ಟೀಂ ಇಂಡಿಯಾ ಬ್ರೇಕ್ ಮಾಡಿದ 31 ವರ್ಷಗಳಷ್ಟು ಹಳೆಯ ಆಸ್ಟ್ರೇಲಿಯಾ ತಂಡದ ಅಜೇಯ ದಾಖಲೆ ಯಾವುದು ಗೊತ್ತಾ?

India break 31 year old Australian team record: ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವಿನ ಮೂಲಕ ಶುಭಾರಂಭ ಮಾಡಿದೆ.  ಈ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 200 ರನ್’​​ಗೆ ಆಲೌಟ್ ಆಗಿತ್ತು.

Written by - Bhavishya Shetty | Last Updated : Oct 10, 2023, 03:07 PM IST
    • ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾ ಗೆಲುವಿನ ಶುಭಾರಂಭ
    • 31 ವರ್ಷಗಳಷ್ಟು ಹಳೆಯದಾದ ಆಸ್ಟ್ರೇಲಿಯಾದ ಅಜೇಯ ದಾಖಲೆ ಬ್ರೇಕ್
    • ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅದ್ಭುತ ಆಟದಿಂದ ಭಾರತಕ್ಕೆ ಸ್ಮರಣೀಯ ಗೆಲುವು
ಟೀಂ ಇಂಡಿಯಾ ಬ್ರೇಕ್ ಮಾಡಿದ 31 ವರ್ಷಗಳಷ್ಟು ಹಳೆಯ ಆಸ್ಟ್ರೇಲಿಯಾ ತಂಡದ ಅಜೇಯ ದಾಖಲೆ ಯಾವುದು ಗೊತ್ತಾ? title=
World Cup 2023

IND vs AUS, World Cup 2023: ಅಕ್ಟೋಬರ್ 8ರಂದು ಚೆನ್ನೈನಲ್ಲಿ ನಡೆದ ಭಾರತ  ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ, ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತ್ತು. ಈ ಗೆಲುವಿನ ಮೂಲಕ ಹಲವು ದಾಖಲೆಗಳನ್ನು ಬ್ರೇಕ್ ಮಾಡಿತ್ತು ಭಾರತ. ಅದರಲ್ಲಿ ಒಂದು 31 ವರ್ಷಗಳಷ್ಟು ಹಳೆಯದಾದ ಆಸ್ಟ್ರೇಲಿಯಾದ ಅಜೇಯ ದಾಖಲೆ.

ಇದನ್ನೂ ಓದಿ: ಸ್ವಿಮ್ಮಿಂಗ್ ವೇಳೆ ಗಂಭೀರವಾಗಿ ಗಾಯಗೊಂಡ ಪ್ರಮುಖ ಸ್ಪಿನ್ನರ್: ವಿಶ್ವಕಪ್’ನಿಂದ ಹೊರಕ್ಕೆ…!

ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವಿನ ಮೂಲಕ ಶುಭಾರಂಭ ಮಾಡಿದೆ.  ಈ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 200 ರನ್’​​ಗೆ ಆಲೌಟ್ ಆಗಿತ್ತು. ಆ ಬಳಿಕ ಗೆಲುವಿನ ಗುರಿ ಬೆನ್ನತ್ತಿ ಕಣಕ್ಕಿಳಿದ ಭಾರತ, ಆರಂಭಿಕ ಆಘಾತ ಅನುಭವಿಸಿದರೂ, ನಂತರದಲ್ಲಿ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅದ್ಭುತ ಆಟದಿಂದ ಭಾರತಕ್ಕೆ ಸ್ಮರಣೀಯ ಗೆಲುವು ಸಿಕ್ಕಿತು.

ಈ ರೋಚಕ ಗೆಲುವಿನೊಂದಿಗೆ ಆಸ್ಟ್ರೇಲಿಯಾದ 31 ವರ್ಷಗಳಷ್ಟು ಹಳೆಯ ಅಜೇಯ ದಾಖಲೆಗೆ ಬ್ರೇಕ್ ಬಿದ್ದಿದೆ. ಕಳೆದ 31 ವರ್ಷಗಳಿಂದ ಐಸಿಸಿ ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಒಂದೇ ಒಂದು ಬಾರಿಯೂ ಕಾಂಗರೂ ಪಡೆ ಸೋತಿರಲಿಲ್ಲ. ಆ ಗೆಲುವಿನ ಓಟಕ್ಕೆ ಟೀಮ್ ಇಂಡಿಯಾ ಬ್ರೇಕ್ ಹಾಕಿದೆ.

ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಈ ತರಕಾರಿಯ ರಸ ಕುಡಿದರೆ ಒಂದೇ ವಾರದಲ್ಲಿ ಸರಾಗವಾಗಿ ಕರಗುತ್ತೆ ಹೊಟ್ಟೆಯ ಬೊಜ್ಜು

1992 ರ ನಂತರ ಮೊದಲ ಬಾರಿಗೆ ತನ್ನ ಆರಂಭಿಕ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾವು ಚೆನ್ನೈನಲ್ಲಿ ಭಾರತದ ವಿರುದ್ಧ ಸೋತಿದೆ. 1992 ರಲ್ಲಿ ಆಕ್ಲೆಂಡ್‌’ನಲ್ಲಿ ನ್ಯೂಜಿಲೆಂಡ್ ವಿರುದ್ಧ 37 ರನ್‌’ಗಳಿಂದ ಚತುರ್ವಾರ್ಷಿಕ ಪಂದ್ಯದಲ್ಲಿ ಕೊನೆಯ ಬಾರಿ ಆರಂಭಿಕ ಪಂದ್ಯದಲ್ಲಿ ಸೋಲು ಕಂಡಿತ್ತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News