ನವದೆಹಲಿ: ಫಿನ್ಲೆಂಡ್ನಲ್ಲಿ ನಡೆದ IAAF ವಿಶ್ವ ಅಂಡರ್ -20 ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಹಿಮಾದಾಸ್ 400 ಮೀಟರ್ ಓಟದ  ಫೈನಲ್ ನಲ್ಲಿ ಚಿನ್ನದ ಪದಕವನ್ನು ಕೊರಳಿಗೆ ಏರಿಸಿಕೊಂಡರು. ಆ ಮೂಲಕ ಇದೆ ಮೊದಲ ಬಾರಿಗೆ ಭಾರತೀಯರೊಬ್ಬರು ಜಾಗತಿಕ ಮಟ್ಟದ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಸಾಧನೆಯನ್ನು ಮಾಡಿದರು.


COMMERCIAL BREAK
SCROLL TO CONTINUE READING

ಹಿಮಾ ದಾಸ್ ಅವರ ಚಿನ್ನದ ಓಟದ ಕ್ಷಣಗಳನ್ನು ನೀವು ಒಮ್ಮೆ ಇಲ್ಲಿ ನೋಡಿ... 


ಕೇವಲ 18 ವರ್ಷದವರಾದ  ಹಿಮಾದಾಸ್ 51.46 ಸೆಕಂಡ್ ಗಲ್ಲಿ ಗುರಿ ತಲುಪುವ ಮೂಲಕ ಮೊದಲ ಸ್ಥಾನವನ್ನು ಪಡೆದರು. ರೊಮೇನಿಯಾದ ಮಿಕ್ಲೋಸ್ 52.07 ಬೆಳ್ಳಿ ಪಡೆದರು ಮತ್ತು ಅಮೆರಿಕಾದ ಟೇಲರ್ ಮ್ಯಾನ್ಸನ್ 52.28 ರಲ್ಲಿ ಮೂರನೇ ಸ್ಥಾನ ಪಡೆದು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.