ಟೀಂ ಇಂಡಿಯಾದ 20 ವರ್ಷ ಹಳೆಯ ದಾಖಲೆ ಮುರಿದ ಅಫ್ಘಾನಿಸ್ತಾನ !
Afghanistan team records: ಭಾರತ ತಂಡ 20 ವರ್ಷಗಳ ಹಿಂದೆ ಮಾಡಿದ್ದ ದಾಖಲೆಯನ್ನು ಕೂಡಾ ಮುರಿದಿದೆ. ಇದಕ್ಕೂ ಮುನ್ನ ಭಾರತದ ಈ ದಾಖಲೆಯನ್ನು ಯಾರೂ ಮುರಿದಿರಲಿಲ್ಲ.
Afghanistan team records : ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ದ ಪಾಕಿಸ್ತಾನ ಹೀನಾಯ ಸೋಲು ಕಂಡಿದೆ. ಪಾಕ್ ಈ ರೀತಿಯ ಸೋಲು ಕಾಣುತ್ತದೆ ಎನ್ನುವುದನ್ನು ಯಾರೂ ಊಹಿಸಿರಲೇ ಇಲ್ಲ. ಅಫ್ಘಾನಿಸ್ತಾನ ತಂಡವು ಪಾಕಿಸ್ತಾನವನ್ನು 8 ವಿಕೆಟ್‌ಗಳಿಂದ ಹೀನಾಯವಾಗಿ ಸೋಲಿಸಿತು. ಈ ಗೆಲುವಿನೊಂದಿಗೆ ಅಫ್ಘಾನಿಸ್ತಾನ ತಂಡ ಹಲವು ದೊಡ್ಡ ದಾಖಲೆಗಳನ್ನು ತನ್ನ ಹೆಸರಿಗೆ ಸೇರಿಸಿಕೊಂಡಿದೆ. ಇದೇ ವೇಳೆ ಭಾರತ ತಂಡ 20 ವರ್ಷಗಳ ಹಿಂದೆ ಮಾಡಿದ್ದ ದಾಖಲೆಯನ್ನು ಕೂಡಾ ಮುರಿದಿದೆ. ಇದಕ್ಕೂ ಮುನ್ನ ಭಾರತದ ಈ ದಾಖಲೆಯನ್ನು ಯಾರೂ ಮುರಿದಿರಲಿಲ್ಲ.
ವಿಶ್ವಕಪ್‌ನಲ್ಲಿ ಎರಡನೇ ಗರಿಷ್ಠ ಸ್ಕೋರ್ ಗಳಿಸಿದ ಕೀರ್ತಿ :
283 ರನ್‌ಗಳ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ ಬ್ಯಾಟ್ಸ್‌ಮನ್‌ಗಳು 286 ರನ್ ಗಳಿಸಿ ಜಯಭೇರಿ ಬಾರಿಸಿದರು. ಇದು ಈವರೆಗಿನ ವಿಶ್ವಕಪ್‌ನಲ್ಲಿ ತಂಡ ವೊಂದು ಸೇರಿಸಿದ ಎರಡನೇ ಗರಿಷ್ಠ ಸ್ಕೋರ್ ಆಗಿದೆ. ಈ ಹಿಂದೆ 2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 288 ರನ್ ಗಳಿಸಿತ್ತು.
ಇದನ್ನೂ ಓದಿ : 1996ರಲ್ಲಿ ಪಾಕಿಸ್ತಾನದ ಸೊಕ್ಕು ಮುರಿದಿದ್ದ ಟೀಂ ಇಂಡಿಯಾದ ಈ ಕ್ರಿಕೆಟಿಗನೇ ಅಫ್ಘಾನಿಸ್ತಾನದ ಗೆಲುವಿಗೂ ಕಾರಣ !
ಏಕದಿನದಲ್ಲಿ ಅತಿ ದೊಡ್ಡ ಗುರಿ :
ಅಫ್ಘಾನಿಸ್ತಾನ ತಂಡ ತನ್ನ ಏಕದಿನ ಇತಿಹಾಸದಲ್ಲಿ ಇದುವರೆಗಿನ ದೊಡ್ಡ ಗುರಿಯನ್ನು ಬೆನ್ನಟ್ಟಿದೆ. ಇದಕ್ಕೂ ಮುನ್ನ 2014ರಲ್ಲಿ ಯುಎಇ ವಿರುದ್ಧ ತಂಡ 274 ರನ್‌ಗಳ ಗುರಿಯನ್ನು ಬೆನ್ನಟ್ಟಿತ್ತು. ಈ ಪಂದ್ಯದಲ್ಲಿ ತಂಡ 283 ರನ್ ಚೇಸ್ ಮಾಡಿತ್ತು. ಈ ಪಟ್ಟಿಯಲ್ಲಿ ತಂಡದ ಮೂರನೇ ಅತ್ಯಂತ ಯಶಸ್ವಿ ಚೇಸಿಂಗ್ 269 ರನ್ ಆಗಿದೆ.
ಭಾರತದ ಈ ದೊಡ್ಡ ದಾಖಲೆ ಮುರಿದಿದ ಟೀಂ :
2003ರಲ್ಲಿ ಪಾಕಿಸ್ತಾನದ ವಿರುದ್ಧ ವಿಶ್ವಕಪ್‌ನಲ್ಲಿ ಭಾರತ ಅತಿ ದೊಡ್ಡ ರನ್ ಚೇಸ್ ಮಾಡಿತ್ತು. ಆದರೆ, ಈಗ ಈ ದಾಖಲೆಯನ್ನು ಅಫ್ಘಾನಿಸ್ತಾನ ಮುರಿದಿದೆ. ಅಫ್ಘಾನಿಸ್ತಾನವು ಪಾಕಿಸ್ತಾನದ 283 ರನ್‌ಗಳ ಸ್ಕೋರ್ ಅನ್ನು ಸುಲಭವಾಗಿ ಬೆನ್ನಟ್ಟಿ ತನ್ನ ಹೆಸರನ್ನು ಇತಿಹಾಸದ ಪುಟಗಳಲ್ಲಿ ಸೇರಿಸಿಕೊಂಡಿತು.
ಇದನ್ನೂ ಓದಿ : WATCH : ಅಫ್ಘಾನಿಸ್ತಾನದ ಗೆಲುವಿನ ನಂತರ ಇರ್ಫಾನ್ ಪಠಾಣ್ ಜೊತೆ ರಶೀದ್ ನೃತ್ಯ ವೈರಲ್
ಎಲ್ಲರನ್ನೂ ಹಿಂದಿಕ್ಕಿದ ರಹಮತ್-ಹಶ್ಮತುಲ್ಲಾ :
ಅಫ್ಘಾನಿಸ್ತಾನದ ರಹಮತ್ ಶಾ ಮತ್ತು ಹಶ್ಮತುಲ್ಲಾ ಶಾಹಿದಿ ತಂಡಕ್ಕಾಗಿ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪೈಕಿ ಎಲ್ಲರನ್ನೂ ಹಿಂದೆ ಬಿಟ್ಟಿದ್ದಾರೆ. ಈ ಪಂದ್ಯದಲ್ಲಿ ರಹಮತ್ ಶಾ ಅಜೇಯ 77 ರನ್ ಮತ್ತು ಹಶ್ಮತುಲ್ಲಾ ಅಜೇಯ 48 ರನ್ ಗಳಿಸಿದರು. ರಹಮತ್ 404 ರನ್‌ಗಳೊಂದಿಗೆ ಅತ್ಯಧಿಕ ರನ್ ಗಳಿಸಿದ ಆಫ್ಘನ್ ಬ್ಯಾಟ್ಸ್‌ಮನ್‌ಗಳಲ್ಲಿ ಅಗ್ರಸ್ಥಾನದಲ್ಲಿದ್ದರೆ, 365 ರನ್ ಗಳಿಸಿರುವ ಹಶ್ಮತುಲ್ಲಾ ಎರಡನೇ ಸ್ಥಾನದಲ್ಲಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.