಿನ ಅಗ್ರ ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರು. T20 ವಿಶ್ವಕಪ್ 2022 ರಲ್ಲಿ ವಿಶೇಷವಾದ ಏನನ್ನೂ ಮಾಡಲು ಸಾಧ್ಯವಾಗದಿದ್ದರೂ ಸಹ ತಂಡವನ್ನು ಫೈನಲ್‌ ಮುಟ್ಟಿಸುವಷ್ಟು ಶ್ರಮ ವಹಿಸಿದ್ದರು. ಇದೀಗ ಬಾಬರ್ ಟೆಸ್ಟ್‌ ಕ್ರಿಕೆಟ್ ನಲ್ಲಿ ತಮ್ಮ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿ ಫಾರ್ಮ್‌ಗೆ ಮರಳಿದ್ದಾರೆ. ರಾವಲ್ಪಿಂಡಿಯಲ್ಲಿ ಬಾರಿಸಿದ ಈ ಶತಕದ ನಂತರ ಬಾಬರ್ ಹೊಸ ದಾಖಲೆಯನ್ನು ಬರೆದಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ದಿಗ್ಗಜರು ಕೂಡ ಮಾಡಲಾಗದ ಕೆಲಸವನ್ನು ಈ ವರ್ಷ ಅವರು ಮಾಡಿದ್ದಾರೆ.

ಇದನ್ನೂ ಓದಿ: IND vs BAN: 7 ವರ್ಷಗಳ ಹಿಂದೆ ನಡೆದಿದ್ದ ಆ ಘಟನೆಯ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?

ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಬರ್ ಅಜಮ್ ಅದ್ಭುತ ಶತಕ ಗಳಿಸಿದ್ದಾರೆ. 168 ಎಸೆತಗಳಲ್ಲಿ 136 ರನ್‌ಗಳ ಇನಿಂಗ್ಸ್‌ ಆಡಿದ್ದಾರೆ. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಬಾಬರ್ ಔಟಾಗುವಾಗ ಪಾಕಿಸ್ತಾನದ ಸ್ಕೋರ್ 475 ರನ್‌ಗಳನ್ನು ತಲುಪಿತ್ತು. ಮೂರನೇ ದಿನದಾಟದ ಅಂತ್ಯಕ್ಕೆ ಪಾಕಿಸ್ತಾನ ಮೊದಲ ಇನಿಂಗ್ಸ್‌ನಲ್ಲಿ ಏಳು ವಿಕೆಟ್‌ಗೆ 499 ರನ್ ಗಳಿಸಿದೆ. ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 657 ರನ್‌ಗಳ ಬೃಹತ್ ಸ್ಕೋರ್ ಮಾಡಿತ್ತು. ಈ ಮೂಲಕ ಪಾಕಿಸ್ತಾನ ತಂಡ ಇನ್ನೂ 158 ರನ್ ಹಿನ್ನಡೆಯಲ್ಲಿದೆ. ಬಾಬರ್ ತಮ್ಮ ಟೆಸ್ಟ್ ವೃತ್ತಿಜೀವನದ 8 ನೇ ಶತಕವನ್ನು ಗಳಿಸಿದರು.

2022 ರಲ್ಲಿ, 28 ವರ್ಷದ ಬಾಬರ್ ಅಜಮ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಂದರೆ ಎಲ್ಲಾ ಮೂರು ಸ್ವರೂಪಗಳಲ್ಲಿ ತಮ್ಮ 7 ನೇ ಶತಕವನ್ನು ಬಾರಿಸಿದ್ದಾರೆ. ಈ ವರ್ಷ ಅವರಿಗಿಂತ ಹೆಚ್ಚಿನ ಶತಕಗಳನ್ನು ಯಾವುದೇ ಬ್ಯಾಟ್ಸ್‌ಮನ್ ಮಾಡಿಲ್ಲ. ಬಾಬರ್ ಅವರನ್ನು ವಿರಾಟ್ ಕೊಹ್ಲಿ ಮತ್ತು ಭಾರತದ ನಾಯಕ ರೋಹಿತ್ ಶರ್ಮಾಗೆ ಹೋಲಿಸಲಾಗುತ್ತಿದೆ.

ರೋಹಿತ್ ಈ ವರ್ಷ ಒಂದೇ ಒಂದು ಶತಕವನ್ನು ಗಳಿಸಲು ಸಾಧ್ಯವಾಗಲಿಲ್ಲ. ಇನ್ನು ವಿರಾಟ್ ಕೊಹ್ಲಿ ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಟಿ20 ಮಾದರಿಯಲ್ಲಿ ಶತಕವನ್ನು ಬಾರಿಸಿದ್ದಾರೆ. ಈ ಮೂಲಕ ಬಾಬರ್ ಶತಕಗಳ ಲೆಕ್ಕದಲ್ಲಿ ಭಾರತದ ಈ ಇಬ್ಬರು ಆಟಗಾರರು ಬಹಳ ಹಿಂದಿದ್ದಾರೆ. ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋವ್ ಒಟ್ಟು 6 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನದ ಇಮಾಮ್-ಉಲ್-ಹಕ್ ಮತ್ತು ಜೋ ರೂಟ್  ತಲಾ 5 ಶತಕಗಳೊಂದಿಗೆ ಜಂಟಿಯಾಗಿ ಮೂರನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ನಾಳೆ IND vs BAN ಮೊದಲ ಏಕದಿನ ಪಂದ್ಯ : ಟೀಂಗೆ ಮರಳಲಿದ್ದಾರೆ ಈ ಸ್ಪೋಟಕ ಬ್ಯಾಟ್ಸ್‌ಮನ್‌ಗಳು 

ಇನ್ನೊಂದೆಡೆ ಬಾಬರ್ ಅಜಮ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಇದುವರೆಗೆ 3258 ರನ್ ಗಳಿಸಿದ್ದಾರೆ. ಈ ಮಾದರಿಯಲ್ಲಿ 76 ಇನ್ನಿಂಗ್ಸ್‌ಗಳಲ್ಲಿ 8 ಶತಕ ಮತ್ತು 23 ಅರ್ಧ ಶತಕಗಳನ್ನು ಗಳಿಸಿದ್ದಾರೆ. ODI ಮಾದರಿಯಲ್ಲಿ, ಅವರು 92 ಪಂದ್ಯಗಳಲ್ಲಿ ಒಟ್ಟು 4664 ರನ್ ಗಳಿಸಿದ್ದಾರೆ. T20 ಅಂತರಾಷ್ಟ್ರೀಯ 99 ಪಂದ್ಯಗಳಲ್ಲಿ 127.8 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 3355 ರನ್ ಗಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News