ಕಪಿಲ್ ದೇವ್ ಜೀವನಾಧಾರಿತ ಸಿನಿಮಾ '83' ಜೂನ್ 4ಕ್ಕೆ ಬೆಳ್ಳಿತೆರೆಗೆ

ರಣವೀರ್ ಸಿಂಗ್ ಅಭಿನಯದ‘83’ ಸಿನಿಮಾ ಇದೇ 2021 ರ ಜೂನ್ 4 ರಂದು ದೇಶವ್ಯಾಪಿ ಬಿಡುಗಡೆಯಾಗಲಿದೆ. ಚಿತ್ರದ ಬಿಡುಗಡೆಯ ದಿನಾಂಕ ಚಿತ್ರದ ನಿರ್ಮಾಪಕರು ಘೋಷಿಸಿದ್ದಾರೆ.

Last Updated : Feb 20, 2021, 12:12 AM IST
  • ಈ ಚಿತ್ರವನ್ನು ಕಬೀರ್ ಖಾನ್ ನಿರ್ದೇಶಿಸಿದ್ದು, ಈಗ ಆವರು ಚಿತ್ರದ ಬಿಡುಗಡೆಯ ದಿನಾಂಕವನ್ನು ತಮ್ಮ ಸಾಮಾಜಿಕ ಮಾಧ್ಯಮದ ವೇದಿಕೆಯಲ್ಲಿ ಘೋಷಿಸಿದ್ದಾರೆ.
  • ಕಪಿಲ್ ದೇವ್ ಅವರ ಪಾತ್ರವನ್ನು ನಿರ್ವಹಿಸಿರುವ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅವರು ಈಗ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕಪಿಲ್ ದೇವ್ ಜೀವನಾಧಾರಿತ ಸಿನಿಮಾ '83' ಜೂನ್ 4ಕ್ಕೆ ಬೆಳ್ಳಿತೆರೆಗೆ  title=
file photo

ನವದೆಹಲಿ: ರಣವೀರ್ ಸಿಂಗ್ ಅಭಿನಯದ‘83’ ಸಿನಿಮಾ ಇದೇ 2021 ರ ಜೂನ್ 4 ರಂದು ದೇಶವ್ಯಾಪಿ ಬಿಡುಗಡೆಯಾಗಲಿದೆ. ಚಿತ್ರದ ಬಿಡುಗಡೆಯ ದಿನಾಂಕ ಚಿತ್ರದ ನಿರ್ಮಾಪಕರು ಘೋಷಿಸಿದ್ದಾರೆ.

ಈ ಚಿತ್ರವು ಪ್ರಮುಖವಾಗಿ 1983 ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತದ ಮೊದಲ ವಿಶ್ವಕಪ್ ಗೆಲುವನ್ನು ಆಧರಿಸಿದ ಸಿನಿಮಾವಾಗಿದ್ದು, ಸತತವಾಗಿ ಎರಡು ಬಾರಿ ವಿಶ್ವಕಪ್ ಗೆದ್ದ ಕೆರೆಬಿಯನ್ ಧೈತ್ಯರನ್ನು ಸೋಲಿಸಿದ ಖ್ಯಾತಿಗೆ ನಾಯಕ ಕಪಿಲ್ ದೇವ್ ಪಾತ್ರರಾಗಿದ್ದರು.

ಇದನ್ನೂ ಓದಿ: ಏಕಾಏಕಿ 'ಬಿಗ್ ಬ್ರದರ್' ಮಹೇಶ್ ಬಾಬು, ರಣವೀರ್ ಸಿಂಗ್ ಟ್ರೆಂಡಿಂಗ್ ನಲ್ಲಿರುವುದೇಕೆ?

ಈ ಚಿತ್ರವನ್ನು ಕಬೀರ್ ಖಾನ್ ನಿರ್ದೇಶಿಸಿದ್ದು, ಈಗ ಆವರು ಚಿತ್ರದ ಬಿಡುಗಡೆಯ ದಿನಾಂಕವನ್ನು ತಮ್ಮ ಸಾಮಾಜಿಕ ಮಾಧ್ಯಮದ ವೇದಿಕೆಯಲ್ಲಿ ಘೋಷಿಸಿದ್ದಾರೆ.ಕಪಿಲ್ ದೇವ್ ಅವರ ಪಾತ್ರವನ್ನು ನಿರ್ವಹಿಸಿರುವ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅವರು ಈಗ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.“ಜೂನ್ 4, 2021 !!!! ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ. ಚಿತ್ರಮಂದಿರಗಳಲ್ಲಿ ನಿಮ್ಮನ್ನು ನೋಡೋಣ !!! # ' ಎಂದು ಅವರು ಬರೆದುಕೊಂಡಿದ್ದಾರೆ.

ಈ ಚಲನಚಿತ್ರವು ಈ ಮೊದಲು 2020 ರ ಏಪ್ರಿಲ್ 10 ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಬೇಕಾಗಿತ್ತು ಆದರೆ ಕೊರೊನಾ ಕಾರಣದಿಂದಾಗಿ ಚಿತ್ರದ ಬಿಡುಗಡೆಯ ದಿನಾಂಕವನ್ನು ಪೋಸ್ಟ್ ಪೋನ್ ಮಾಡಲಾಯಿತು.

ಇದನ್ನೂ ಓದಿ: ರಣವೀರ್ ಸಿಂಗ್ ನ್ಯೂ ಲುಕ್ ಕಂಡು ಉತ್ಸುಕರಾದ ಫ್ಯಾನ್ಸ್, ನಟ ಕ್ರೆಡಿಟ್ ನೀಡಿದ್ಯಾರಿಗೆ?

ರಣವೀರ್ ಸಿಂಗ್ ಅವರು ಕ್ರಿಕೆಟಿಗ ಕಪಿಲ್ ದೇವ್ ಪಾತ್ರವನ್ನು ರಚಿಸಿದರೆ, ದೀಪಿಕಾ ಪಡುಕೋಣೆ ಕಪಿಲ್ ದೇವ್ ಅವರ ಪತ್ನಿ ರೋಮಿ ದೇವ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಚಿತ್ರದ ತಾರಾಗಣದಲ್ಲಿ ಪಂಕಜ್ ತ್ರಿಪಾಠಿ, ತಾಹಿರ್ ರಾಜ್ ಭಾಸಿನ್, ಸಾಕಿಬ್ ಸಲೀಮ್, ಅಮ್ಮಿ ವಿರ್ಕ್, ಸಾಹಿಲ್ ಖಟ್ಟರ್, ನಿಶಾಂತ್ ದಾಹಿಯಾ, ಆರ್ ಬದ್ರೀ ಮತ್ತು ಡಿಂಕರ್ ಶರ್ಮಾ ಸೇರಿದ್ದಾರೆ.

ಈ ಚಿತ್ರವನ್ನು ಕಬೀರ್ ಖಾನ್, ಮಧು ಮಂಟೆನಾ, ಸಾಜಿದ್ ನಾಡಿಯಾಡ್ವಾಲಾ, ಮತ್ತು ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಸಹ-ನಿರ್ಮಾಣ ಮಾಡಿದೆ.

Trending News