ವಿಶ್ವಕಪ್ ಆರಂಭಕ್ಕೂ ಮುನ್ನ ಬಿಗ್ ಶಾಕ್! ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ 5 ವರ್ಷ ನಿಷೇಧಕ್ಕೊಳಗಾದ ಸ್ಟಾರ್ ಕ್ರಿಕೆಟಿಗ
Devon Thomas ban: ಶ್ರೀಲಂಕಾ ಕ್ರಿಕೆಟ್, ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಮತ್ತು ಕೆರಿಬಿಯನ್ ಪ್ರೀಮಿಯರ್ ಲೀಗ್’ನ ಭ್ರಷ್ಟಾಚಾರ-ವಿರೋಧಿ ಕೋಡ್’ಗಳನ್ನು ಉಲ್ಲಂಘಿಸಿದ್ದು, ಈ ತಪ್ಪನ್ನು ಥಾಮಸ್ ಒಪ್ಪಿಕೊಂಡಿದ್ದಾರೆ ಎಂದು ದುಬೈ ಮೂಲದ ಐಸಿಸಿ ಹೇಳಿದೆ.
Devon Thomas ban: ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್ ಡೆವೊನ್ ಥಾಮಸ್’ಗೆ ಐಸಿಸಿ ಐದು ವರ್ಷಗಳ ನಿಷೇಧ ಹೇರಿದೆ.
ಶ್ರೀಲಂಕಾ ಕ್ರಿಕೆಟ್, ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಮತ್ತು ಕೆರಿಬಿಯನ್ ಪ್ರೀಮಿಯರ್ ಲೀಗ್’ನ ಭ್ರಷ್ಟಾಚಾರ-ವಿರೋಧಿ ಕೋಡ್’ಗಳನ್ನು ಉಲ್ಲಂಘಿಸಿದ್ದು, ಈ ತಪ್ಪನ್ನು ಥಾಮಸ್ ಒಪ್ಪಿಕೊಂಡಿದ್ದಾರೆ ಎಂದು ದುಬೈ ಮೂಲದ ಐಸಿಸಿ ಹೇಳಿದೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಎಳನೀರಿಗೆ ಈ 3 ವಸ್ತು ಬೆರೆಸಿ ಕುಡಿದರೆ ಸಾಕು ಆರೋಗ್ಯದಲ್ಲಾಗುತ್ತೆ ಮ್ಯಾಜಿಕ್!
ಈ ಉಲ್ಲಂಘನೆಗಳು ಆಟಗಳ ಫಲಿತಾಂಶವನ್ನು ಸರಿಪಡಿಸಲು ಪ್ರಯತ್ನಿಸುವುದಕ್ಕೆ ಸಂಬಂಧಿಸಿವೆ ಮತ್ತು ಸಾಕ್ಷ್ಯವನ್ನು ಮರೆಮಾಚುವ, ಹಾಳುಮಾಡುವ ಅಥವಾ ನಾಶಪಡಿಸುವ ಮೂಲಕ ತನಿಖೆಗಳನ್ನು ತಡೆಯುತ್ತದೆ ಎಂದು ಐಸಿಸಿ ಹೇಳಿಕೊಂಡಿದೆ.
ಐಸಿಸಿ ಜನರಲ್ ಮ್ಯಾನೇಜರ್ ಅಲೆಕ್ಸ್ ಮಾರ್ಷಲ್ ಈ ಬಗ್ಗೆ ಮಾತನಾಡಿದ್ದು, “ಈ ನಿಷೇಧವು ಸೂಕ್ತವಾಗಿದ್ದು ನಮ್ಮ ಆಟವನ್ನು ಭ್ರಷ್ಟಗೊಳಿಸುವ ಪ್ರಯತ್ನಗಳನ್ನು ಕಠಿಣವಾಗಿ ಎದುರಿಸಲಾಗುವುದು ಎಂದು ಆಟಗಾರರು ಮತ್ತು ಭ್ರಷ್ಟರಿಗೆ ಬಲವಾದ ಸಂದೇಶವನ್ನು ನೀಡುತ್ತದೆ” ಎಂದು ಹೇಳಿದರು.
ಇದನ್ನೂ ಓದಿ: 103 ವರ್ಷದ CSK ‘ಸೂಪರ್’ ಅಭಿಮಾನಿಗೆ ಧೋನಿಯಿಂದ ವಿಶೇಷ ಗಿಫ್ಟ್!
34 ವರ್ಷದ ಬ್ಯಾಟ್ಸ್‌ಮನ್ ಡೆವೊನ್ ಥಾಮನ್ 2009 ರಲ್ಲಿ ವೆಸ್ಟ್ ಇಂಡೀಸ್’ಗೆ ಪಾದಾರ್ಪಣೆ ಮಾಡಿದ್ದು, 2022 ರಲ್ಲಿ ಕೊನೆಯ ಪಂದ್ಯವನ್ನಾಡಿದ್ದರು. ಅಂದಹಾಗೆ 2011ರ ವಿಶ್ವಕಪ್’ನಲ್ಲಿ ವೆಸ್ಟ್ ಇಂಡೀಸ್ ತಂಡದ ಭಾಗವಾಗಿದ್ದ ಡೆವೊನ್, ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಒಂದು ಟೆಸ್ಟ್, 21 ODI ಮತ್ತು 12 T20 ಪಂದ್ಯಗಳನ್ನು ಆಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.