ದ್ರಾವಿಡ್ ಅಧಿಕಾರಾವಧಿ ಅಂತ್ಯ: ಟಿ20 ವಿಶ್ವಕಪ್’ಗೆ ಮುನ್ನ ಭಾರತದ ಮುಖ್ಯ ಕೋಚ್ ಆಗಿ ಈ ದಿಗ್ಗಜ ನೇಮಕ!
Head coach of Indian team after Rahul Dravid: ಟೀಂ ಇಂಡಿಯಾದ ಮುಖ್ಯ ಕೋಚ್ ಬಗ್ಗೆ ನಡೆಯುತ್ತಿರುವ ಚರ್ಚೆಗಳ ನಡುವೆ, ಭಾರತ ತಂಡವನ್ನು ಸೇರುವ ಪ್ರಬಲ ಸಾಧ್ಯತೆಯನ್ನು ಹೊಂದಿರುವ ಮೂವರು ದಿಗ್ಗಜರು ಯಾರೆಂದು ತಿಳಿಯೋಣ.
Head coach of Indian team after Rahul Dravid: ರಾಹುಲ್ ದ್ರಾವಿಡ್ ಪ್ರಸ್ತುತ ಭಾರತ ತಂಡದ ಮುಖ್ಯ ಕೋಚ್ ಆಗಿದ್ದಾರೆ. ಆದರೆ ಅವರ ಅಧಿಕಾರಾವಧಿಯು 2024ರ ಟಿ 20 ವಿಶ್ವಕಪ್’ವರೆಗೆ ಮಾತ್ರ ಇದೆ. ಆ ಬಳಿಕ ಟೀಂ ಇಂಡಿಯಾಗೆ ನೂತನ ಕೋಚ್ ನೇಮಕಗೊಳ್ಳಲಿದ್ದಾರೆ. ಅಷ್ಟೇ ಅಲ್ಲ, ಹೊಸ ಕೋಚ್ ನಂತರ ಕೋಚಿಂಗ್ ಸಿಬ್ಬಂದಿಯಲ್ಲೂ ಬದಲಾವಣೆಯಾಗುವ ಸಾಧ್ಯತೆ ಇದೆ.
ಟೀಂ ಇಂಡಿಯಾದ ಮುಖ್ಯ ಕೋಚ್ ಬಗ್ಗೆ ನಡೆಯುತ್ತಿರುವ ಚರ್ಚೆಗಳ ನಡುವೆ, ಭಾರತ ತಂಡವನ್ನು ಸೇರುವ ಪ್ರಬಲ ಸಾಧ್ಯತೆಯನ್ನು ಹೊಂದಿರುವ ಮೂವರು ದಿಗ್ಗಜರು ಯಾರೆಂದು ತಿಳಿಯೋಣ.
ಇದನ್ನೂ ಓದಿ: ಚಿರತೆಯಂತೆ ಜಿಗಿಯುತ್ತಾ ಬಾಲ್ ಎಸೆದು ವಿಕೆಟ್ ಕಿತ್ತ ಕೊಹ್ಲಿ! ಫ್ಯಾನ್ಸ್ ಫುಲ್ ಫಿದಾ…
ವಿವಿಎಸ್ ಲಕ್ಷ್ಮಣ್:
ಭಾರತ ತಂಡದ ಮಾಜಿ ಅನುಭವಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಈ ಬಾರಿ ಮುಖ್ಯ ಕೋಚ್ ಆಗುವ ಪ್ರಬಲ ಸಾಧ್ಯತೆ ಇದೆ. ಈ ಹಿಂದೆ ದ್ರಾವಿಡ್ ಅನುಪಸ್ಥಿತಿಯಲ್ಲಿ, ಭಾರತ ತಂಡದ ಜವಾಬ್ದಾರಿಯನ್ನು ಲಕ್ಷ್ಮಣ್ ವಹಿಸಿಕೊಂಡಿದ್ದರು. ಐಪಿಎಲ್’ನಲ್ಲಿ ಹಲವು ತಂಡಗಳಿಗೆ ಕ್ರಿಕೆಟ್‌ನ ಸೂಕ್ಷ್ಮಗಳನ್ನು ಕಲಿಸುವ ಕೌಶಲ್ಯವೂ ಲಕ್ಷ್ಮಣ್ ಅವರಲ್ಲಿದೆ. ಇದಲ್ಲದೇ ಮೂರೂ ಮಾದರಿಯಲ್ಲಿ ಕ್ರಿಕೆಟ್ ಆಡಿದ ಅನುಭವವೂ ಇದೆ. ಲಕ್ಷ್ಮಣ್ ಕ್ರಿಕೆಟ್ ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, 220 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡುವಲ್ಲಿ ಯಶಸ್ವಿಯಾಗಿದ್ದಾರೆ. 308 ಇನ್ನಿಂಗ್ಸ್’ಗಳಲ್ಲಿ 11,119 ರನ್ ಗಳಿಸಿದ್ದಾರೆ. ಲಕ್ಷ್ಮಣ್ ಟೆಸ್ಟ್ ಕ್ರಿಕೆಟ್’ನ 225 ಇನ್ನಿಂಗ್ಸ್‌ಗಳಲ್ಲಿ 45.5 ಸರಾಸರಿಯಲ್ಲಿ 8781 ರನ್ ಮತ್ತು 83 ODI ಇನ್ನಿಂಗ್ಸ್‌ಗಳಲ್ಲಿ 30.76 ಸರಾಸರಿಯಲ್ಲಿ 2338 ರನ್ ಗಳಿಸಿದ್ದಾರೆ.
ಟಾಮ್ ಮೂಡಿ
ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಟಾಮ್ ಮೂಡಿ ಹೆಸರು ಬಂದಿದೆ. ಭಾರತ ತಂಡದ ಮುಖ್ಯ ಕೋಚ್ ಆಗುವ ಆಸೆಯನ್ನು ಮೂಡಿ ಹಲವು ಬಾರಿ ವ್ಯಕ್ತಪಡಿಸಿದ್ದರೂ ಇಲ್ಲಿಯವರೆಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿಲ್ಲ. ಪ್ರಸ್ತುತ ಅವರು ಅನೇಕ ಲೀಗ್‌ಗಳಲ್ಲಿ ಇತರ ತಂಡಗಳಿಗೆ ತರಬೇತಿ ನೀಡುತ್ತಿದ್ದಾರೆ. ಅವರ ಅಪಾರ ಅನುಭವವನ್ನು ಪರಿಗಣಿಸಿ, ಬಿಸಿಸಿಐ ಅವರನ್ನು ಭಾರತ ತಂಡದ ಮುಂದಿನ ಮುಖ್ಯ ಕೋಚ್ ಮಾಡಬಹುದು.
ಇದನ್ನೂ ಓದಿ:ಟಿ20 ವಿಶ್ವಕಪ್’ಗೂ ಮುನ್ನ ಅಂತರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಘೋಷಿಸಿದ ಸ್ಟಾರ್ ಬ್ಯಾಟ್ಸ್’ಮನ್!
ರಿಕಿ ಪಾಂಟಿಂಗ್
ವರದಿಯ ಪ್ರಕಾರ, ರವಿಶಾಸ್ತ್ರಿ ಅವರ ಅಧಿಕಾರಾವಧಿ ಮುಗಿದ ನಂತರ ಬಿಸಿಸಿಐ ಆಸ್ಟ್ರೇಲಿಯಾದ ಮಾಜಿ ನಾಯಕನೊಂದಿಗೆ ಮಾತುಕತೆ ನಡೆಸಿತ್ತು, ಆದರೆ ಕಾರಣಾಂತರಗಳಿಂದ ಅವರು ಆ ಸಮಯದಲ್ಲಿ ನಿರಾಕರಿಸಿದ್ದರು. ಇದಾದ ನಂತರ ರಾಹುಲ್ ದ್ರಾವಿಡ್ ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡರು. ಆದರೆ, ಇದೀಗ ಅನುಭವಗಳನ್ನು ಪರಿಗಣಿಸಿ ಪಾಟಿಂಗ್ ಅವರನ್ನು ಈ ಸ್ಥಾನಕ್ಕೆ ನೇಮಕ ಮಾಡುವ ಚರ್ಚೆಯಾಗುತ್ತಿದೆ. ಪಾಂಟಿಂಗ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ