45 ಎಸೆತಕ್ಕೆ 12 ಸಿಕ್ಸರ್, 4 ಬೌಂಡರಿ! ಅಬ್ಬರದ ಬ್ಯಾಟಿಂಗ್’ನಲ್ಲಿ ಶತಕ ಬಾರಿಸಿದ 140 ಕೆಜಿ ತೂಕದ ದೈತ್ಯ ಬ್ಯಾಟ್ಸ್’ಮನ್: ವಿಡಿಯೋ ನೋಡಿ

Caribbean premier league 2023: ಎರಡೂ ತಂಡಗಳು ಪಂದ್ಯದಲ್ಲಿ 200ಕ್ಕೂ ಹೆಚ್ಚು ರನ್ ಗಳಿಸಿದ್ದವು. ಪಂದ್ಯದಲ್ಲಿ ಮೊದಲು ಆಡಿದ ಸೇಂಟ್ ಕಿಟ್ಸ್ 4 ವಿಕೆಟ್ ಗೆ 220 ರನ್’ಗಳ ಬೃಹತ್ ಸ್ಕೋರ್ ಗಳಿಸಿತ್ತು. ಪ್ರತ್ಯುತ್ತರವಾಗಿ ಕಣಕ್ಕಿಳಿದ 140 ಕೆಜಿ ತೂಕದ ರಹಕೀಮ್ ಕಾರ್ನ್‌’ವಾಲ್ 12 ಸಿಕ್ಸರ್‌’ಗಳೊಂದಿಗೆ ಶತಕ ಪೂರೈಸಿದ್ದಲ್ಲದೆ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

Written by - Bhavishya Shetty | Last Updated : Sep 4, 2023, 02:24 PM IST
    • ಕೆರಿಬಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳು ಪ್ರಸ್ತುತ ವೆಸ್ಟ್ ಇಂಡೀಸ್‌’ನಲ್ಲಿ ನಡೆಯುತ್ತಿವೆ
    • ಅತ್ಯಂತ ದೈತ್ಯ ಕ್ರಿಕೆಟಿಗ ತಮ್ಮ T20 ವೃತ್ತಿಜೀವನದ ಮೊದಲ ಶತಕವನ್ನು ಬಾರಿಸಿದ್ದಾರೆ
    • 30 ವರ್ಷದ ರಹಕೀಮ್ ಕಾರ್ನ್‌ವಾಲ್ 45 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ
45 ಎಸೆತಕ್ಕೆ 12 ಸಿಕ್ಸರ್, 4 ಬೌಂಡರಿ! ಅಬ್ಬರದ ಬ್ಯಾಟಿಂಗ್’ನಲ್ಲಿ ಶತಕ ಬಾರಿಸಿದ 140 ಕೆಜಿ ತೂಕದ ದೈತ್ಯ ಬ್ಯಾಟ್ಸ್’ಮನ್: ವಿಡಿಯೋ ನೋಡಿ title=
Raheem Cornwall Sixer

Caribbean premier league 2023: ವಿಶ್ವದ ಅತ್ಯಂತ ದೈತ್ಯ ಕ್ರಿಕೆಟಿಗ ತಮ್ಮ T20 ವೃತ್ತಿಜೀವನದ ಮೊದಲ ಶತಕವನ್ನು ಬಾರಿಸಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳು ಪ್ರಸ್ತುತ ವೆಸ್ಟ್ ಇಂಡೀಸ್‌’ನಲ್ಲಿ ನಡೆಯುತ್ತಿವೆ. ಪ್ರಸಕ್ತ ಸಾಲಿನ ಟಿ20 ಲೀಗ್‌’ನ 18ನೇ ಪಂದ್ಯದಲ್ಲಿ ಬಾರ್ಬಡೋಸ್ ರಾಯಲ್ಸ್ ತಂಡ, ಸೇಂಟ್ ಕಿಟ್ಸ್ ಆಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡವನ್ನು 8 ವಿಕೆಟ್‌’ಗಳಿಂದ ಸೋಲಿಸಿದೆ.

ಇದನ್ನೂ ಓದಿ: ದೀಪಾವಳಿಗೂ ಮುನ್ನ ಈ ರಾಶಿಗೆ ಕೋಟ್ಯಾಧಿಪತಿ ಯೋಗ: ವರ್ಷಪೂರ್ತಿ ಸಂಪತ್ತು, ಸಂತೋಷ, ಸಮೃದ್ಧಿ-ವ್ಯಾಪಾರದಲ್ಲಿ ಅಖಂಡ ಯಶಸ್ಸು

ಎರಡೂ ತಂಡಗಳು ಪಂದ್ಯದಲ್ಲಿ 200ಕ್ಕೂ ಹೆಚ್ಚು ರನ್ ಗಳಿಸಿದ್ದವು. ಪಂದ್ಯದಲ್ಲಿ ಮೊದಲು ಆಡಿದ ಸೇಂಟ್ ಕಿಟ್ಸ್ 4 ವಿಕೆಟ್ ಗೆ 220 ರನ್’ಗಳ ಬೃಹತ್ ಸ್ಕೋರ್ ಗಳಿಸಿತ್ತು. ಪ್ರತ್ಯುತ್ತರವಾಗಿ ಕಣಕ್ಕಿಳಿದ 140 ಕೆಜಿ ತೂಕದ ರಹಕೀಮ್ ಕಾರ್ನ್‌’ವಾಲ್ 12 ಸಿಕ್ಸರ್‌’ಗಳೊಂದಿಗೆ ಶತಕ ಪೂರೈಸಿದ್ದಲ್ಲದೆ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಬಾರ್ಬಡೋಸ್ ರಾಯಲ್ಸ್ 18.1 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ ಗುರಿ ತಲುಪಿತು.

ಗುರಿ ಬೆನ್ನತ್ತಿದ ಬಾರ್ಬಡೋಸ್ ರಾಯಲ್ಸ್ ತಂಡಕ್ಕೆ ರಹಕೀಮ್ ಕಾರ್ನ್‌ವಾಲ್ ಮತ್ತು ಕೈಲ್ ಮೇಯರ್ಸ್ ವೇಗದ ಆರಂಭ ನೀಡಿದರು. ಇಬ್ಬರೂ ಮೊದಲ ವಿಕೆಟ್‌ಗೆ 4 ಓವರ್‌ಗಳಲ್ಲಿ 41 ರನ್ ಸೇರಿಸಿದರು. ಮೇಯರ್ಸ್ 13 ಎಸೆತಗಳಲ್ಲಿ 22 ರನ್ ಗಳಿಸಿ ಔಟಾದರು. 5 ಬೌಂಡರಿಗಳನ್ನು ಬಾರಿಸಿ. ಇದಾದ ನಂತರ ಕಾರ್ನ್‌ವಾಲ್ ಮತ್ತು ಲಾರಿ ಇವಾನ್ಸ್ ಅರ್ಧಶತಕದ ಜೊತೆಯಾಟ ನಡೆಸಿ ಸ್ಕೋರ್ ಅನ್ನು 120 ರನ್‌ಗಳ ಗಡಿ ದಾಟಿಸಿದರು. ಇವಾನ್ಸ್ 14 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದರು. 2 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿದರು. ಇದರ ನಂತರ ಕಾರ್ನ್‌ವಾಲ್ ತಮ್ಮ T20 ವೃತ್ತಿಜೀವನದ ಮೊದಲ ಶತಕವನ್ನು ಗಳಿಸಿದರು.

 

30 ವರ್ಷದ ರಹಕೀಮ್ ಕಾರ್ನ್‌ವಾಲ್ 45 ಎಸೆತಗಳಲ್ಲಿ ಶತಕ ಪೂರೈಸಿದ್ದಲ್ಲದೆ, 4 ಬೌಂಡರಿ ಹಾಗೂ 12 ಸಿಕ್ಸರ್‌’ಗಳನ್ನು ಸಿಡಿಸಿದ್ದಾರೆ. ಇನ್ನಿಂಗ್ಸ್‌’ನಲ್ಲಿ ಕಾರ್ನ್‌ವಾಲ್ 48 ಎಸೆತಗಳಲ್ಲಿ 213 ಸ್ಟ್ರೈಕ್ ರೇಟ್‌’ನಲ್ಲಿ 102 ರನ್ ಗಳಿಸಿದ್ದಾರೆ. ನಾಯಕ ರೋವ್ಮನ್ ಪೊವೆಲ್ ಕೂಡ ಅದ್ಭುತ ಇನ್ನಿಂಗ್ಸ್ ಆಡಿದ್ದು, 26 ಎಸೆತಗಳಲ್ಲಿ 49 ರನ್ ಗಳಿಸಿ ಅಜೇಯರಾಗಿ ಉಳಿದರು. ಇವರು 5 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದ್ದಾರೆ. ಅಲೆಕ್ ಅತಾನಾಜೆ ಕೂಡ 10 ಎಸೆತಗಳಲ್ಲಿ 13 ರನ್ ಗಳಿಸಿ ಅಜೇಯರಾಗಿ ಉಳಿದರು.

ಇದಕ್ಕೂ ಮುನ್ನ ಸೇಂಟ್ ಕಿಟ್ಸ್ ತಂಡದಿಂದ 3 ಬ್ಯಾಟ್ಸ್ ಮನ್ ಗಳು ಅರ್ಧಶತಕ ಗಳಿಸಿದ್ದರು. ಆರಂಭಿಕ ಬ್ಯಾಟ್ಸ್‌ಮನ್ ಆಂಡ್ರೆ ಫ್ಲೆಚರ್ 37 ಎಸೆತಗಳಲ್ಲಿ 56 ರನ್ ಗಳಿಸಿದರು. ಇದರಲ್ಲಿ 7 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದೆ. ವಿಲ್ ಸ್ಮಿಡ್ 36 ಎಸೆತಗಳಲ್ಲಿ 63 ರನ್ ಗಳಿಸಿದರೆ, ನಾಯಕ ಶೆಫ್ರಾನ್ ರುದರ್‌ಫೋರ್ಡ್ 27 ಎಸೆತಗಳಲ್ಲಿ 65 ರನ್ ಗಳಿಸಿ ಅಜೇಯರಾಗಿ ಉಳಿದರು. ರುದರ್‌ಫೋರ್ಡ್ 241 ಸ್ಟ್ರೈಕ್ ರೇಟ್‌’ನಲ್ಲಿ ರನ್ ಗಳಿಸಿದರು. ಇದರಲ್ಲಿ 5 ಬೌಂಡರಿ ಹಾಗೂ 5 ಸಿಕ್ಸರ್‌’ಗಳು ಸೇರಿವೆ. ಈ ಪಂದ್ಯದಲ್ಲಿ ಒಟ್ಟು 27 ಸಿಕ್ಸರ್‌’ಗಳು ದಾಖಲಾಗಿದ್ದು, ಸೇಂಟ್ ಕಿಟ್ಸ್ 10 ಮತ್ತು ಬಾರ್ಬಡೋಸ್ ರಾಯಲ್ಸ್ 17 ಸಿಕ್ಸರ್ ಬಾರಿಸಿವೆ.

ಇದನ್ನೂ ಓದಿ: ಕ್ರೀಡಾ ನಿರೂಪಕಿಯರ ಅಂದಕ್ಕೆ ಫಿದಾ ಆಗಿ ಅವರನ್ನೇ ವಿವಾಹವಾದ ಕ್ರಿಕೆಟಿಗರು ಇವರು

ವೃತ್ತಿಜೀವನದ 100 ಸಿಕ್ಸರ್‌’ಗಳು ಪೂರ್ಣ:

ರಹಕೀಮ್ ಕಾರ್ನ್‌ವಾಲ್ ಅವರ T20 ವೃತ್ತಿಜೀವನದಲ್ಲಿ 100 ಸಿಕ್ಸರ್‌’ಗಳು ಪೂರ್ಣಗೊಂಡಿವೆ. ಇದುವರೆಗೆ ಟಿ20ಯಲ್ಲಿ 34 ವಿಕೆಟ್ ಪಡೆದಿದ್ದಾರೆ. 10 ರನ್‌’ಗಳಿಗೆ 3 ವಿಕೆಟ್‌ ಕಬಳಿಸಿದ್ದು ಅತ್ಯುತ್ತಮ ಪ್ರದರ್ಶನವಾಗಿದೆ. ಕಾರ್ನ್‌ವಾಲ್ ತಮ್ಮ ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ ವೆಸ್ಟ್ ಇಂಡೀಸ್ ಪರ 10 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 2 ಅರ್ಧಶತಕಗಳ ನೆರವಿನಿಂದ 261 ರನ್ ಗಳಿಸಿ 35 ವಿಕೆಟ್ ಪಡೆದಿದ್ದಾರೆ. ಇನ್ನು ಇತ್ತೀಚೆಗಷ್ಟೇ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಕಾಣಿಸಿಕೊಂಡು ವಿರಾಟ್ ಕೊಹ್ಲಿ ವಿಕೆಟ್ ಕಬಳಿಸಿ ಶಾಕ್ ನೀಡಿದ್ದರು.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News