Indian Players leave camp during world cup : ವಿಶ್ವಕಪ್‌ನ ರೋಚಕ ಪಂದ್ಯದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ಅನ್ನು 4 ವಿಕೆಟ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಭಾರತ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಈ ನಡುವೆ, ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಟೀಂ ಇಂಡಿಯಾದ ಮೂವರು ಮ್ಯಾಚ್ ವಿನ್ನಿಂಗ್ ಆಟಗಾರರು ಏಕಾಏಕಿ ತಂಡದ ಕ್ಯಾಂಪ್ ನಿಂದ ಹೊರ ನಡೆದಿದ್ದಾರೆ.  


COMMERCIAL BREAK
SCROLL TO CONTINUE READING

ಶಿಬಿರ ತೊರೆದ ಆಟಗಾರರು : 
2023ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಪರ ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದ್ದ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಹಾಗೂ ಕೆಎಲ್‌ ರಾಹುಲ್‌ ಏಕಾಏಕಿ ತಂಡವನ್ನು ಬಿಟ್ಟು ನಿರ್ಗಮಿಸಿದ್ದಾರೆ. ಇವರಲ್ಲದೆ, ಶ್ರೇಯಸ್ ಅಯ್ಯರ್, ಜಸ್ಪ್ರೀತ್ ಬುಮ್ರಾ ಮತ್ತು ತಂಡದ ಇತರ ಅನೇಕ ಆಟಗಾರರು ಕೂಡಾ ಕ್ಯಾಂಪ್ ನಿಂದ ಹೊರ ನಡೆದಿದ್ದಾರೆ. ಇದಕ್ಕೆ ಕಾರಣವೂ ಇದೆ.  2023ರ ವಿಶ್ವಕಪ್‌ನಲ್ಲಿ ಇಲ್ಲಿಯವರೆಗೆ 5 ಪಂದ್ಯಗಳನ್ನು ಗೆದ್ದ ನಂತರ ಭಾರತ ತಂಡವು ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.  


ಇದನ್ನೂ ಓದಿ : ಪ್ಲೇಯಿಂಗ್ 11 ನಿಂದ ಕೈಬಿಟ್ಟಿರುವ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಶಮಿ ! ಎಲ್ಲರ ಹುಬ್ಬೇರುವಂತೆ ಮಾಡಿತು ನ್ಯೂಜಿಲ್ಯಾಂಡ್ ವಿರುದ್ದದ ಗೆಲುವಿನ ರೂವಾರಿಯ ಮಾತು


ಆಟಗಾರರು ಏಕಾಏಕಿ ತಂಡದ ಶಿಬಿರವನ್ನು ತೊರೆದದ್ದೇಕೆ? :
ವರದಿಯ ಪ್ರಕಾರ, ಭಾನುವಾರ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದ ನಂತರ, ಭಾರತೀಯ ಕ್ರಿಕೆಟ್ ತಂಡವು ತನ್ನ ಕುಟುಂಬವನ್ನು ಭೇಟಿ ಮಾಡಲು ರಜೆಯ ಮೇಲೆ ತೆರಳಿದೆ. ನ್ಯೂಜಿಲೆಂಡ್ ನಂತರ ಟೀಂ ಇಂಡಿಯಾದ ಮುಂದಿನ ಪಂದ್ಯ  ಅಕ್ಟೋಬರ್ 29 ರಂದು ಇಂಗ್ಲೆಂಡ್ ವಿರುದ್ಧ ಲಕ್ನೋದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಏಳು ದಿನಗಳ ಸಮಯಾವಕಾಶವಿದೆ. ಇದರೊಂದಿಗೆ ಆಟಗಾರರು ತಮ್ಮ ಕುಟುಂಬಗಳೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತದೆ.


ವಿರಾಟ್-ರೋಹಿತ್ ಗೆ ಅಗತ್ಯ ಬ್ರೇಕ್ :
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಈ ವಿಶ್ರಾಂತಿ ಬಹಳ ಮುಖ್ಯವಾಗಿದೆ. ಆಗಸ್ಟ್ 30 ರಿಂದ ಸೆಪ್ಟೆಂಬರ್ 17 ರವರೆಗೆ ನಡೆದ ಏಷ್ಯಾಕಪ್‌ನಲ್ಲಿ  ಭಾಗಿಯಾಗಿದ್ದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಹೆಚ್ಚಿನ ಆಟಗಾರರು ನಿರಂತರ ಪ್ರವಾಸದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಇದೀಗ  ಮುಂದಿನ ಪಂದ್ಯಕ್ಕೂ ಮುನ್ನ ಏಳು ದಿನಗಳ ಸಮಯ  ಇರುವುದರಿಂದ ಆಟಗಾರರು ತಮ್ಮ ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯುವುದು ಸೂಕ್ತ' ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿತ್ತು.


ಇದನ್ನೂ ಓದಿ : ನ್ಯೂಜಿಲೆಂಡ್ ವಿರುದ್ಧ ಭಾರತ ಗೆದ್ದಿದ್ದು ಈತನಿಂದಲೇ.. ಈ ಆಟಗಾರನೇ ಮ್ಯಾಚ್ ವಿನ್ನರ್ ಎಂದು ಕೊಂಡಾಡಿದ ರೋಹಿತ್ ಶರ್ಮಾ!


ಭಾರತ ಸೆಮಿಫೈನಲ್‌ಗೆ ಎರಡು ಗೆಲುವಿನ ಅಂತರದಲ್ಲಿದೆ :
ವಿಶ್ವಕಪ್ 2023 ರ ಸೆಮಿಫೈನಲ್ ತಲುಪಲು ಟೀಮ್ ಇಂಡಿಯಾ ಇನ್ನು 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಸಾಕು. ಒಂದು ತಂಡವು 14 ಅಂಕಗಳನ್ನು ಗಳಿಸಿದರೆ,  ಟಾಪ್ 4 ಗೆ ಬರಲು ಸಾಧ್ಯವಾಗುತ್ತದೆ. ಈ ರೇಸ್‌ನಲ್ಲಿ ನ್ಯೂಜಿಲೆಂಡ್ ಮತ್ತು ಭಾರತದ ಸ್ಥಾನ ಈಗಾಗಲೇ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ ಎಂದೇ ಹೇಳಲಾಗುತ್ತಿದೆ. ನ್ಯೂಜಿಲೆಂಡ್ 4 ಗೆಲುವಿನೊಂದಿಗೆ 8 ಅಂಕ ಹೊಂದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.