IPL 2023: ಮಾರ್ಚ್ 31ರ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ ಮೊದಲ ಪಂದ್ಯ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. ಈ ವರ್ಷ ಐಪಿಎಲ್ ತುಂಬಾ ರೋಚಕತೆಯಿಂದ ಕೂಡಿರಲಿದೆ. ಇದಕ್ಕೆ ದೊಡ್ಡ ಕಾರಣವೆಂದರೆ ಈ ಬಾರಿ ಎಲ್ಲಾ ತಂಡಗಳು ತಮ್ಮ ತವರು ಮೈದಾನದಲ್ಲಿ ಪಂದ್ಯಗಳನ್ನು ಆಡುವುದನ್ನು ಕಾಣಬಹುದು. ಇವೆಲ್ಲದರ ಹೊರತಾಗಿ ಆರ್‌ ಸಿ ಬಿಯ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ಫಾರ್ಮ್‌’ಗೆ ಮರಳಿದ್ದಾರೆ. ಈ ಬಾರಿ ಐಪಿಎಲ್‌’ನಲ್ಲಿ ಕೊಹ್ಲಿ ಹಲವು ದೊಡ್ಡ ಸಾಧನೆಗಳನ್ನು ಮಾಡಬಹುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Bad Times: ಮಂಗಳನ ಅಂಗಳದಲ್ಲಿ ಶತ್ರು ಬುಧ! ಈ ರಾಶಿಯವರ ಗ್ರಹಚಾರ ಕೆಡುವ ಜೊತೆ ಸಮಸ್ಯೆಗಳ ಮೂಟೆ ಬೆನ್ನೇರುತ್ತೆ


ವಿರಾಟ್ ಕೊಹ್ಲಿಗೆ ಈ ಬಾರಿಯ ಐಪಿಎಲ್ ಸೀಸನ್ ನಲ್ಲಿ ನಂಬರ್ ಒನ್ ಆಗಲು ಉತ್ತಮ ಅವಕಾಶವಿದೆ. ವಿರಾಟ್ ಕೊಹ್ಲಿ ಪ್ರಸ್ತುತ ಐಪಿಎಲ್‌ನಲ್ಲಿ 6624 ರನ್ ಗಳಿಸಿದ್ದಾರೆ. ವಿರಾಟ್ ಇನ್ನು ಕೇವಲ 376 ರನ್ ಗಳಿಸಿದರೆ, ಐಪಿಎಲ್ ಇತಿಹಾಸದಲ್ಲಿ 7,000 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಆಗಲಿದ್ದಾರೆ.


ಕ್ರಿಸ್ ಗೇಲ್ ಅವರನ್ನು ಸೋಲಿಸಲು ವಿರಾಟ್ ಗೆ ಉತ್ತಮ ಅವಕಾಶವಿದೆ. ಇದುವರೆಗಿನ ಐಪಿಎಲ್ ಇತಿಹಾಸದಲ್ಲಿ ಕೊಹ್ಲಿ 5 ಶತಕ ಸಿಡಿಸಿದ್ದಾರೆ. ಕ್ರಿಸ್ ಗೇಲ್ ಅವರ ಅತಿ ಹೆಚ್ಚು 6 ಶತಕಗಳ ದಾಖಲೆಯನ್ನು ಮುರಿಯಲು ಅವರು ಕೇವಲ 2 ಶತಕಗಳ ದೂರದಲ್ಲಿದ್ದಾರೆ. ಸದ್ಯ ಕೊಹ್ಲಿ ಇರುವ ಫಾರ್ಮ್‌ ನೋಡಿದರೆ ಈ ದಾಖಲೆ ಮುರಿಯಬಹುದು ಅನಿಸುತ್ತದೆ.


ಇದನ್ನೂ ಓದಿ: Extra Marital Affair: ಪತಿ ಇರುವಾಗಲೇ ಬೇರೆಯವರ ಜೊತೆ ಅಕ್ರಮ ಸಂಬಂಧ ಬೆಳೆಸಿದ ಸ್ಟಾರ್ ಸೆಲೆಬ್ರಿಟಿಗಳು!


ಈ ಬಾರಿ ಮತ್ತೊಮ್ಮೆ 50+ ಸ್ಕೋರ್‌ ಗಳಿಸಿದರೆ, ಕೊಹ್ಲಿ ಮಗದೊಂದು ದಾಖಲೆ ಬರೆದಂತಾಗುತ್ತದೆ. ಅವರು ಇಲ್ಲಿಯವರೆಗೆ 49 ಬಾರಿ 50+ ಸ್ಕೋರ್‌ಗಳನ್ನು ಗಳಿಸಿದ್ದಾರೆ, ಡೇವಿಡ್ ವಾರ್ನರ್ ಐಪಿಎಲ್‌’ನಲ್ಲಿ ಅತಿ ಹೆಚ್ಚು ಬಾರಿ ಅಂದರೆ 59 ಬಾರಿ 50+ ಸ್ಕೋರ್‌ಗಳನ್ನು ಗಳಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ