India vs South Africa 1st Test: ಭಾರತೀಯ ಕ್ರಿಕೆಟ್ ತಂಡವು ಇಂದಿನಿಂದ ಸೆಂಚುರಿಯನ್‌’ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯವನ್ನು (IND vs SA 1st Test) ಆಡಲಿದೆ. ಒಂದು ವೇಳೆ ಈ ಸರಣಿಯಲ್ಲಿ ಭಾರತ ಗೆಲುವು ಸಾಧಿಸಿದರೆ, 31 ವರ್ಷಗಳ ಬಳಿಕ ಇತಿಹಾಸವೇ ಸೃಷ್ಟಿಯಾಗಲಿದೆ. ಅಷ್ಟೇ ಅಲ್ಲದೆ, 31 ವರ್ಷಗಳ ನಂತರ ಈ ಸಾಧನೆ ಮಾಡಿದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗುತ್ತಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಭಾರತಕ್ಕೆ ಅನೇಕ ಪದಕ ಗೆದ್ದುಕೊಟ್ಟ ಕುಸ್ತಿಪಟು "ಸಾಕ್ಷಿ ಮಲಿಕ್ " ನಿವೃತ್ತಿ ಘೋಷಣೆ !


ಈ ಟೆಸ್ಟ್ ಮೂಲಕ ರೋಹಿತ್ ಶರ್ಮಾ ನಾಯಕನಾಗಿ ತಂಡಕ್ಕೆ ಮರಳಲಿದ್ದಾರೆ. ಏಕದಿನ ವಿಶ್ವಕಪ್‌’ನಿಂದ ಬಳಿಕ ಕ್ರಿಕೆಟ್‌ನಿಂದ ವಿರಾಮ ಹೊಂದಿದ್ದರು. ಇನ್ನೊಂದೆಡೆ ವಿರಾಟ್ ಮತ್ತು ಜಸ್ಪ್ರೀತ್ ಬುಮ್ರಾ ಕೂಡ ಟೆಸ್ಟ್ ಸರಣಿಯಿಂದ ತಂಡಕ್ಕೆ ಮರಳಲಿದ್ದಾರೆ. ಗಾಯದ ಸಮಸ್ಯೆಯಿಂದ ಶಮಿ ಆಡಲು ಸಾಧ್ಯವಾಗುತ್ತಿಲ್ಲ.


ಈ ಮಧ್ಯೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತೀಯ ಆಟಗಾರರು ಅಭ್ಯಾಸದಲ್ಲಿ ತೊಡಗಿರುವ ವಿಡಿಯೊವನ್ನು ಹಂಚಿಕೊಂಡಿತ್ತು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಹೊರತುಪಡಿಸಿ, ರವೀಂದ್ರ ಜಡೇಜಾ ಕೂಡ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವ ವಿಡಿಯೊವನ್ನು ಕಾಣಬಹುದು.


ಇದಕ್ಕೂ ಮುನ್ನ ಕೆಎಲ್ ರಾಹುಲ್ ನಾಯಕತ್ವದಲ್ಲಿ ಭಾರತ ತಂಡ ಏಕದಿನ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿತ್ತು. ಜೋಹಾನ್ಸ್‌ಬರ್ಗ್‌’ನಲ್ಲಿ ನಡೆದ ಮೊದಲ ಏಕದಿನ ಪಂದ್ಯವನ್ನು ಭಾರತ 8 ವಿಕೆಟ್‌’ಗಳಿಂದ ಗೆದ್ದುಕೊಂಡಿತು. ನಂತರ ದಕ್ಷಿಣ ಆಫ್ರಿಕಾ ಎರಡನೇ ಏಕದಿನ ಪಂದ್ಯದಲ್ಲಿ ಪ್ರತಿದಾಳಿ ನಡೆಸಿ 8 ವಿಕೆಟ್‌ಗಳಿಂದ ಗೆದ್ದಿತು. ಪಾರ್ಲ್‌’ನ ಬೋಲ್ಯಾಂಡ್ ಪಾರ್ಕ್‌’ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಭಾರತ 78 ರನ್‌’ಗಳಿಂದ ಸರಣಿಯನ್ನು ಗೆದ್ದುಕೊಂಡಿತು. ಸೂರ್ಯಕುಮಾರ್ ಯಾದವ್ ಟಿ 20 ಸರಣಿಯಲ್ಲಿ ಟೀಮ್ ಇಂಡಿಯಾದ ನಾಯಕತ್ವವನ್ನು ವಹಿಸಿಕೊಂಡಿದ್ದು, 3 ಪಂದ್ಯಗಳ ಸರಣಿಯು ಡ್ರಾ ದಲ್ಲಿ ಅಂತ್ಯಗೊಂಡಿತು.


ಇದನ್ನೂ ಓದಿ: ಮೋದಿ ಆಡಳಿತದಲ್ಲಿ ಭಾರತ: ಬದಲಾಗುತ್ತಿರುವ ರಾಷ್ಟ್ರದಲ್ಲಿ ನಾಯಕತ್ವ, ಪ್ರಗತಿಗಳೊಡನೆ ವಿವಾದಗಳ ಹುತ್ತ


ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ತಂಡ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಮೊದಲ ಟೆಸ್ಟ್ ಪಂದ್ಯ ಸೆಂಚುರಿಯನ್‌’ ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆಯಲಿದೆ. ಟೆಸ್ಟ್ ಪಂದ್ಯ ಮಧ್ಯಾಹ್ನ 1:30 ರಿಂದ ಆರಂಭವಾಗಿದ್ದು, ಪಂದ್ಯದ ನೇರ ಪ್ರಸಾರವನ್ನು ನೀವು ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌’ನಲ್ಲಿ ವೀಕ್ಷಿಸಬಹುದು.ಇನ್ನು ಲೈವ್ ಸ್ಟ್ರೀಮಿಂಗ್ ಅನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ