CWC 2023 Team India: 2023 ರ ವಿಶ್ವಕಪ್‌ಗೆ ಮುಂಚಿತವಾಗಿ, ಡ್ರೀಮ್ 11 ಭಾರತೀಯ ತಂಡದ ಜೆರ್ಸಿ ಪ್ರಾಯೋಜಕರಾಗಿದ್ದಾರೆ. ಈ ಕಂಪನಿಯ ಜೆರ್ಸಿ ಧರಿಸಿ ಭಾರತ ವಿಶ್ವಕಪ್ ಸರಣಿಯಲ್ಲಿ ಭಾಗವಹಿಸುತ್ತಿದೆ.


COMMERCIAL BREAK
SCROLL TO CONTINUE READING

ಭಾರತ ತಂಡ ಆಸ್ಟ್ರೇಲಿಯಾ ತಂಡದ ವಿರುದ್ಧ ಮೊದಲ ಲೀಗ್ ಪಂದ್ಯಕ್ಕೂ ಮುನ್ನ ಕೇಸರಿ ಬಣ್ಣದ ಜೆರ್ಸಿ ಧರಿಸಿ ತಾಲೀಮು ನಡೆಸಿತು. ಹೀಗಾಗಿ ವಿಶ್ವಕಪ್ ನಲ್ಲೂ ಭಾರತ ತಂಡ ಆರೆಂಜ್ ಜೆರ್ಸಿಯಲ್ಲಿ ಆಡಲಿದೆಯೇ ಎಂಬ ಪ್ರಶ್ನೆ ಎದ್ದಿತ್ತು. ಆದರೆ, ಎಂದಿನಂತೆ ಭಾರತ ತಂಡ ನೀಲಿ ಜೆರ್ಸಿಯಲ್ಲಿ ಆಡಿತ್ತು.


ಇದನ್ನೂ ಓದಿ-IND VS AUS ಸರಣಿಯ ನಡುವೆ ಶಾಕಿಂಗ್ ನ್ಯೂಸ್, ಈ ಆಟಗಾರನಿಗೆ ಎರಡು ಪಂದ್ಯಗಳಿಗೆ ನಿಷೇಧ


ಇನ್ನು ದಕ್ಷಿಣ ಆಫ್ರಿಕಾ ತಂಡವು ಎರಡು ಜೆರ್ಸಿಗಳನ್ನು ಹೊಂದಿದೆ. ಭಾನುವಾರದ ಪಂದ್ಯಗಳಲ್ಲಿ ಮಾತ್ರ ಹಸಿರು ಜೆರ್ಸಿ ಧರಿಸಿ ಆಡಲಾಗುತ್ತದೆ. ಅದೇ ರೀತಿ ಭಾರತ ತಂಡ ಕೂಡ ಈ ಬಾರಿಯ ವಿಶ್ವಕಪ್‌ನಲ್ಲಿ ಎರಡು ಜೆರ್ಸಿ ಧರಿಸುವ ಸಾಧ್ಯತೆ ಇದೆ. ಹೌದು, ವಿಶ್ವಕಪ್ ಸರಣಿಗಾಗಿ ಭಾರತ ತಂಡದ ಮ್ಯಾನೇಜ್‌ಮೆಂಟ್ ಐಸಿಸಿಯಲ್ಲಿ ಎರಡು ಜೆರ್ಸಿಗಳನ್ನು ನೋಂದಾಯಿಸಿದೆ ಎಂದು ವರದಿಯಾಗಿದೆ. ಒಂದು ನೀಲಿ ಜರ್ಸಿ ಮತ್ತು ಇನ್ನೊಂದು ಕೇಸರಿ ಜರ್ಸಿ.


ಯಾವ ತಂಡದ ವಿರುದ್ಧ? 
ಸದ್ಯ ಭಾರತ ತಂಡ ಪಾಕಿಸ್ತಾನದ ವಿರುದ್ಧ ಕೇಸರಿ ಜರ್ಸಿಯಲ್ಲಿ ಆಡಲಿದೆ ಎಂದು ವರದಿಯಾಗಿದೆ. ಅಕ್ಟೋಬರ್ 14 ರಂದು ಅಹಮದಾಬಾದ್‌ನಲ್ಲಿ ಟೂರ್ನಿ ಆರಂಭವಾಗಲಿದ್ದು, ಒಂದು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಪಂದ್ಯ ವೀಕ್ಷಿಸುವ ನಿರೀಕ್ಷೆ ಇದೆ. ಆ ಸಮಯದಲ್ಲಿ ಭಾರತ ತಂಡವು ಕೇಸರಿ ಜರ್ಸಿಯಲ್ಲಿ ಮತ್ತು ಪಾಕಿಸ್ತಾನ ತಂಡವು ಹಸಿರು ಜೆರ್ಸಿಯಲ್ಲಿ ಆಡುವ ಸಾಧ್ಯತೆಯಿದೆ.


ಇದನ್ನೂ ಓದಿ-12 ವರ್ಷಗಳ ನಂತರ ವಿಶ್ವಕಪ್ ನಲ್ಲಿ ವಿಜಯ ಪತಾಕೆ ಹಾರಿಸಲಿದೆಯಂತೆ ಭಾರತ ! ಯಾವ ಲೆಕ್ಕಾಚಾರದಲ್ಲಿ ಅನ್ನುವ ಮಾಹಿತಿ ಇಲ್ಲಿದೆ !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.