Viral Video : 15 ಅಡಿ ಉದ್ದದ ಹಾವಿನ ಜೊತೆ ಸರಸ.! ಕೊನೆಗೆ ಆಗಿದ್ದೇನು ನೋಡಿ

King Cobra Attack Video: ಸಾಮಾಜಿಕ ಜಾಲತಾಣದಲ್ಲಿ ಈ ಭಯಾನಕ ವಿಡಿಯೋ ವೈರಲ್ ಆಗುತ್ತಿದ್ದು, ಇದರಲ್ಲಿ ಓರ್ವ ವ್ಯಕ್ತಿ 15 ಅಡಿ ಉದ್ದದ ನಾಗರಹಾವಿನ ಜೊತೆ ಆಟವಾಡುತ್ತಿರುವ ದೃಶ್ಯ ಕಂಡು ಬಂದಿದೆ.

Written by - Chetana Devarmani | Last Updated : Sep 21, 2022, 10:21 AM IST
  • 15 ಅಡಿ ಉದ್ದದ ಹಾವಿನ ಜೊತೆ ಸರಸ.!
  • ಸಾಮಾಜಿಕ ಜಾಲತಾಣದಲ್ಲಿ ಈ ಭಯಾನಕ ವಿಡಿಯೋ ವೈರಲ್
  • ವಿಶ್ವದ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಒಂದು ಕಿಂಗ್ ಕೋಬ್ರಾ
Viral Video : 15 ಅಡಿ ಉದ್ದದ ಹಾವಿನ ಜೊತೆ ಸರಸ.! ಕೊನೆಗೆ ಆಗಿದ್ದೇನು ನೋಡಿ  title=
ಕಿಂಗ್ ಕೋಬ್ರಾ 

King Cobra Attack Video: ನಮಗೆಲ್ಲರಿಗೂ ತಿಳಿದಿರುವಂತೆ ಕಿಂಗ್ ಕೋಬ್ರಾ ಹಾವು ವಿಶ್ವದ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಯಾರೇ ಆಗಲಿ ಈ ಹಾವನ್ನು ಕಂಡರೆ ಭಯ ಪಡುವುದು ಹೆಚ್ಚು. ಸುತ್ತಮುತ್ತ ಕಂಡರೆ ಮೊದಲು ಓಡಿ ಹೋಗಿ ಹಾವು ಹಿಡಿಯುವವರನ್ನು ಹುಡುಕುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು, ಇದರಲ್ಲಿ ವ್ಯಕ್ತಿಯೊಬ್ಬ 15 ಅಡಿ ಉದ್ದದ ನಾಗರಹಾವಿನ ಜೊತೆ ಆಟವಾಡುತ್ತಿರುವ ದೃಶ್ಯ ಕಂಡು ಬಂದಿದೆ. ಆ ವ್ಯಕ್ತಿ ನಾಗರಹಾವನ್ನು ಹಿಡಿದಿದ್ದಲ್ಲದೆ ಅದರ ಬಾಯಿಯನ್ನು ನಾಲಿಗೆಯಿಂದ ಮುಟ್ಟಿದ್ದಾನೆ.

ಇದನ್ನೂ ಓದಿ : Viral Video : ಪುಟ್ಟ ಮಗುವಿನಂತೆ ಜಾರುಬಂಡಿ ಆಡುವ ಕರಡಿ.. ಮನಸ್ಸನ್ನು ರಿಲ್ಯಾಕ್ಸ್‌ ಮಾಡುವ ವಿಡಿಯೋ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಹಾವು ಹಿಡಿಯುವುದರಲ್ಲಿ ನಿಪುಣನಾಗಿರುವ ವ್ಯಕ್ತಿಯೊಬ್ಬ ಕಾಡಿನಲ್ಲಿ ಚಿಕ್ಕ ಮಂಗದೊಂದಿಗೆ ಸೈಕಲ್ ನಲ್ಲಿ ಹೋಗುತ್ತಿರುವುದನ್ನು ನೋಡಬಹುದು. ದಟ್ಟ ಅರಣ್ಯದೊಳಗೆ ತಲುಪಿದ ಕೂಡಲೇ ಸೈಕಲ್ ಒಂದೆಡೆ ನಿಲ್ಲಿಸಿ ಕೋತಿಯನ್ನು ಹಿಡಿದುಕೊಂಡು ನಡೆಯತೊಡಗಿದ. ಸ್ವಲ್ಪ ದೂರ ಹೋದ ನಂತರ ಅವನಿಗೆ ಅಪಾಯಕಾರಿ ಹಾವು ಕಾಣಿಸುತ್ತದೆ. ಆದಾಗ್ಯೂ, ಈ ಸಮಯದಲ್ಲಿ ಅವರ ಚೇಷ್ಟೆಗಳನ್ನು ಚಿತ್ರೀಕರಿಸುವ ಒಬ್ಬ ಕ್ಯಾಮರಾಮನ್ ಸಹ ಅವನ ಜೊತೆಯೇ ಇದ್ದರು. ಅವನು ತನ್ನ ಬರಿಗೈಯಿಂದ ಕಿಂಗ್ ಕೋಬ್ರಾವನ್ನು ಹಿಡಿದನು ಮತ್ತು ಅದರ ಜೊತೆ ಆಟವಾಡಲು ಪ್ರಾರಂಭಿಸಿದನು.

ನಾಗರಹಾವಿನ ಬಾಲವನ್ನು ಹಿಡಿದ ನಂತರ, ಅವನು ಅದನ್ನು ತನ್ನ ಕೈಗಳಿಂದ ಮೇಲಕ್ಕೆತ್ತಿ ಅದರ ಹೆಡೆಯನ್ನು ತನ್ನ ಬಾಯಿಯ ಬಳಿಗೆ ತರುತ್ತಾನೆ. ಈ ಸಮಯದಲ್ಲಿ, ಕಿಂಗ್ ಕೋಬ್ರಾ ಅನೇಕ ಬಾರಿ ದಾಳಿ ಮಾಡುತ್ತದೆ. ಆದರೆ ಅದು ಯಶಸ್ವಿಯಾಗಲಿಲ್ಲ. ಅಷ್ಟೇ ಅಲ್ಲ, ನಾಗರಹಾವನ್ನು ನೆಲದ ಮೇಲೆ ಬಿಟ್ಟು ನಂತರ ಅದಕ್ಕೆ ಮುತ್ತಿಡಲು ಪ್ರಯತ್ನಿಸುತ್ತಾನೆ. ಒಮ್ಮೆ ಅವನು ತನ್ನ ನಾಲಿಗೆಯಿಂದ ಕಿಂಗ್ ಕೋಬ್ರಾಗೆ ಕಿಸ್‌ ಕೂಡ ಮಾಡುತ್ತಾನೆ. ಬಳಿಕ ಆ ಹಾವು ಅಲ್ಲಿಂದ ಹೋಗುವಾಗ ಹಿಂದಿನಿಂದ ಹಿಡಿದು ಎತ್ತಿಕೊಳ್ಳುತ್ತಾನೆ. ಈ ಭಯಾನಕ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. ಇದುವರೆಗೆ ಈ ವಿಡಿಯೋವನ್ನು 16 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಇದನ್ನೂ ಓದಿ : WATCH : ತೈವಾನ್‌ ಭೀಕರ ಭೂಕಂಪದ ವಿಡಿಯೋ ನೋಡಿ.. ಆಟಿಕೆಯಂತೆ ಅಲುಗಾಡಿದ ರೈಲು

ಕೊನೆಗೆ ಕಿಂಗ್ ಕೋಬ್ರಾ ಆತನ ಕೈ ಮೇಲೆ ದಾಳಿ ಮಾಡಿತು. ಈ ವಿಡಿಯೋವನ್ನು 4 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿರುವ  dede inoen ಎಂಬYouTube  ಚಾನಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಇದುವರೆಗೆ 16 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News