Extra Marital Affair: ಪತಿ ಇರುವಾಗಲೇ ಬೇರೆಯವರ ಜೊತೆ ಅಕ್ರಮ ಸಂಬಂಧ ಬೆಳೆಸಿದ ಸ್ಟಾರ್ ಸೆಲೆಬ್ರಿಟಿಗಳು!

Extra Marital Affair: ಅನೇಕ ಬಾರಿ ಸೆಲೆಬ್ರಿಟಿಗಳ ವಿವಾಹೇತರ ಸಂಬಂಧಗಳ ಬಗ್ಗೆ ಸುದ್ದಿಗಳು ಬರುತ್ತಿರುತ್ತವೆ. ಮದುವೆ ನಂತರವೂ ಗಂಡನ ಹೊರತಾಗಿ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿರುವ ಸೆಲೆಬ್ರಿಟಿಗಳ ಬಗ್ಗೆ ನಿಮಗೆ ಇಂದು ಮಾಹಿತಿ ನೀಡಲಿದ್ದೇವೆ.  

1 /6

ದಿನೇಶ್ ಕಾರ್ತಿಕ್ ಎಲ್ಲರಿಗೂ ಚಿರಪರಿಚಿತ ಹೆಸರು. ಕ್ರಿಕೆಟ್ ಲೋಕದಲ್ಲಿ ಸೂಪರ್ ಬ್ಯಾಟ್ಸ್ ಮನ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಆದರೆ ಅವರ ಮೊದಲ ಪತ್ನಿ ನಿಕಿತಾ ವಂಜಾರಾ ಡಿಕೆಗೆ ದ್ರೋಹ ಬಗೆದು, ದಿನೇಶ್ ಕಾರ್ತಿಕ್ ಅವರ ಸ್ನೇಹಿತ ಮತ್ತು ತಮಿಳುನಾಡು ದೇಶೀಯ ಕ್ರಿಕೆಟ್ ತಂಡದ ಮುರಳಿ ವಿಜಯ್ ಜೊತೆ ಅನೈತಿಕ ಸಂಬಂಧ ಬೆಳೆಸಿದ್ದರು. ಈ ವಿಚಾರ ತಿಳಿದ ನಂತರ ದಿನೇಶ್ ಕಾರ್ತಿಕ್ ಎದೆಗುಂದಿ, ಬಳಿಕ ವಿಚ್ಛೇದನ ನೀಡಿದರು.

2 /6

ಇನ್ನು ನಟರಾದ ಅಮೀರ್ ಅಲಿ ಮತ್ತು ಸಂಜೀದಾ ಶೇಖ್ ಒಂದು ಕಾಲದಲ್ಲಿ ಜನಪ್ರಿಯ ಟಿವಿ ಜೋಡಿಯಾಗಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಸಂಜೀದಾ ಶೇಖ್ ಅವರ ಮೇಲೆ ವಿವಾಹೇತರ ಸಂಬಂಧದ ಆರೋಪವೂ ಇದೆ. ಇವರಿಬ್ಬರ ವಿಚ್ಛೇದನಕ್ಕೆ ನಟ ಹರ್ಷವರ್ಧನ್ ರಾಣೆ ಕಾರಣ ಎನ್ನಲಾಗಿತ್ತು. ಮಾಧ್ಯಮ ವರದಿಗಳ ಪ್ರಕಾರ, 'ತೈಶ್' ಚಿತ್ರದ ಶೂಟಿಂಗ್ ಸಮಯದಲ್ಲಿ ಸಂಜೀದಾ ಮತ್ತು ಹರ್ಷವರ್ಧನ್ ಅವರ ಅಕ್ರಮ ಸಂಬಂಧ ಮಿತಿಮೀರಿತ್ತು ಎನ್ನಲಾಗಿದೆ.

3 /6

ಮೊದಲ ಪತಿ ರೌನಕ್ ಜೊತೆಗಿನ ವಿಚ್ಛೇದನದ ನಂತರ ದೀಪಿಕಾ ಕಕ್ಕರ್ ವಿವಾಹೇತರ ಸಂಬಂಧದ ಆರೋಪವನ್ನೂ ಎದುರಿಸಿದ್ದರು. ದೀಪಿಕಾ 2011 ರಲ್ಲಿ ಶೋಯೆಬ್ ಇಬ್ರಾಹಿಂ ಅವರನ್ನು ಭೇಟಿಯಾಗಿದ್ದು, ಮರುವರ್ಷ ರೌನಕ್ ಅವರಿಂದ ವಿಚ್ಛೇದನ ಪಡೆದರು. ಇಂದು ದೀಪಿಕಾ ಮತ್ತು ಶೋಯೆಬ್ ಪರಸ್ಪರ ಸಂತೋಷದಿಂದ ಇದ್ದಾರೆ. ತಮ್ಮ ಮೊದಲ ಮಗುವಿನ ಆಗಮನಕ್ಕೆ ಕಾಯುತ್ತಿದ್ದಾರೆ

4 /6

ಖ್ಯಾತ ಕಿರುತೆರೆ ನಟಿ ಕಾಮ್ಯಾ ಪಂಜಾಬಿ ತನ್ನ ಪತಿಗೆ ಮೋಸ ಮಾಡಿದ ಆರೋಪ ಹೊತ್ತಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಆಕೆಯ ಮಾಜಿ ಪತಿ ಬಂಟಿ ನೇಗಿ, ಸಂಜಯ್ ದತ್ ಅವರ ಸೋದರ ಸಂಬಂಧಿ ನಿಮಾಯ್ ಬಾಲಿಯೊಂದಿಗೆ ಕಾಮ್ಯಾ ಅವರು ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಆರೋಪಿಸಿದ್ದಾರೆ. ಕಾಮ್ಯಾ ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಆದರೆ ವಿಚ್ಛೇದನದ ನಂತರ, ನಿಮಾಯ್ ಜೊತೆ ಸಂಬಂಧ ಬೆಳೆಸಿದ್ದಾರೆ ನಟಿ.

5 /6

ನಟಿ ನಿಶಾ ರಾವಲ್ ಪತಿ ಕರಣ್ ಮೆಹ್ರಾ ಅವರು, ತನ್ನ ಸಹೋದರ ರಿತೇಶ್ ಸೇಟಿಯಾ ಜೊತೆ ನಿಶಾ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪ ಮಾಡಿದ್ದರು.

6 /6

ಈ ಪಟ್ಟಿಯಲ್ಲಿ ಮಲೈಕಾ ಅರೋರಾ ಹೆಸರೂ ಸೇರಿದೆ. ಮಾಧ್ಯಮ ವರದಿಗಳ ಪ್ರಕಾರ, ಅರ್ಬಾಜ್ ಖಾನ್ ಜೊತೆಗಿನ ಮಲೈಕಾ ವಿಚ್ಛೇದನಕ್ಕೆ ಅರ್ಜುನ್ ಕಪೂರ್ ಜೊತೆಗಿನ ಸಂಬಂಧವೇ ಕಾರಣ. ಅರ್ಬಾಜ್‌’ನಿಂದ ವಿಚ್ಛೇದನದ ನಂತರ ಅರ್ಜುನ್ ಮತ್ತು ಮಲೈಕಾ ಪರಸ್ಪರ ಒಟ್ಟಿಗೆ ವಾಸ ಮಾಡುತ್ತಿದ್ದಾರೆ.

You May Like

Sponsored by Taboola