Virat Kohli RCB Captaincy: ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೆ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲದ ತಂಡವಾಗಿದೆ.  ಆದರೆ ಈ ತಂಡವು ಯಾವಾಗಲೂ ಅಭಿಮಾನಿಗಳ ಹೃದಯವನ್ನು ಆಳುತ್ತದೆ.  ಐಪಿಎಲ್ 2022 (IPL 2022) ಮಾರ್ಚ್ 26 ರಿಂದ ಪ್ರಾರಂಭವಾಗಲಿದೆ ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾತ್ರ ತನ್ನ ಹೊಸ ನಾಯಕನನ್ನು ಇನ್ನೂ ಘೋಷಿಸಿಲ್ಲ. ವಿರಾಟ್ ಕೊಹ್ಲಿ ಸುಮಾರು 9 ವರ್ಷಗಳ ಕಾಲ ಈ ತಂಡದ ನಾಯಕರಾಗಿದ್ದರು. ಮಾರ್ಚ್ 12 ರಂದು ಬೆಂಗಳೂರು ತನ್ನ ಹೊಸ ನಾಯಕನನ್ನು ಘೋಷಿಸಲಿದೆ. ಆದರೆ ಈ ನಾಯಕ ಹೊಸ ಆಟಗಾರನಾಗುವನೋ ಅಥವಾ ವಿರಾಟ್ ಕೊಹ್ಲಿಯೋ ಎಂಬ ಚರ್ಚೆ ತೀವ್ರಗೊಂಡಿದೆ.


COMMERCIAL BREAK
SCROLL TO CONTINUE READING

ವಿರಾಟ್ ಮತ್ತೆ ತಂಡದ ನಾಯಕತ್ವ ಪಡೆಯುತ್ತಾರಾ?
ಐಪಿಎಲ್ 2021 ರ ದ್ವಿತೀಯಾರ್ಧದ ಮೊದಲು ವಿರಾಟ್ ಕೊಹ್ಲಿ ನಾಯಕತ್ವವನ್ನು ತೊರೆಯುವುದನ್ನು ಖಚಿತಪಡಿಸಿದ್ದರೂ, ಆರ್‌ಸಿಬಿ ಇನ್ನೂ ವಿರಾಟ್ ಕೊಹ್ಲಿಯ ರಾಜೀನಾಮೆಯನ್ನು ಅಂಗೀಕರಿಸಿಲ್ಲ. ಮಾಧ್ಯಮ ವರದಿಗಳ ಪ್ರಕಾರ ಮತ್ತೊಮ್ಮೆ ಆರ್‌ಸಿಬಿ ನಾಯಕತ್ವವನ್ನು ವಿರಾಟ್ ಕೊಹ್ಲಿಗೆ (Virat Kohli RCB Captaincy) ಹಸ್ತಾಂತರಿಸಬಹುದು ಎನ್ನಲಾಗುತ್ತಿದೆ. ವಾಸ್ತವವಾಗಿ, ವಿರಾಟ್ ಕೊಹ್ಲಿಯನ್ನು ಮತ್ತೆ ನಾಯಕನನ್ನಾಗಿ ಮಾಡುವ ಚರ್ಚೆ ವೇಗವನ್ನು ಪಡೆಯುತ್ತಿದೆ. ಏಕೆಂದರೆ ಆರ್‌ಸಿಬಿ (RCB) ಇನ್ನೂವಿರಾಟ್ ಕೊಹ್ಲಿ ರಾಜೀನಾಮೆಯನ್ನು ಅಂಗೀಕರಿಸಿಲ್ಲ. ಅಷ್ಟೇ ಅಲ್ಲದೆ, ವಿರಾಟ್ ಕೊಹ್ಲಿಯನ್ನು ಆರ್‌ಸಿಬಿ 15 ಕೋಟಿಗೆ ಉಳಿಸಿಕೊಂಡಿದೆ. 


ಇದನ್ನೂ ಓದಿ- Gautam Gambhir : ಧೋನಿ-ಕೊಹ್ಲಿಗಿಂತ ಅಪಾಯಕಾರಿ ಈ ಆಟಗಾರನ ಬ್ಯಾಟಿಂಗ್ : ಗೌತಮ್ ಗಂಭೀರ್


ಕೊಹ್ಲಿ ನಾಯಕತ್ವ ತೊರೆಯಲು ಕಾರಣ!
ಐಪಿಎಲ್ 15 ನೇ ಸೀಸನ್ ಪ್ರಾರಂಭವಾಗುವ ಸುಮಾರು ಒಂದು ತಿಂಗಳ ಮೊದಲು 'ದಿ ಆರ್‌ಸಿಬಿ ಪಾಡ್‌ಕಾಸ್ಟ್'ನಲ್ಲಿ ನಾಯಕತ್ವ ತೊರೆಯುವ ಬಗ್ಗೆ ವಿರಾಟ್ ಪ್ರಸ್ತಾಪಿಸಿದ್ದರು. ಯಾವುದೇ ರೀತಿಯ ಅಧಿಕಾರಕ್ಕೂ ಅಂಟಿಕೊಂಡು ಕೂರುವ ವ್ಯಕ್ತಿ ನಾನಲ್ಲ. ನಾನು ಏನನ್ನಾದರೂ ಆನಂದಿಸಲು ಸಾಧ್ಯವಿಲ್ಲ ಎಂದು ನಾನು ಭಾವಿಸಿದಾಗ, ನಾನು ಅದರಿಂದ ನನ್ನನ್ನು ಪ್ರತ್ಯೇಕಿಸಿಕೊಳ್ಳುತ್ತೇನೆ. ನಾನು ಆ ಕೆಲಸ ಮಾಡಲಾರೆ ಎಂದು ಅವರು ಹೇಳಿದ್ದರು.


ಕಳೆದ ವರ್ಷ ವಿರಾಟ್ ಕೊಹ್ಲಿ (Virat Kohli) ತಮ್ಮ ಅಭಿಮಾನಿಗಳಿಗೆ ಶಾಕ್ ಮೇಲೆ ಶಾಕ್ ನೀಡಿದ್ದರು. ಮೊದಲು ಟೀಮ್ ಇಂಡಿಯಾದ ಟಿ20 ನಾಯಕತ್ವವನ್ನು ತೊರೆದರು ಮತ್ತು ನಂತರ RCB ನಾಯಕತ್ವವನ್ನು ತೊರೆದರು. ನಂತರ, ವಿರಾಟ್ ಅವರನ್ನು ಏಕದಿನ ತಂಡದ ನಾಯಕತ್ವದಿಂದ ಕೈಬಿಡಲಾಯಿತು ಮತ್ತು ನಂತರ ವಿರಾಟ್ ಟೆಸ್ಟ್ ನಾಯಕತ್ವದಿಂದಲೂ ರಾಜೀನಾಮೆ ನೀಡಿದರು.


ಇದನ್ನೂ ಓದಿ- Lucknow Super Giants: ಲಾಂಚ್ ಆಗುವ ಮೊದಲೇ ಲಕ್ನೋ ಸೂಪರ್ ಜೈಂಟ್ಸ್ ಜೆರ್ಸಿ ಲೀಕ್


ಕೊಹ್ಲಿಗೆ ಆರ್‌ಸಿಬಿ ಎಂದರೆ ಬಲು ಇಷ್ಟ:
ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಐಪಿಎಲ್‌ನಲ್ಲಿ ಒಂದೇ ತಂಡದ ಪರ ಆಡುತ್ತಿರುವ ಏಕೈಕ ಆಟಗಾರ. ವಿರಾಟ್ 2008 ರಿಂದ ಆರ್‌ಸಿಬಿಯ ಭಾಗವಾಗಿದ್ದಾರೆ. ವಿರಾಟ್ ತಾವು ಐಪಿಎಲ್‌ನಲ್ಲಿ ಆಡುವವರೆಗೂ ಆರ್‌ಸಿಬಿ ಭಾಗವಾಗಿಯೇ ಉಳಿಯುವುದಾಗಿ ವಿರಾಟ್ ಒಮ್ಮೆ ಹೇಳಿದ್ದಾರೆ. ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಆರ್‌ಸಿಬಿ ಪರ 207 ಪಂದ್ಯಗಳನ್ನು ಆಡಿದ್ದಾರೆ. ವಿರಾಟ್ 37.39 ಸರಾಸರಿಯಲ್ಲಿ 6283 ರನ್ ಗಳಿಸಿದ್ದಾರೆ. ವಿರಾಟ್ ಐಪಿಎಲ್‌ನಲ್ಲಿ 5 ಶತಕ ಮತ್ತು 42 ಅರ್ಧ ಶತಕಗಳನ್ನು ಕೂಡ ಗಳಿಸಿದ್ದಾರೆ.


ಆರ್‌ಸಿಬಿಯ ಅತ್ಯಂತ ಯಶಸ್ವಿ ನಾಯಕ :
ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದುವರೆಗೆ ಆರು ನಾಯಕರನ್ನು ಪಡೆದಿದೆ. ರಾಹುಲ್ ದ್ರಾವಿಡ್, ಕೆವಿನ್ ಪೀಟರ್ಸನ್, ಅನಿಲ್ ಕುಂಬ್ಳೆ, ಡೇನಿಯಲ್ ವೆಟ್ಟೋರಿ, ವಿರಾಟ್ ಕೊಹ್ಲಿ ಮತ್ತು ಶೇನ್ ವ್ಯಾಟ್ಸನ್ ಆರ್‌ಸಿಬಿ ನಾಯಕರಾಗಿದ್ದಾರೆ. ತಂಡದ ಅತ್ಯಂತ ಯಶಸ್ವಿ ನಾಯಕ ಅನಿಲ್ ಕುಂಬ್ಳೆ. ಅನಿಲ್ ಕುಂಬ್ಳೆ ಶೇ.54.28 ಪಂದ್ಯಗಳನ್ನು ಗೆದ್ದಿದ್ದಾರೆ. ರಾಹುಲ್ ದ್ರಾವಿಡ್ ಅವರ ಗೆಲುವಿನ ಶೇಕಡಾವಾರು ಅತ್ಯಂತ ಕಳಪೆಯಾಗಿದೆ. 28.57 ರಷ್ಟು ಪಂದ್ಯಗಳನ್ನು ಮಾತ್ರ ಗೆದ್ದಿದ್ದರು. ವಿರಾಟ್ ಅವರ ಗೆಲುವಿನ ಶೇಕಡಾವಾರು 48.16 ರಷ್ಟಿದೆ ಮತ್ತು ವಿರಾಟ್ ಅವರು ದೀರ್ಘಕಾಲದವರೆಗೆ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.