FIFA Japanese Fans Video: ಫಿಫಾ ಸ್ಟೇಡಿಯಂ ಸ್ವಚ್ಛಗೊಳಿಸಿದ ಜಪಾನ್ ಫ್ಯಾನ್ಸ್: ಈ ಸೇವೆಗೆ ಕಾರಣ ಏನು ಗೊತ್ತಾ?

FIFA Japanese Fans Video: ಫಿಫಾ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದ್ದು, ಈಗಾಗಲೇ ಈ ವೀಡಿಯೊವನ್ನು 125.4K ಮಂದಿ ವೀಕ್ಷಣೆ ಮಾಡಿದ್ದಾರೆ. ಪಂದ್ಯದ ನಂತರ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಖಾಲಿ ಬಾಟಲಿ, ಪ್ಲಾಸ್ಟಿಕ್ ಮತ್ತಿತರ ಕಸವನ್ನು ಸಂಗ್ರಹಿಸಿ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿದ್ದಾರೆ.

Written by - Bhavishya Shetty | Last Updated : Nov 25, 2022, 09:47 AM IST
    • ಫಿಫಾ ವಿಶ್ವಕಪ್‌ 2022 ಕಂಡರಿಯದ ಅಚ್ಚರಿಗಳಿಗೆ ಸಾಕ್ಷಿಯಾಗುತ್ತಿವೆ
    • ಜರ್ಮನಿಯನ್ನು ಸೋಲಿಸುವ ಮೂಲಕ ಜಪಾನ್ ಇತಿಹಾಸ ನಿರ್ಮಿಸಿದೆ
    • ಪಂದ್ಯ ಮುಗಿದ ಬಳಿಕ ಸ್ಟೇಡಿಯಂನಲ್ಲಿದ್ದ ಜಪಾನ್ ಅಭಿಮಾನಿಗಳು ಕ್ಲೀನಿಂಗ್ ಮಾಡಿದ್ದಾರೆ
FIFA Japanese Fans Video: ಫಿಫಾ ಸ್ಟೇಡಿಯಂ ಸ್ವಚ್ಛಗೊಳಿಸಿದ ಜಪಾನ್ ಫ್ಯಾನ್ಸ್: ಈ ಸೇವೆಗೆ ಕಾರಣ ಏನು ಗೊತ್ತಾ?   title=
FIFA World Cup

FIFA World Cup 2022: ಫಿಫಾ ವಿಶ್ವಕಪ್‌ 2022ರಲ್ಲಿ ಜರ್ಮನಿಯನ್ನು 2-1 ಗೋಲುಗಳಿಂದ ಸೋಲಿಸುವ ಮೂಲಕ ಜಪಾನ್ ಇತಿಹಾಸ ನಿರ್ಮಿಸಿದೆ. ಪಂದ್ಯ ಮುಗಿದ ಬಳಿಕ ಸ್ಟೇಡಿಯಂನಲ್ಲಿದ್ದ ಜಪಾನ್ ಅಭಿಮಾನಿಗಳು ಹಾಗೂ ಇಡೀ ತಂಡ ಸಂಭ್ರಮದಿಂದ ಕುಣಿದು ಕುಪ್ಪಳಿಸಿದೆ. ಇದಾದ ಬಳಿಕ ವಿಡಿಯೋವೊಂದು ಹೊರಬಿದ್ದಿದ್ದು, ಪಂದ್ಯ ವೀಕ್ಷಿಸಲು ಬಂದಿದ್ದ ಅಭಿಮಾನಿಗಳು ಮಾಡಿರುವ ಈ ಕಾರ್ಯ ಫುಟ್ ಬಾಲ್ ಆಟಕ್ಕಿಂತ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದೆ.

ಫಿಫಾ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದ್ದು, ಈಗಾಗಲೇ ಈ ವೀಡಿಯೊವನ್ನು 125.4K ಮಂದಿ ವೀಕ್ಷಣೆ ಮಾಡಿದ್ದಾರೆ. ಪಂದ್ಯದ ನಂತರ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಖಾಲಿ ಬಾಟಲಿ, ಪ್ಲಾಸ್ಟಿಕ್ ಮತ್ತಿತರ ಕಸವನ್ನು ಸಂಗ್ರಹಿಸಿ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿದ್ದಾರೆ.

ಇದನ್ನೂ ಓದಿ: Lionel Messi In Shock: ಲಿಯೋನೆಲ್ ಮೆಸ್ಸಿಗೆ ಆಘಾತ ನೀಡಿದ ಸೌದಿ ಅರೇಬಿಯಾ: ಬದಲಾಯಿಸಲಾಗದ ಇತಿಹಾಸಕ್ಕೆ ಬ್ರೇಕ್!

ಹೃದಯ ಗೆದ್ದ ಜಪಾನೀ ಅಭಿಮಾನಿಗಳ ವಿಡಿಯೋ ನೋಡಿ:

 

 

ಈ ವಿಡಿಯೋವನ್ನು ಹಂಚಿಕೊಂಡಿರುವ ಅಧಿಕೃತ ಫಿಫಾ ವಿಶ್ವಕಪ್ ಟ್ವಿಟರ್ ಖಾತೆಯಲ್ಲಿ “ಫಿಫಾ ವಿಶ್ವಕಪ್‌ನಲ್ಲಿ ಐತಿಹಾಸಿಕ ವಿಜಯದ ನಂತರ ಕ್ರೀಡಾಂಗಣವನ್ನು ಸ್ವಚ್ಛಗೊಳಿಸುತ್ತಿರುವ ಜಪಾನ್ ಅಭಿಮಾನಿಗಳಿಗೆ ನಮ್ಮ ಹೃತ್ಪೂರ್ವಕ ಗೌರವ” ಎಂದು ಬರೆದುಕೊಂಡಿದ್ದಾರೆ.

ಜಪಾನ್‌ನ ಸಾಮಾಜಿಕ ಜೀವನದಲ್ಲಿ ಸ್ವಚ್ಛತೆ ಮತ್ತು ಶಿಸ್ತು ಅನುಸರಿಸಲಾಗುತ್ತದೆ. ಕಳೆದ ವಿಶ್ವಕಪ್‌ನಲ್ಲೂ ಬೆಲ್ಜಿಯಂ ವಿರುದ್ಧ ಸೋಲಿನ ನಂತರ ಜಪಾನ್ ಅಭಿಮಾನಿಗಳ ವಿಡಿಯೋ ವೈರಲ್ ಆಗಿತ್ತು. ಇನ್ನು ವ್ಯಕ್ತಿಯೊಬ್ಬರು, ಈ ಸ್ವಚ್ಛತೆ ಏತಕ್ಕೆ ಮಾಡುತ್ತಿದ್ದೀರಿ ಎಂದು ಕೇಳಿದಕ್ಕೆ “ನಮ್ಮ ದೇಶದಲ್ಲಿ ಸ್ವಚ್ಚತೆಗೆ ಹೆಚ್ಚಿನ ಗೌರವ ನೀಡುತ್ತೇವೆ. ಹಾಗೆಯೇ ಬೇರೊಂದು ದೇಶದ ಬಗ್ಗೆಯೂ ನಮಗೆ ಗೌರವವಿದೆ” ಎಂದು ಹೇಳಿದ್ದಾರೆ. ಈ ಮಾತು ಎಂಥವರ ಮನಸ್ಸನ್ನೂ ಕೂಡ ಗೆಲ್ಲಬಹುದು.

“ಕ್ಯಾಮರಾ ನೋಡುತ್ತಿದೆ ಎಂದು ಈ ಕೆಲಸ ಮಾಡುತ್ತೀದ್ದೀರಾ” ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಜಪಾನ್ ಅಭಿಮಾನಿ “ಖಂಡಿತ ಇಲ್ಲ. ನಮಗೆ ಸ್ವಚ್ಛತೆ ಮುಖ್ಯ” ಎಂದು ಹೇಳಿದ್ದಾರೆ.

ಇದನ್ನೂ ಓದಿ: FIFA World Cup 2022: ವಿಶ್ವ ದಾಖಲೆ ನಿರ್ಮಿಸಿದ ಕ್ರಿಸ್ಟಿಯಾನೋ ರೊನಾಲ್ಡೊ!

ಜರ್ಮನಿಯನ್ನು 2-1 ಗೋಲುಗಳಿಂದ ಸೋಲಿಸಿದ ಜಪಾನ್ ಇತಿಹಾಸ ನಿರ್ಮಿಸಿದೆ. FIFA ವಿಶ್ವಕಪ್ 2022 ಅದೆಷ್ಟೋ ಅಚ್ಚರಿಗೆ ಸಾಕ್ಷಿಯಾಗಿದೆ. ಮೊದಲು ಫುಟ್ ಬಾಲ್ ದೈತ್ಯ ತಂಡ ಅರ್ಜೆಂಟೀನಾವನ್ನು ಸೌದಿ ಅರೆಬಿಯಾ ತಂಡ ಸೋಲಿಸುವ ಮೂಲಕ ಇಡೀ ಜಗತ್ತನ್ನು ಅಚ್ಚರಿಗೊಳಿಸಿತು. ಈ ಬಳಿಕ ಜಪಾನ್ 4 ಬಾರಿ ಚಾಂಪಿಯನ್ ಆಗಿದ್ದ ಜರ್ಮನಿಯನ್ನು 2-1 ಗೋಲುಗಳಿಂದ ಸೋಲಿಸುವ ಮೂಲಕ ದೊಡ್ಡ ಇತಿಹಾಸವನ್ನು ಬರೆಯಿತು. FIFA ಶ್ರೇಯಾಂಕದಲ್ಲಿ ಜರ್ಮನಿ ತಂಡ 11 ನೇ ಸ್ಥಾನದಲ್ಲಿದೆ ಮತ್ತು ಜಪಾನ್ 24 ನೇ ಸ್ಥಾನದಲ್ಲಿದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News