IND vs NZ 1st ODI: ಕ್ರೀಸ್ ನಲ್ಲಿ ಬಿದ್ದು ಸಖತ್ ಶಾಟ್ ಹೊಡೆದ ವಾಷಿಂಗ್ಟನ್ ಸುಂದರ್: ವಿಡಿಯೋ ನೋಡಿ
Washington Sunder: ಇನ್ನು ಈ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ ಅಬ್ಬರ ನಿರೀಕ್ಷಿಸಿದ್ದ ಪ್ರೇಕ್ಷಕರಿಗೆ ಮನರಂಜನೆಯೂಟ ಬಡಿಸಿದ್ದು, ವಾಷಿಂಗ್ಟನ್ ಸುಂದರ್. ಏಳನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಇಳಿದ ಸುಂದರ್ ಅಬ್ಬರಿಸಿದ್ದರು. ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಸುಂದರ್ ಸ್ಟಂಟ್ ಗಳ ಮೂಲಕ ರನ್ ಕಲೆಹಾಕಿದ್ದಾರೆ.
Washington Sunder: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ತಂಡದ ಡ್ಯಾಶಿಂಗ್ ಆಲ್‌ರೌಂಡರ್ ರವೀಂದ್ರ ಜಡೇಜಾ ಏಷ್ಯಾ ಕಪ್ 2022 ರಿಂದ ಟೀಮ್ ಇಂಡಿಯಾದಿಂದ ಹೊರಗುಳಿಯುತ್ತಿದ್ದಾರೆ. ಜಡೇಜಾ ಬದಲಿಗೆ ಈ ಸರಣಿಯಲ್ಲಿ ಆಡುತ್ತಿರುವ ಆಟಗಾರನೊಬ್ಬ ತಮ್ಮ ಬ್ಯಾಟ್ ನಿಂದ ಬಿರುಸಿನ ಇನ್ನಿಂಗ್ಸ್ ಆಟವಾಡಿದ್ದು, ಜಡೇಜಾ ಆಟವನ್ನು ನೆನಪಿಸಿದ್ದಾರೆ. ಈ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: FIFA Japanese Fans Video: ಫಿಫಾ ಸ್ಟೇಡಿಯಂ ಸ್ವಚ್ಛಗೊಳಿಸಿದ ಜಪಾನ್ ಫ್ಯಾನ್ಸ್: ಈ ಸೇವೆಗೆ ಕಾರಣ ಏನು ಗೊತ್ತಾ?
ಇನ್ನು ಈ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ ಅಬ್ಬರ ನಿರೀಕ್ಷಿಸಿದ್ದ ಪ್ರೇಕ್ಷಕರಿಗೆ ಮನರಂಜನೆಯೂಟ ಬಡಿಸಿದ್ದು, ವಾಷಿಂಗ್ಟನ್ ಸುಂದರ್. ಏಳನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಇಳಿದ ಸುಂದರ್ ಅಬ್ಬರಿಸಿದ್ದರು. ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಸುಂದರ್ ಸ್ಟಂಟ್ ಗಳ ಮೂಲಕ ರನ್ ಕಲೆಹಾಕಿದ್ದಾರೆ.
ಮ್ಯಾಟ್ ಹೆನ್ರಿ ಎಸೆದ ಬಾಲ್ ನ್ನು ಬೌಂಡರಿ ದಾಟಿಸಲು ಸುಂದರ್ ವೈಡ್ ಗೆರೆಯ ಮೇಲೆ ಬಿದ್ದು, ಬ್ಯಾಟ್ ಮಾಡಿದರು. ಇದರ ವಿಡಿಯೋವನ್ನು PRIME Video IN ಟ್ವಿಟರ್ ಅಧಿಕೃತ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ.
IND vs NZ 1st ODI: ಟೀಂ ಇಂಡಿಯಾಗೆ ಲಗ್ಗೆ ಇಟ್ಟ ಈ ಮಾರಕ ಆಟಗಾರ: ಎದುರಾಳಿಗೆ ನಡುಕ ಶುರು!
ಇದೀಗ ಬ್ಯಾಟಿಂಗ್ ಮಾಡುತ್ತಿರುವ ನ್ಯೂಜಿಲ್ಯಾಂಡ್ 25 ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 115 ರನ್ ಕಲೆ ಹಾಕಿದೆ. ಸದ್ಯ ಮೊದಲ ಪಂದ್ಯದಲ್ಲಿ ಯಾವ ತಂಡ ಗೆಲುವು ಸಾಧಿಸಲಿದೆ ಎಂದು ಕಾದುನೋಡಬೇಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ