ಬೆಂಗಳೂರು: ವಿವೋ ಪ್ರೊ ಕಬಡ್ಡಿ ಲೀಗ್‌ನ 9ನೇ ಆವೃತ್ತಿಯ ಮೊದಲಾರ್ಧದ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, 2022 ಅಕ್ಟೋಬರ್‌ 7ರಂದು ಬೆಂಗಳೂರಿನ ಸಿಟಿಯ ಕಂಠೀರವ ಕ್ರೀಡಾಂಗಣದಲ್ಲಿ ಲೀಗ್‌ ಆರಂಭಗೊಳ್ಳಲಿದೆ ಎಂದು ಆಯೋಜಕತ್ವವನ್ನ ಪಡೆದಿರುವ ಮಷಾಲ್ ಸ್ಪೋರ್ಟ್ಸ್ ತಿಳಿಸಿದೆ.


COMMERCIAL BREAK
SCROLL TO CONTINUE READING

ಅಕ್ಟೋಬರ್‌ 28ರಿಂದ ಪುಣೆಯ ಶಿವಛತ್ರಪತಿ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ (ಬ್ಯಾಡ್ಮಿಂಟನ್‌ ಕೋರ್ಟ್‌) ನಂತರದ ಹಂತ ನಡೆಯಲಿದೆ.ಈ ಋತುವಿನ ಲೀಗ್‌ನಲ್ಲಿ ಕಬಡ್ಡಿ ಅಭಿಮಾನಿಗಳಿಗೆ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನೋಡುವ ಅವಕಾಶವಿದೆ ಎಂದಿದೆ.


ಲೀಗ್‌ಗೆ ಈ ಬಾರಿ ಭವ್ಯವಾಗಿ ಉದ್ಘಾಟನೆಗೊಳ್ಳಲಿದೆ.66 ಪಂದ್ಯಗಳ ವೇಳಾಪಟ್ಟಿಯಲ್ಲಿ ಪ್ರತಿಯೊಂದು ಪಂದ್ಯ ವಿಭಿನ್ನವಾಗಿರಲಿದೆ.ಮೊದಲ 2 ದಿನಗಳೊಳಗೆ ಕಬಡ್ಡಿ ಅಭಿಮಾನಿಗಳು ಎಲ್ಲ 12 ತಂಡಗಳ ಆಟವನ್ನು ವೀಕ್ಷಿಸಬಹುದಾಗಿದೆ. ಪಿಕೆಎಲ್‌ 9ನೇ ಋತುವಿನ ಲೀಗ್‌ ಹಂತದಲ್ಲಿ  ಪ್ರತಿ ಶುಕ್ರವಾರ ಮತ್ತು ಭಾನುವಾರ ಕಬಡ್ಡಿ ಅಭಿಮಾನಿಗಳು ಮೂರು ಪಂದ್ಯಗಳ ಸಂಭ್ರಮವನ್ನು ಸವಿಯಬಹುದು ಎಂದು ಮಾಹಿತಿ ನೀಡಿದೆ.


ಇದನ್ನೂ ಓದಿ: Viral Video : 15 ಅಡಿ ಉದ್ದದ ಹಾವಿನ ಜೊತೆ ಸರಸ.! ಕೊನೆಗೆ ಆಗಿದ್ದೇನು ನೋಡಿ


ದಬಾಂಗ್‌ ಡೆಲ್ಲಿ ಯು-ಮುಂಬಾ ಮೊದಲ ಪಂದ್ಯದಲ್ಲಿ ಮುಖಾಮುಖಿ;


ಅಕ್ಟೋಬರ್‌ 7ರಂದು ನಡೆಯಲಿರುವ 9ನೇ ಋತುವಿನ ಮೊದಲ ಪಂದ್ಯದಲ್ಲಿ 8ನೇ ಆವೃತ್ತಿಯ ಚಾಂಪಿಯನ್‌ ದಬಾಂಗ್‌ ಡೆಲ್ಲಿ  ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಯು-ಮುಂಬಾ ವಿರುದ್ಧ ಸೆಣಸಾಟ ನಡೆಸಲಿದೆ. ನಂತರ ನಡೆಯುವ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ವರ್ಸಸ್ ತೆಲುಗು ಟೈಟಾನ್ಸ್‌ ತಂಡಗಳು ಸೆಣಸಲಿದೆ. ಆರಂಭಿಕ ದಿನದ ಕೊನೆಯ ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ ಯು.ಪಿ. ಯೋಧಾಸ್‌ ವಿರುದ್ಧ ಹೋರಾಟ ನಡೆಸಲಿವೆ ಎಂದು ಮಾಹಿತಿ ಇದೆ.


ಎರಡನೇ ಹಂತದ ಲೀಗ್ ವೇಳಾಪಟ್ಟಿ ಅಕ್ಟೋಬರ್‌ ಅಂತ್ಯಕ್ಕೆ ಪ್ರಕಟ;


ಎರಡನೇಯ ಹಂತದಲ್ಲಿ ತಂಡಗಳು ತಮ್ಮ ರಣತಂತ್ರ ರೂಪಿಸಲು, ತಮ್ಮ ಸಾಮರ್ಥ್ಯವನ್ನು ಉತ್ತಮಪಡಿಸಿಕೊಳ್ಳುಲು ಅವಕಾಶ ನೀಡುವ ದೃಷ್ಟಿಯಿಂದ ಲೀಗ್‌ನ ಎರಡನೇ ಹಂತದ ವೇಳಾಪಟ್ಟಿಯನ್ನು 2022ರ ಅಕ್ಟೋಬರ್‌ ತಿಂಗಳ ಕೊನೆಯ ವಾರದಲ್ಲಿ ಪ್ರಕಟಿಸಲಾಗುವುದು ಎಂದು ಪ್ರಾಯೋಜಕತ್ವ ತಂಡ ತಿಳಿಸಿದೆ.


ಸ್ಟಾರ್‌ ಸ್ಪೋರ್ಟ್ಸ್‌ ನಲ್ಲಿ ನೇರ ಪ್ರಸಾರ ಲಭ್ಯ;


ಕಬಡ್ಡಿ ಅಭಿಮಾನಿಗಳು ಪಂದ್ಯ ವೀಕ್ಷಿಸಲು ತಮ್ಮ ಟಿಕೆಟ್‌ಗಳನ್ನು ಬುಕ್ ಮೈ ಷೋ ಮೂಲಕ ಕಾಯ್ದಿರಿಸಿಕೊಳ್ಳಬಹುದು. 9ನೇ ಆವೃತ್ತಿಯ ವಿವೋ ಪ್ರೋ ಕಬಡ್ಡಿ ಲೀಗ್‌ ಪಂದ್ಯಗಳು ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ ನಲ್ಲಿ ನೇರ ಪ್ರಸಾರವಾಗಲಿದೆ ಎಂದು ತಿಳಿಸಿದೆ.


ಆನ್ಲೈನ್ ನಲ್ಲೂ ಕಬಡ್ಡಿ ಸ್ಕೊರ್ ಲಭ್ಯ;


ವಿವೋ ಪ್ರೋ ಕಬಡ್ಡಿ ಲೀಗ್‌ನ ಕ್ಷಣ ಕ್ಷಣದ ನೇರ ಮಾಹಿತಿಗಾಗಿ www.prokabaddi.com ಲಾಗ್‌ಆನ್‌ ಆಗಬಹುದು, ಅಥವಾ ಅಧಿಕೃತ ಪ್ರೋ ಕಬಡ್ಡಿ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಅಥವಾ ಇನ್‌ಸ್ಟಾಗ್ರಾಮ್‌, ಯೂಟ್ಯೂಬ್‌, ಫೇಸ್‌ಬುಕ್‌ ಮತ್ತು ಟ್ವಿಟರ್‌ನಲ್ಲಿ ಫಾಲೋ ಮಾಡಬಹುದು ಎಂದು ಆಯೋಜಕ ಸಂಸ್ಥೆ ಮಷಾಲ್ ಸ್ಪೋರ್ಟ್ಸ್ ತಿಳಿಸಿದೆ.


ಇದನ್ನೂ ಓದಿ: NRI News: ಯುಎಇಯಲ್ಲಿ ಕೆಲಸ ಮಾಡಲು ಆಸಕ್ತಿ ಇದೆಯೇ? ಹಾಗಾದ್ರೆ ಇಲ್ಲಿವೆ ವಿಫುಲ ಅವಕಾಶ


ಜಗತ್ತಿನ ಉತ್ಕೃಷ್ಟ ಕಬಡ್ಡಿ ಪಂದ್ಯಗಳು;


ವಿವೋ ಪ್ರೊ ಕಬಡ್ಡಿ ಲೀಗ್‌ 9ನೇ ಆವೃತ್ತಿಯ ವೇಳಾಪಟ್ಟಿಯ ಬಗ್ಗೆ ವಿವೋ ಪ್ರೊಕಬಡ್ಡಿ ಲೀಗ್‌ನ ಲೀಗ್‌ ಕಮಿಷನರ್‌ ಮತ್ತು ಮಷಾಲ್‌ ಸ್ಪೋರ್ಟ್ಸ್‌ನ ಸ್ಪೋರ್ಟ್ಸ್‌ ಲೀಗ್‌ನ ಮುಖ್ಯಸ್ಥರಾದ ಅನುಪಮ್‌ ಗೋಸ್ವಾಮಿ ಮಾತನಾಡಿದ್ದು ಬೆಂಗಳೂರು, ಪುಣೆ ಮತ್ತು ಹೈದರಾಬಾದ್‌ನಲ್ಲಿ ನಡೆಯಲಿರುವ ವಿವೋ ಪಿಕೆಎಲ್‌ 9ನೇ ಆವೃತ್ತಿಯು ಭಾರತದಲ್ಲಿರುವ ಕ್ರೀಡಾಭಿಮಾನಿಗಳಿಗೆ ಜಗತ್ತಿನ ಉತ್ತಮ ಕಬಡ್ಡಿ ಪಂದ್ಯಗಳ ಸಂಭ್ರಮವನ್ನು ನೀಡಲಿದೆ. ಹಿಂದಿನ ಎಲ್ಲ ಪ್ರೋ ಕಬಡ್ಡಿ ಲೀಗ್‌ಗಳಿಗಿಂತ 9ನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್‌ ಮತ್ತು ಅದರ ಪ್ರಸಾರಕರು ಜೊತೆಯಲ್ಲಿ 12 ತಂಡಗಳು ಭಾರತದಲ್ಲಿ ಕಬಡ್ಡಿ ಅಭಿವೃದ್ಧಿಗೆ ಕ್ರೀಡಾಂಗಣದ ಒಳಗಡೆ ಮತ್ತು ಸ್ಕ್ರೀನ್‌ನ ಮೇಲೂ ಬಲಿಷ್ಠ ಮಾನದಂಡವನ್ನು ನಿರ್ಮಿಸಲಿವೆ ಎಂದು ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.