ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) 2021 ರ ನಂತರ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿಕೆಟ್‌ಕೀಪರ್ ಎಬಿ ಡಿವಿಲಿಯರ್ಸ್ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದರು. ಆದ್ರೆ, ಐಪಿಎಲ್ 2022 ರ ನಂತರ, ಡಿವಿಲಿಯರ್ಸ್ ಟಿ 20 ಲೀಗ್‌ಗೆ ಮರಳಲು ಸಿದ್ಧರಾಗಿದ್ದಾರೆ. ಆದರೆ ಆಟಗಾರನಾಗಿ ಅಲ್ಲ, ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಶನಿವಾರದ (ಮಾರ್ಚ್ 12) ಈವೆಂಟ್‌ನಲ್ಲಿ, ವಿರಾಟ್ ಕೊಹ್ಲಿಯ ಆರ್‌ಸಿಬಿ(Royal Challengers Bangalore) ತಮ್ಮ ಹೊಸ ನಾಯಕನನ್ನು ಘೋಷಣೆ ಮಾಡಿಲ್ಲ. ಆದರೆ, ಫ್ರಾಂಚೈಸಿಗೆ ಡಿವಿಲಿಯರ್ಸ್ ಅನ್ನು 'ಮೆಂಟರ್' ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದೆ. ಇನ್‌ಸೈಡ್‌ಸ್ಪೋರ್ಟ್ ವೆಬ್‌ಸೈಟ್ ಪ್ರಕಾರ, ಐಪಿಎಲ್ 2021 ರ ನಂತರ ಡಿವಿಲಿಯರ್ಸ್‌ಗೆ ಕೋಚಿಂಗ್ ಸಿಬ್ಬಂದಿಗೆ 'ಮೆಂಟರ್' ಆಗಿ ಸೇರಲು ಸ್ವತಃ ಕೊಹ್ಲಿ ಕೇಳಿಕೊಂಡಿದ್ದರು.
ಇದನ್ನೂ ಓದಿ : Team India : ಟೀಂ ಇಂಡಿಯಾದ ಈ ದಿಗ್ಗಜ ಆಟಗಾರ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ!?
ಡಿವಿಲಿಯರ್ಸ್(AB de Villiers) ಕಳೆದ ಸೀಸನ್ ನಲ್ಲಿ 15 ಪಂದ್ಯಗಳಲ್ಲಿ ಎರಡು ಅರ್ಧಶತಕಗಳು ಮತ್ತು 148.34 ಸ್ಟ್ರೈಕ್ ರೇಟ್‌ನೊಂದಿಗೆ 313 ರನ್ ಗಳಿಸಿದರು. ಒಟ್ಟಾರೆ ಅವರ IPL ವೃತ್ತಿಜೀವನದಲ್ಲಿ, ಡಿವಿಲಿಯರ್ಸ್ 184 ಪಂದ್ಯಗಳಲ್ಲಿ 39.7 ರ ಸರಾಸರಿಯಲ್ಲಿ 3 ಶತಕ ಮತ್ತು 40 ಅರ್ಧಶತಕಗಳೊಂದಿಗೆ 151.68 ಸ್ಟ್ರೈಕ್-ರೇಟ್‌ನೊಂದಿಗೆ 5,162 ರನ್ ಗಳಿಸಿದರು.
ಐಪಿಎಲ್ 2022 ರ ಹೊಸ ನಾಯಕನಾಗಿ ಡಿವಿಲಿಯರ್ಸ್ ಅವರ ದೇಶದ ಆಟಗಾರ ಫಾಫ್ ಡು ಪ್ಲೆಸಿಸ್(Faf du Plessis) ಅವರನ್ನು ಆಯ್ಕೆ ಮಾಡಲು RCB ಕೂಡ ಸಜ್ಜಾಗಿದೆ. ಇದಕ್ಕಾಗಿ RCB ಮಾರ್ಚ್ 12 ರಂದು ಸಂಜೆ 4 ಗಂಟೆಗೆ ಸುದ್ದಿಗೋಷ್ಠಿಯನ್ನು ಕರೆದಿದೆ.
ಮಾರ್ಚ್ 12 ರಂದು ಚರ್ಚ್ ಸ್ಟ್ರೀಟ್(Church Street in Bengalore)ನಲ್ಲಿರುವ ಮ್ಯೂಸಿಯಂ ಕ್ರಾಸ್ ರೋಡ್‌ನಲ್ಲಿ ತಂಡದ ಹದಿನಾಲ್ಕು ವರ್ಷಗಳನ್ನು ಸಂಭ್ರಮ ಆಚರಿಸುವುದಾಗಿ ಫ್ರಾಂಚೈಸ್ ಟ್ವೀಟ್‌ನಲ್ಲಿ ತಿಳಿಸಿದೆ.
The beginning of a new era of leadership requires a BIG stage. 😎
Who is the captain of RCB for #IPL2022? Come find out on 12th March at the #RCBUnbox event on Museum Cross Road, Church Street. 🤩💪🏻#PlayBold #UnboxTheBold #ForOur12thMan pic.twitter.com/HdbA98AdXB
— Royal Challengers Bangalore (@RCBTweets) March 8, 2022
ಇದನ್ನೂ ಓದಿ : India vs SL: ಕಪಿಲ್ ದೇವ್ ದಾಖಲೆ ಹಿಂದಿಕ್ಕಿದ ನಂತರ ಆರ್.ಅಶ್ವಿನ್ ಹೇಳಿದ್ದೇನು?
RCB ಫುಲ್ ಸ್ಕ್ವಾಡ್ IPL 2022 : ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್, ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಜೋಶ್ ಹ್ಯಾಜಲ್‌ವುಡ್, ಶಹಬಾಜ್ ಅಹ್ಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಶೆರ್ಫಾ ಅಲೆನ್, ಶೆರ್ಫಾ ಅಲೆನ್ ಬೆಹ್ರೆಂಡಾರ್ಫ್, ಸುಯಶ್ ಪ್ರಭುದೇಸಾಯಿ, ಚಾಮ ಮಿಲಿಂದ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ, ಲುವ್ನಿತ್ ಸಿಸೋಡಿಯಾ, ಸಿದ್ಧಾರ್ಥ್ ಕೌಲ್.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.