13 ವರ್ಷಗಳ ಸುದೀರ್ಘ ವೃತ್ತಿಜೀವನ ಅಂತ್ಯ: ಟಿ20 ವಿಶ್ವಕಪ್’ಗೂ ಮುನ್ನ ಸ್ಟಾರ್ ಆರಂಭಿಕ ಬ್ಯಾಟ್ಸ್’ಮನ್ ನಿವೃತ್ತಿ ಘೋಷಣೆ

Colin Munro Retirement: ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯು ಮುನ್ರೋ ನಿವೃತ್ತಿಯ ಸುದ್ದಿಯನ್ನು ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡಿದ್ದು, "ಕಾಲಿನ್ ಮುನ್ರೊ ಅವರು ಅಂತರಾಷ್ಟ್ರೀಯ ಕ್ರಿಕೆಟ್‌’ಗೆ ನಿವೃತ್ತಿ ಘೋಷಿಸಿದ್ದಾರೆ” ಎಂದು ಬರೆದುಕೊಂಡಿದೆ.

Written by - Bhavishya Shetty | Last Updated : May 10, 2024, 07:52 PM IST
    • ನ್ಯೂಜಿಲೆಂಡ್‌’ನ ಸ್ಫೋಟಕ ಬ್ಯಾಟ್ಸ್‌’ಮನ್ ಕಾಲಿನ್ ಮುನ್ರೊ ನಿವೃತ್ತಿ
    • ನ್ಯೂಜಿಲೆಂಡ್ ಪರ 3000ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿದ್ದ ಕಾಲಿನ್ ಮುನ್ರೊ
    • ಟೀಂ ಇಂಡಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಮುನ್ರೋ ಭರ್ಜರಿ ಶತಕ
13 ವರ್ಷಗಳ ಸುದೀರ್ಘ ವೃತ್ತಿಜೀವನ ಅಂತ್ಯ: ಟಿ20 ವಿಶ್ವಕಪ್’ಗೂ ಮುನ್ನ ಸ್ಟಾರ್ ಆರಂಭಿಕ ಬ್ಯಾಟ್ಸ್’ಮನ್ ನಿವೃತ್ತಿ ಘೋಷಣೆ title=
Colin Munro

Colin Munro Retirement: ನ್ಯೂಜಿಲೆಂಡ್‌’ನ ಸ್ಫೋಟಕ ಬ್ಯಾಟ್ಸ್‌’ಮನ್ ಕಾಲಿನ್ ಮುನ್ರೊ ಅಂತರಾಷ್ಟ್ರೀಯ ಕ್ರಿಕೆಟ್‌’ಗೆ ನಿವೃತ್ತಿ ಘೋಷಿಸಿದ್ದಾರೆ. ಕಾಲಿನ್ ಮುನ್ರೊ ನ್ಯೂಜಿಲೆಂಡ್ ಪರ 3000ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಅವರು, ಟೀಂ ಇಂಡಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಮುನ್ರೋ ಭರ್ಜರಿ ಶತಕ ಸಿಡಿಸಿದ್ದರು. ರಾಜ್‌ಕೋಟ್‌’ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಇನ್ನು ದೇಶೀಯ ಕ್ರಿಕೆಟ್‌’ನಲ್ಲಿ ಮುನ್ರೊ ಅವರ ದಾಖಲೆಯೂ ಉತ್ತಮವಾಗಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್’ಗೂ ಮುನ್ನ ಸ್ಪಿನ್ ಬೌಲಿಂಗ್ ಎದುರಿಸಲು ವಿರಾಟ್ ಹೊಸ ಪ್ಲಾನ್!

ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯು ಮುನ್ರೋ ನಿವೃತ್ತಿಯ ಸುದ್ದಿಯನ್ನು ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡಿದ್ದು, "ಕಾಲಿನ್ ಮುನ್ರೊ ಅವರು ಅಂತರಾಷ್ಟ್ರೀಯ ಕ್ರಿಕೆಟ್‌’ಗೆ ನಿವೃತ್ತಿ ಘೋಷಿಸಿದ್ದಾರೆ” ಎಂದು ಬರೆದುಕೊಂಡಿದೆ.

ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ 123 ಪಂದ್ಯಗಳನ್ನು ಆಡಿರುವ ಮುನ್ರೊ, ನ್ಯೂಜಿಲೆಂಡ್ ಪರ ಒಂದು ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. ಇನ್ನು 2013 ರಲ್ಲಿ ODI ಗೆ ಪಾದಾರ್ಪಣೆ ಮಾಡಿದ ಅವರು, ಕೊನೆಯ ಪಂದ್ಯವನ್ನು ಜೂನ್ 2019 ರಲ್ಲಿ ಆಡಿದ್ದರು. 2012 ರಲ್ಲಿ ಟಿ20 ಅಂತರಾಷ್ಟ್ರೀಯ ಪದಾರ್ಪಣೆ ಮಾಡಿದ ಮುನ್ರೋ, ಕೊನೆಯ ಪಂದ್ಯವನ್ನು ಫೆಬ್ರವರಿ 2020 ರಲ್ಲಿ ಭಾರತದ ವಿರುದ್ಧ ಆಡಿದ್ದರು.

ಟೀಂ ಇಂಡಿಯಾ ವಿರುದ್ಧ ಮುನ್ರೋ ಸ್ಫೋಟಕ ಇನ್ನಿಂಗ್ಸ್ ಆಡಿದ್ದಾರೆ. 2017ರ ನವೆಂಬರ್‌’ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಟಿ20 ಸರಣಿ ನಡೆದಿತ್ತು. ಇದರ ಎರಡನೇ ಪಂದ್ಯ ರಾಜ್‌ಕೋಟ್‌ನಲ್ಲಿ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 196 ರನ್ ಗಳಿಸಿತು. ಈ ವೇಳೆ ಮುನ್ರೊ 58 ಎಸೆತಗಳಲ್ಲಿ ಅಜೇಯ 109 ರನ್ ಗಳಿಸಿದ್ದರು. ಈ ಇನ್ನಿಂಗ್ಸ್’ನಲ್ಲಿ 7 ಬೌಂಡರಿ ಮತ್ತು 7 ಸಿಕ್ಸರ್‌’ಗಳನ್ನು ಬಾರಿಸಿದ್ದರು. ನ್ಯೂಜಿಲೆಂಡ್ ನೀಡಿದ ಗುರಿ ಬೆನ್ನತ್ತಿದ್ದ ಭಾರತ ತಂಡ ಕೇವಲ 156 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ 40 ರನ್‌ಗಳಿಂದ ಸೋಲನುಭವಿಸಿತ್ತು.

ಇದನ್ನೂ ಓದಿ:  ಚಿರತೆಯಂತೆ ಜಿಗಿಯುತ್ತಾ ಬಾಲ್ ಎಸೆದು ವಿಕೆಟ್ ಕಿತ್ತ ಕೊಹ್ಲಿ! ಫ್ಯಾನ್ಸ್ ಫುಲ್ ಫಿದಾ…

ಕಾಲಿನ್ ಮುನ್ರೊ ನ್ಯೂಜಿಲೆಂಡ್ ಪರ 65 ಟಿ20 ಪಂದ್ಯಗಳನ್ನು ಆಡಿದ್ದು, ಈ ಅವಧಿಯಲ್ಲಿ 1724 ರನ್ ಗಳಿಸಿದ್ದಾರೆ. ಈ ಮಾದರಿಯಲ್ಲಿ 3 ಶತಕ ಮತ್ತು 11 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಇನ್ನೊಂದೆಡೆ 57 ಏಕದಿನ ಪಂದ್ಯಗಳನ್ನು ಆಡಿರುವ ಅವರು, 8 ಅರ್ಧ ಶತಕಗಳ ಸಹಾಯದಿಂದ 1271 ರನ್ ಗಳಿಸಿದ್ದಾರೆ. ಒಂದು ಟೆಸ್ಟ್ ಪಂದ್ಯವನ್ನೂ ಆಡಿರುವ ಕಾಲಿನ್ ಮುನ್ರೊ, ಬೌಲಿಂಗ್‌ನಲ್ಲೂ ಮಿಂಚಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News