ಫ್ಯಾನ್ಸ್ “ಕೊಹ್ಲಿ…ಕೊಹ್ಲಿ” ಎನ್ನುತ್ತಿದ್ದಂತೆ ಮಧ್ಯದ ಬೆರಳು ತೋರಿಸಿದ ಗಂಭೀರ್! ವಿಡಿಯೋ ನೋಡಿ
Gautam Gambhir Viral Video: ವಿರಾಟ್ ಕೊಹ್ಲಿ ಅಭಿಮಾನಿಗಳು `ಕೊಹ್ಲಿ-ಕೊಹ್ಲಿ` ಎಂದು ಘೋಷಣೆಗಳನ್ನು ಕೂಗಲಾರಂಭಿಸಿದರು. ಈ ಸಂದರ್ಭದಲ್ಲಿ ಗಂಭೀರ್ ಕೋಪದಿಂದ ವಿರಾಟ್ ಅಭಿಮಾನಿಗಳತ್ತ ಮಧ್ಯದ ಬೆರಳನ್ನು ತೋರಿಸಿದ್ದಾರೆ ಎನ್ನಲಾಗಿದೆ.
Gautam Gambhir Viral Video: ಭಾರತೀಯ ಕ್ರಿಕೆಟ್’ನಲ್ಲಿ , ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಸಖತ್ ಹೆಸರು ಮಾಡಿದ್ದಾರೆ. ಈ ಕ್ರಿಕೆಟಿಗರು ಮೈದಾನಕ್ಕೆ ಬಂದರೆ ಸಾಕು ಆಕ್ರಮಣಕಾರಿ ಆಟ ಫಿಕ್ಸ್ ಆಗಿರುತ್ತದೆ. ಆದರೆ ಸದ್ಯ ಗಂಭೀರ್ ಅವರ ಗಂಭೀರ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದಕ್ಕೆ ಗಂಭೀರ್ ಸ್ಪಷ್ಟನೆಯನ್ನೂ ಸಹ ನೀಡಿದ್ದಾರೆ.
ಇದನ್ನೂ ಓದಿ: ಕ್ರೀಡಾ ನಿರೂಪಕಿಯರ ಅಂದಕ್ಕೆ ಫಿದಾ ಆಗಿ ಅವರನ್ನೇ ವಿವಾಹವಾದ ಕ್ರಿಕೆಟಿಗರು ಇವರು! ಈ ಪಟ್ಟಿಯಲ್ಲಿದ್ದಾರೆ ಭಾರತ ಇಬ್ಬರು…
ಗೌತಮ್ ಗಂಭೀರ್ ಅವರು ಶ್ರೀಲಂಕಾದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2023 ರಲ್ಲಿ ವಿವರಣೆಗಾರರಾಗಿ ಕಾಣಿಸಿಕೊಂಡಿದ್ದಾರೆ. ಅಂದ ಹಾಗೆ ಸೆಪ್ಟೆಂಬರ್ 4 ರಂದು ಅಂದರೆ ಕಳೆದ ದಿನ ಭಾರತ ಮತ್ತು ನೇಪಾಳ ನಡುವೆ ಪಂದ್ಯ ನಡೆಯುತ್ತಿತ್ತು. ಈ ವೇಳೆ ಮಳೆಯಿಂದಾಗಿ ಪಂದ್ಯವನ್ನು ನಿಲ್ಲಿಸಬೇಕಾಯಿತು. ಅಷ್ಟರಲ್ಲಿ ಗೌತಮ್ ಗಂಭೀರ್ ಜನಸಂದಣಿಯ ಮೂಲಕ ಕಾಮೆಂಟೇಟರ್ಸ್ ಬಾಕ್ಸ್ ಕಡೆಗೆ ಸಾಗುತ್ತಿದ್ದರು. ಆಗ ಅಲ್ಲಿದ್ದ ವಿರಾಟ್ ಕೊಹ್ಲಿ ಅಭಿಮಾನಿಗಳು 'ಕೊಹ್ಲಿ-ಕೊಹ್ಲಿ' ಎಂದು ಘೋಷಣೆಗಳನ್ನು ಕೂಗಲಾರಂಭಿಸಿದರು. ಈ ಸಂದರ್ಭದಲ್ಲಿ ಗಂಭೀರ್ ಕೋಪದಿಂದ ವಿರಾಟ್ ಅಭಿಮಾನಿಗಳತ್ತ ಮಧ್ಯದ ಬೆರಳನ್ನು ತೋರಿಸಿದ್ದಾರೆ ಎನ್ನಲಾಗಿದೆ. ಇದನ್ನು ಸಾಮಾನ್ಯವಾಗಿ ಕೆಟ್ಟ ಸನ್ನೆ (ugly gesture) ಎಂದು ಪರಿಗಣಿಸಲಾಗುತ್ತದೆ.
45 ಎಸೆತಕ್ಕೆ 12 ಸಿಕ್ಸರ್, 4 ಬೌಂಡರಿ! ಅಬ್ಬರದ ಬ್ಯಾಟಿಂಗ್’ನಲ್ಲಿ ಶತಕ ಬಾರಿಸಿದ 140 ಕೆಜಿ ತೂಕದ ದೈತ್ಯ ಬ್ಯಾಟ್ಸ್’ಮನ್: ವಿಡಿಯೋ ನೋಡಿ
ಆದರೆ, ಈ ವಿವಾದದ ನಡುವೆಯೇ ಗೌತಮ್ ಗಂಭೀರ್ ಅವರು ಆ ಸನ್ನೆ ಮಾಡಿದ್ದು ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಅಲ್ಲ ಪಾಕಿಸ್ತಾನಿಗಳಿಗೆ ಎಂದು ಸ್ಪಷ್ಟಪಡಿಸಿದ್ದಾರೆ. “ಅಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಪಾಕಿಸ್ತಾನಿ ಅಭಿಮಾನಿಗಳು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದರು. ಒಬ್ಬ ಭಾರತೀಯನಾಗಿ, ನನ್ನ ದೇಶದ ಬಗ್ಗೆ ಯಾರಾದರೂ ಹೀಗೆ ಹೇಳುವುದು ನನಗೆ ಇಷ್ಟವಿಲ್ಲ. ಅದಕ್ಕಾಗಿಯೇ ನಾನು ಈ ರೀತಿ ಪ್ರತಿಕ್ರಿಯಿಸಿದೆ. ನೀವು ಸಾಮಾಜಿಕ ಮಾಧ್ಯಮದಲ್ಲಿ ನೋಡುವುದು ಯಾವಾಗಲೂ ನಿಜವಾಗಿರುವ ಚಿತ್ರವಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ