ಸ್ನಿಕೋದಲ್ಲಿ ಸ್ಪೈಕ್ ಬಾರದಿದ್ದರೂ ಯಶಸ್ವಿ ಔಟ್ ಎಂದ ಥರ್ಡ್ ಅಂಪೈರ್! ವಿವಾದದ ಬಗ್ಗೆ ಮೌನ ಮುರಿದ ನಾಯಕ ರೋಹಿತ್ ಶರ್ಮಾ ಹೇಳಿದ್ದೇನು?
Rohit Sharma statement on Yashasvi Jaiswal: ಪಂದ್ಯದ ಐದನೇ ದಿನದಂದು ಯಶಸ್ವಿ ಜೈಸ್ವಾಲ್ ಔಟ್ ಆಗಿರುವ ವಿಚಾರಕ್ಕೆ ಸಂಬಂಧಿಸಿ ಸಾಕಷ್ಟು ವಿವಾದಗಳು ಉಂಟಾಗಿದ್ದವು. ಇದೀಗ ನಾಯಕ ರೋಹಿತ್ ಶರ್ಮಾ ಆ ಬಗ್ಗೆ ತಮ್ಮ ಅಭಿಪ್ರಾಯವನ್ನು ಮುಂದಿಟ್ಟಿದ್ದಾರೆ.
Rohit Sharma statement on Yashasvi Jaiswal: ಮೆಲ್ಬೋರ್ನ್‌ನಲ್ಲಿ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಕಾಂಗರೂ ತಂಡ 2-1 ಮುನ್ನಡೆ ಸಾಧಿಸಿದೆ. ಇದೀಗ ಸರಣಿಯನ್ನು ಉಳಿಸಿಕೊಳ್ಳಬೇಕಾದರೆ ಜನವರಿ 3ರಿಂದ ಆರಂಭವಾಗಲಿರುವ ಸಿಡ್ನಿ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಗೆಲ್ಲಲೇಬೇಕಿದೆ.
ಇದನ್ನೂ ಓದಿ: ಕೇವಲ 2 ನಿಮಿಷಗಳಲ್ಲಿ ಹಲ್ಲಿನಲ್ಲಿ ಅಂಟಿರುವ ಹಳದಿ ಕಲೆಗಳನ್ನು ತೆಗೆದು ಹಾಕುತ್ತದೆ ಈ ಹಣ್ಣಿನ ಸಿಪ್ಪೆ!
ಇನ್ನು ಪಂದ್ಯದ ಐದನೇ ದಿನದಂದು ಯಶಸ್ವಿ ಜೈಸ್ವಾಲ್ ಔಟ್ ಆಗಿರುವ ವಿಚಾರಕ್ಕೆ ಸಂಬಂಧಿಸಿ ಸಾಕಷ್ಟು ವಿವಾದಗಳು ಉಂಟಾಗಿದ್ದವು. ಇದೀಗ ನಾಯಕ ರೋಹಿತ್ ಶರ್ಮಾ ಆ ಬಗ್ಗೆ ತಮ್ಮ ಅಭಿಪ್ರಾಯವನ್ನು ಮುಂದಿಟ್ಟಿದ್ದಾರೆ.
ಯಶಸ್ವಿ ಔಟ್ ಆಗಿಲ್ಲ, ಇದು ತಪ್ಪು ತೀರ್ಪು ಎಂದು ಅಂಪೈರ್ ವಿರುದ್ಧ ಅನೇಕರು ಆರೋಪಗಳನ್ನು ಮಾಡುತ್ತಿದ್ದರೆ, ರೋಹಿತ್ ಶರ್ಮಾ ಮಾತ್ರ, "ನನ್ನ ಪ್ರಕಾರ ಬಾಲ್ ಬ್ಯಾಟ್ ಟಚ್ ಆಗಿದೆ ಎಂದನಿಸುತ್ತದೆ" ಎಂದು ಹೇಳಿಕೆ ನೀಡಿದ್ದಾರೆ. ಸ್ನಿಕ್ಕೊದಲ್ಲಿ ಯಾವುದೇ ಸ್ಟ್ರೈಕ್ ಕಂಡುಬರದಿದ್ದರೂ, ಮೂರನೇ ಅಂಪೈರ್ ಜೈಸ್ವಾಲ್ ಅವರನ್ನು ಔಟ್ ಎಂದು ಘೋಷಿಸಿದರು. ಅದಕ್ಕೂ ಮುನ್ನ ಆನ್-ಫೀಲ್ಡ್ ಅಂಪೈರ್ ಜೋಯಲ್ ವಿಲ್ಸನ್ ಔಟ್ ಇಲ್ಲ ಎಂದು ಹೇಳಿದ್ದರು. ಆ ಬಳಿಕ ಆಸ್ಟ್ರೇಲಿಯ ನಾಯಕ ಕಮ್ಮಿನ್ಸ್ ಈ ನಿರ್ಧಾರದ ವಿರುದ್ಧ ವಿಮರ್ಶೆ ಮಾಡಲು ಮನವಿ ಸಲ್ಲಿಸಿದರು. ಆಗ ಮೂರನೇ ಅಂಪೈರ್ ಸೈಕತ್, ಸ್ನಿಕೊದಲ್ಲಿ ಯಾವುದೇ ಚಲನೆ ಕಾಣಿಸದಿದ್ದರೂ, ಚೆಂಡು ದಿಕ್ಕನ್ನು ಬದಲಿಸಿದ ಕಾರಣ ಜೈಸ್ವಾಲ್ ಅವರನ್ನು ಔಟ್ ಎಂದು ಘೋಷಿಸಿದರು. ಅವರ ನಿರ್ಧಾರದ ನಂತರ, ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿದ್ದ ಭಾರತೀಯ ಅಭಿಮಾನಿಗಳು 'ಬೀಮಾನ್-ಬೀಮಾನ್' ಎಂದು ಘೋಷಣೆಗಳನ್ನು ಎತ್ತಲು ಪ್ರಾರಂಭಿಸಿದರು. ಜೈಸ್ವಾಲ್ 208 ಎಸೆತಗಳಲ್ಲಿ 84 ರನ್ ಗಳಿಸಿ ಔಟಾದರು. ಅವರು ಔಟಾದ ಕೂಡಲೇ ಪಂದ್ಯವನ್ನು ಉಳಿಸುವ ಭಾರತದ ಭರವಸೆ ಕೊನೆಗೊಂಡಿತು.
ರೋಹಿತ್ ಶರ್ಮಾ ಹೇಳಿದ್ದೇನು?
ಥರ್ಡ್ ಅಂಪೈರ್ ನಿರ್ಧಾರದ ನಂತರ, ಜೈಸ್ವಾಲ್ ಆನ್‌ಫೀಲ್ಡ್ ಅಂಪೈರ್ ಜೊತೆ ಮಾತನಾಡಿದ್ದಾರೆ. ಆದರೆ ಯಾವುದೇ ಪ್ರಯೊಜನವಾಗದೆ ಪೆವಿಲಿಯನ್‌ಗೆ ಮರಳಿದ್ದಾರೆ. ಇನ್ನು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಕೇಳಿದಾಗ ರೋಹಿತ್, "ತಂತ್ರಜ್ಞಾನವು ಏನನ್ನೂ ತೋರಿಸದ ಕಾರಣ ನನಗೆ ಏನು ಮಾಡಬೇಕೆಂದು ತೋಚಲಿಲ್ಲ, ಆದರೆ ಬಾಲ್ ಟಚ್ ಆಗುರಬಹುದು ಎಂದನಿಸುತ್ತದೆ" ಎಂದು ಹೇಳಿದರು.
ಇದನ್ನೂ ಓದಿ: BBK 11: ಮಿಡ್ ವೀಕ್ ಎಲಿಮಿನೇಷನ್ ಮೂಲಕ ಒಂದೇ ದಿನ ಮೂವರು ಹೊರ ಹೋಗ್ತಾರಾ? ಬಿಗ್‌ಬಾಸ್ ರಣತಂತ್ರ ಏನು?
"ಅಂಪೈರ್ ತಂತ್ರಜ್ಞಾನವನ್ನು ಹೇಗೆ ಬಳಸಬೇಕೆಂದು ನನಗೆ ತಿಳಿದಿಲ್ಲ, ಆದರೆ ನ್ಯಾಯಯುತವಾಗಿ ಚೆಂಡು ಟಚ್ ಆಗಿದೆ ಎಂದು ನಾನು ಭಾವಿಸುತ್ತೇನೆ. ಆಗಾಗ ಅದರ ಭಾರವನ್ನು ನಾವೇ ಅನುಭವಿಸಬೇಕಾಗುತ್ತದೆ ಅಷ್ಟೇ. ಇದು ಸಾರ್ವಕಾಲಿಕ ಸಂಭವಿಸುತ್ತದೆ, ನಾವು ಸ್ವಲ್ಪ ದುರದೃಷ್ಟವಂತರಾಗಿದ್ದೇವೆ" ಎಂದಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ