PAK vs AFG Video: ಸಿಕ್ಸರ್ ಬಾರಿಸಿ ಇತಿಹಾಸದ ಪುಟಗಳಲ್ಲಿ ದಾಖಲೆ ಬರೆದ ರಹಮತ್ ಶಾ

PAK vs AFG Viral Video: ಚೆನ್ನೈನಲ್ಲಿ ಸೋಮವಾರ ಪಾಕಿಸ್ತಾನ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನ ದಾಖಲೆಯ ಗೆಲುವು ಸಾಧಿಸಿದೆ. ಅಷ್ಟೇ ಅಲ್ಲ, ಅಫ್ಘಾನಿಸ್ತಾನದ ಬ್ಯಾಟ್ಸ್‌ಮನ್ ರಹಮತ್ ಶಾ ಅವರ ಸಿಕ್ಸರ್ ಶಾಶ್ವತವಾಗಿ ಪ್ರಸಿದ್ಧವಾಯಿತು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

Written by - Yashaswini V | Last Updated : Oct 24, 2023, 07:33 AM IST
  • ನಿನ್ನೆ ಚೆನ್ನೈನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ವಿಶ್ವಕಪ್‌ ಪದ್ನ್ಯದಲ್ಲಿ ಗೆಲುವಿನ ನಾಗಾಲೋಟಕ್ಕೆ ಅಫ್ಘಾನಿಸ್ತಾನ ತಂಡಕ್ಕೆ 18 ಎಸೆತಗಳಲ್ಲಿ 11 ರನ್‌ಗಳ ಅಗತ್ಯವಿತ್ತು.
  • ಆ ವೇಳೆ ಅಫ್ಘಾನಿಸ್ತಾನ ಪರ ನಾಯಕ ಹಶ್ಮತುಲ್ಲಾ ಶಾಹಿದಿ ಮತ್ತು ರಹಮತ್ ಶಾ ಕ್ರೀಸ್‌ನಲ್ಲಿದ್ದರು.
  • ಅಫ್ಘಾನಿಸ್ತಾನದ ಇನಿಂಗ್ಸ್‌ನ 48ನೇ ಓವರ್‌ನಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಂ ತಮ್ಮ ನಂಬಿಕಸ್ಥ ವೇಗದ ಬೌಲರ್ ಹಸನ್ ಅಲಿಗೆ ಬೌಲಿಂಗ್ ಅವಕಾಶವನ್ನು ನೀಡಿದರು.
PAK vs AFG Video: ಸಿಕ್ಸರ್ ಬಾರಿಸಿ ಇತಿಹಾಸದ ಪುಟಗಳಲ್ಲಿ ದಾಖಲೆ ಬರೆದ ರಹಮತ್ ಶಾ title=

World Cup 2023 PAK vs AFG:  ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸುವ ಮೂಲಕ ಅಫ್ಘಾನಿಸ್ತಾನ ವಿಶ್ವಕಪ್‌ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 282 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಅಫ್ಘಾನಿಸ್ತಾನದ ಬ್ಯಾಟ್ಸ್‌ಮನ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿ 49 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ಗಳ ನಷ್ಟದಲ್ಲಿ 286 ರನ್ ಗಳಿಸುವ ಮೂಲಕ ಪಂದ್ಯವನ್ನು ತನ್ನದಾಗಿಸಿಕೊಂಡಿತು. 

ಒಂದೆಡೆ ವಿಶ್ವಕಪ್ ಮತ್ತು ಏಕದಿನ ಅಂತರರಾಷ್ಟ್ರೀಯ ಸ್ವರೂಪದಲ್ಲಿ ಅಫ್ಘಾನಿಸ್ತಾನ ಮೊದಲ ಬಾರಿಗೆ ಪಾಕಿಸ್ತಾನದ ವಿರುದ್ಧ ಗೆದ್ದು ಬೀಗಿದರೆ, ಮತ್ತೊಂದೆಡೆ, ಅಫ್ಘಾನಿಸ್ತಾನದ ಬ್ಯಾಟ್ಸ್‌ಮನ್ ರಹಮತ್ ಶಾ ಅವರ ಸಿಕ್ಸರ್ ಶಾಶ್ವತವಾಗಿ ಪ್ರಸಿದ್ಧವಾಗಿದೆ.  

ಅಫ್ಘಾನಿಸ್ತಾನದ ಬ್ಯಾಟ್ಸ್‌ಮನ್ ರಹಮತ್ ಶಾ ಪಾಕಿಸ್ತಾನದ ವೇಗದ ಬೌಲರ್ ಹಸನ್ ಅಲಿ ಅವರ ತಲೆಯ ಮೇಲೆ ಅಂತಹ ಆಕಾಶದ ಎತ್ತರದ ಸಿಕ್ಸರ್ ಬಾರಿಸಿದ್ದು  ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ. 

ಇದನ್ನೂ ಓದಿ- ಇಂಗ್ಲೆಂಡ್ ಪಂದ್ಯದಿಂದಲೂ ಹಾರ್ದಿಕ್ ಔಟ್! ಪಾಂಡ್ಯ ಸ್ಥಾನಕ್ಕೆ 33 ವರ್ಷದ ಬಲಗೈ ಫಾಸ್ಟ್ ಬೌಲರ್ ಆಯ್ಕೆ

ನಿನ್ನೆ ಚೆನ್ನೈನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಗೆಲುವಿನ ನಾಗಾಲೋಟಕ್ಕೆ ಅಫ್ಘಾನಿಸ್ತಾನ ತಂಡಕ್ಕೆ 18 ಎಸೆತಗಳಲ್ಲಿ 11 ರನ್‌ಗಳ ಅಗತ್ಯವಿತ್ತು. ಆ ವೇಳೆ ಅಫ್ಘಾನಿಸ್ತಾನ ಪರ ನಾಯಕ ಹಶ್ಮತುಲ್ಲಾ ಶಾಹಿದಿ ಮತ್ತು ರಹಮತ್ ಶಾ ಕ್ರೀಸ್‌ನಲ್ಲಿದ್ದರು. ಅಫ್ಘಾನಿಸ್ತಾನದ ಇನಿಂಗ್ಸ್‌ನ 48ನೇ ಓವರ್‌ನಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಂ ತಮ್ಮ ನಂಬಿಕಸ್ಥ ವೇಗದ ಬೌಲರ್ ಹಸನ್ ಅಲಿಗೆ ಬೌಲಿಂಗ್ ಅವಕಾಶವನ್ನು ನೀಡಿದರು. 

48 ನೇ ಓವರ್‌ನಲ್ಲಿ, ಹಸನ್ ಅಲಿ ಮೊದಲ ಎರಡು ಎಸೆತಗಳಲ್ಲಿ ಬೌಲ್ಡ್ ಮಾಡಿದರಾದರೂ ಮೂರನೇ ಬಾಲ್ ಯಾರೂ ಯೋಚಿಸದ ರೀತಿ ಆಶ್ಚರ್ಯಕರ ಕಾಬುಲಿವಾಲಾ ಗೆಲುವಿನ ಕಥೆಯನ್ನು ಬರೆದಿದೆ. 

ಇದನ್ನೂ ಓದಿ- ಸತತ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಟೀಂ ಇಂಡಿಯಾ ವಿಶ್ವಕಪ್ ಪಾಯಿಂಟ್ ಟೇಬಲ್’ನಲ್ಲಿ ಎಷ್ಟನೇ ಸ್ಥಾನದಲ್ಲಿದೆ?

ಆಕಾಶ ನೋಡುತ್ತಲೇ ಇದ್ದ ಪಾಕಿಸ್ತಾನ ಕ್ಯಾಪ್ಟನ್ ಬಾಬರ್ ಅಜಂ: 
ವಾಸ್ತವವಾಗಿ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನದ ಇನಿಂಗ್ಸ್‌ನ 48ನೇ ಓವರ್‌ನಲ್ಲಿ ಪಾಕಿಸ್ತಾನದ ವೇಗಿ ಹಸನ್ ಅಲಿ ಅವರ ಮೂರನೇ ಎಸೆತದಲ್ಲಿ ಅಫ್ಘಾನಿಸ್ತಾನದ ಬ್ಯಾಟ್ಸ್‌ಮನ್ ರಹಮತ್ ಶಾ ಸಿಕ್ಸರ್ ಬಾರಿಸಿ ಇತಿಹಾಸದ ಪುಟಗಳಲ್ಲಿ ದಾಖಲೆ ಸೃಷ್ಟಿಸಿದ್ದಾರೆ. ಈ ಸಿಕ್ಸರ್ ಕಾಬುಲಿವಾಲಾ ಗೆಲುವಿನ ಕಥೆಯನ್ನು ಬರೆದಿದೆ. ಈ ಎಸೆತದಲ್ಲಿ ರಹಮತ್ ಶಾ ನೇರ ಮತ್ತು ವೇಗದ ಸಿಕ್ಸರ್ ಅನ್ನು ಹಸನ್ ಅಲಿ ಅವರ ತಲೆಯ ಮೇಲೆ ಹೊಡೆದರು. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News