ನವದೆಹಲಿ: ಪ್ರಸ್ತುತ 2021ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಆಟಗಾರರ ಹರಾಜಿಗೂ ಮೊದಲೇ ಕರ್ನಾಟಕದ ರಾಬಿನ್‌ ಉತ್ತಪ್ಪ ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ, ರಾಜಸ್ಥಾನ್‌ ರಾಯಲ್ಸ್‌ನಿಂದ ಯಶಸ್ವಿಯಾಗಿ ಕರೆದುಕೊಂಡಿತ್ತು. 12 ವರ್ಷಗಳ ಬಳಿಕ ಎಂಎಸ್‌ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ಕಡೆ ಉತ್ತಪ್ಪ ಗಮನ ಹರಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಕಳೆದ ಆವೃತ್ತಿಯಲ್ಲಿ ಉತ್ತಪ್ಪ(Robin Uthappa), ರಾಜಸ್ಥಾನ್‌ ರಾಯಲ್ಸ್ ಪರ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು.


Rajasthan Royals) ಇಟ್ಟಿದ್ದ ಭರವಸೆಯನ್ನು ಉತ್ತಪ್ಪ ಪೂರ್ಣಗೊಳಿಸುವಲ್ಲಿ ವಿಫಲರಾಗಿದ್ದರು.


ಚೆನ್ನೈ ತಂಡದ ಪರವಾಗಿ ಆಡಲಿರುವ ರಾಬಿನ್ ಉತ್ತಪ್ಪ ಧೋನಿ ಬಗ್ಗೆ ಹೇಳಿದ್ದಿಷ್ಟು...!


ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೋದಲ್ಲಿ ಮಾತನಾಡಿದ ರಾಬಿನ್‌ ಉತ್ತಪ್ಪ, ಚೆನ್ನೈ ಸೂಪರ್‌ ಕಿಂಗ್ಸ್ ಆಡುವ ಬಯಕೆ ಇದೀಗ ಈಡೇರಲಿದೆ ಎಂದರು. ಜತೆಗೆ ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಘೋಷಿಸುವುದಕ್ಕೂ ಮುನ್ನ ಎಂಎಸ್‌ ಧೋನಿ ನಾಯಕತ್ವದಲ್ಲಿ ಐಪಿಎಲ್‌(IPL 2021) ಟ್ರೋಫಿ ಗೆಲ್ಲುವ ಬಯಕೆಯನ್ನು ಉತ್ತಪ್ಪ ಹೊರಹಾಕಿದರು.


"ಅರ್ಜುನ್ ತೆಂಡೂಲ್ಕರ್ ಉತ್ಸಾಹವನ್ನು ಹತ್ಯೆಗೈಯಬೇಡಿ"


"ಸಿಎಸ್‌ಕೆ ಪರ ಆಡುವುದು ನನ್ನ ಬಯಕೆಯಾಗಿತ್ತು. 12 ರಿಂದ 13 ವರ್ಷಗಳ ಬಳಿಕ ಎಂಎಸ್‌ ಧೋನಿ(MS Dhoni) ನಾಯಕತ್ವದಲ್ಲಿ ಆಡುತ್ತಿದ್ದೇನೆ ಹಾಗೂ ವೃತ್ತಿ ಜೀವನಕ್ಕೆ ವಿದಾಯ ಹೇಳುವುದಕ್ಕೂ ಮುನ್ನ ಧೋನಿ ಅವರೊಂದಿಗೆ ಐಪಿಎಲ್‌ ಪ್ರಶಸ್ತಿ ಗೆಲ್ಲಬೇಕು," ಎಂದು ರಾಬಿನ್‌ ಉತ್ತಪ್ಪ ಸಿಎಸ್‌ಕೆ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.


ಕಪಿಲ್ ದೇವ್ ಜೀವನಾಧಾರಿತ ಸಿನಿಮಾ '83' ಜೂನ್ 4ಕ್ಕೆ ಬೆಳ್ಳಿತೆರೆಗೆ


2007ರಲ್ಲಿ ಎಂಎಸ್‌ ಧೋನಿ ನಾಯಕತ್ವದಲ್ಲಿ ಉದ್ಘಾಟನಾ ಟಿ20 ವಿಶ್ವಕಪ್(T20 Worldcup)‌ ಗೆದ್ದ ಭಾರತ ತಂಡದಲ್ಲಿ ರಾಬಿನ್‌ ಉತ್ತಪ್ಪ ಕೂಡ ಇದ್ದರು. ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಮಹತ್ವದ ಟೂರ್ನಿಯಲ್ಲಿ ಬಲಗೈ ಬ್ಯಾಟ್ಸ್‌ಮನ್‌ 113 ಸ್ಟ್ರೈಕ್‌ರೇಟ್‌ನೊಂದಿಗೆ 113 ರನ್‌ ಗಳಿಸಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.