Shubman Gill: ಐಸಿಸಿ ವಿಶ್ವಕಪ್ ಅದಾಗಲೇ ಪ್ರಾರಂಭವಾಗಿದೆ. ಟೀಂ ಇಂಡಿಯಾ ಆಸೀಸ್ ವಿರುದ್ಧ ಗೆಲುವಿನ ನಗೆ ಬೀರಿದೆ. ಆದರೆ ಈ ಮಧ್ಯೆ ಟೀಂ ಇಂಡಿಯಾದ ಸ್ಟಾರ್ ಓಪನಿಂಗ್ ಬ್ಯಾಟ್ಸ್’ಮನ್ ಶುಭ್ಮನ್ ಗಿಲ್ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇಂದು ಡಿಸ್ಚಾರ್ಜ್ ಆಗಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ; ಟೀಂ ಇಂಡಿಯಾ ಬ್ರೇಕ್ ಮಾಡಿದ 31 ವರ್ಷಗಳಷ್ಟು ಹಳೆಯ ಆಸ್ಟ್ರೇಲಿಯಾ ತಂಡದ ಅಜೇಯ ದಾಖಲೆ ಯಾವುದು ಗೊತ್ತಾ


ಇನ್ನೊಂದೆಡೆ ಕೆಲ ಮೂಲಗಳ ಪ್ರಕಾರ, ಶುಭ್ಮನ್ ಗಿಲ್ ಬಹುತೇಕ ವಿಶ್ವಕಪ್’ನಿಂದ ಹೊರಬಿದ್ದಿದ್ದು, ಬಿಸಿಸಿಐ ಬದಲಿ ಆಟಗಾರನಿಗಾಗಿ ಹುಡುಕಾಟ ನಡೆಸುತ್ತಿದೆ.


ಇನ್ನು ಶುಭ್ಮನ್ ಗಿಲ್ ಆರೋಗ್ಯದ ಬಗ್ಗೆ ಬಿಸಿಸಿಐ ಹೇಳಿಕೆ ಹೊರಡಿಸಿದ್ದು, “ಶುಭ್ಮನ್ ಗಿಲ್ ಅಕ್ಟೋಬರ್ 9, 2023 ರಂದು ತಂಡದೊಂದಿಗೆ ದೆಹಲಿಗೆ ಪ್ರಯಾಣಿಸುವುದಿಲ್ಲ. ICC ಪುರುಷರ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ನಡೆದ ತಂಡದ ಮೊದಲ ಪಂದ್ಯವನ್ನು ಮಿಸ್ ಮಾಡಿಕೊಂಡ ಆರಂಭಿಕ ಬ್ಯಾಟರ್, ದೆಹಲಿಯಲ್ಲಿ ನಡೆಯಲಿರುವ ಅಫ್ಘಾನಿಸ್ತಾನ ವಿರುದ್ಧದ ಮುಂದಿನ ಪಂದ್ಯವನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಪ್ರಸ್ತುತ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿರುತ್ತಾರೆ” ಎಂದು ತಿಳಿಸಿದೆ.


ಶುಭ್ಮನ್ ಚೇತರಿಸಿಕೊಳ್ಳಲು ಎಷ್ಟು ಸಮಯ ಬೇಕು?


ಶುಭ್ಮನ್ ಗಿಲ್ ಚೇತರಿಸಿಕೊಳ್ಳುತ್ತಿದ್ದರೂ ಸಹ ಇಷ್ಟೇ ಸಮಯದೊಳಗೆ ಗುಣಮುಖವಾಗುತ್ತಾರೆ ಎಂದು ಹೇಳುವುದು ಕಷ್ಟ. ಮಾಧ್ಯಮ ವರದಿಯ ಪ್ರಕಾರ, ಶುಭಮನ್ ಗಿಲ್ ಈಗಾಗಲೇ 70-80% ಚೇತರಿಸಿಕೊಂಡಿದ್ದಾರೆ. ಆದರೆ, ಡೆಂಗ್ಯೂ ಕಾರಣದಿಂದ ಮೈದಾನಕ್ಕೆ ಇಳಿಯಲು ಇನ್ನೂ ಎರಡು ವಾರಗಳು ಬೇಕಾಗುತ್ತದೆ. ಆದ್ದರಿಂದ, ಇದು ಇನ್ನೂ ಸುದೀರ್ಘ ಪ್ರಕ್ರಿಯೆಯಾಗಿದೆ.


ಶುಭ್ಮನ್ ಬದಲಿಗೆ ಈ ಆಟಗಾರನಿಗೆ ಸಿಗಬಹುದೇ ಸ್ಥಾನ?


ಟೀಂ ಇಂಡಿಯಾದ ಪ್ರಮುಖ ಆಟಗಾರರಲ್ಲಿ ಸಂಜು ಸ್ಯಾಮ್ಸನ್‌ ಕೂಡ ಒಬ್ಬರು. ಪ್ರಭಾವಶಾಲಿ ಆಟವಾಡಿದರೂ ಸಹ ತಂಡದಲ್ಲಿ ಸ್ಥಾನ ಸಿಗುತ್ತಿಲ್ಲ. ಇದೀಗ ಶುಭ್ಮನ್ ಗಿಲ್ ಬಹುತೇಕ ತಂಡದಿಂದ ಹೊರ ಬೀಳುವ ಸಾಧ್ಯತೆ ಇದ್ದು, 28ರ ಹರೆಯದ ಈ ಆಟಗಾರನಿಗೆ ತಂಡದಲ್ಲಿ ಬದಲಿ ಆಟಗಾರನಾಗಿ ಸ್ಥಾನ ಸಿಗಬಹುದು ಎಂದು ಹೇಳಲಾಗುತ್ತಿದೆ. ಇನ್ನು ಈ ಎಲ್ಲಾ ನಿರ್ಧಾರಗಳು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಮುಖೇನ ಚಾಲೂ ಆಗಬೇಕಿರುವುದರಿಂದ, ಮುಂದೇನಾಗುತ್ತದೆ ಎಂದು ಕಾದುನೋಡಬೇಕಿದೆ.


ಇದನ್ನೂ ಓದಿ; Pakistan vs Sri Lanka: ಪಾಕಿಸ್ತಾನ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಗೆ ಇಳಿದ ಶ್ರೀಲಂಕಾ ನಾಯಕ...!  


ಇವರ ಹೊರತಾಗಿ ರುತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್ ಅಥವಾ ಇಶಾನ್ ಕಿಶನ್’ಗೆ ಈ ಸ್ಥಾನ ಸಿಗುವ ಸಾಧ್ಯತೆ ಇದೆ.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.