World Cup 2023: ಮಳೆಯಿಂದ ಪಾಕ್-ಕೀವೀಸ್ ಪಂದ್ಯ ರದ್ದಾದರೆ ಯಾವ ತಂಡ ಸೆಮಿಫೈನಲ್ ಪ್ರವೇಶಿಸುತ್ತೆ ಗೊತ್ತಾ?
World Cup 2023, Pakistan vs New Zealand: ಅಕ್ಯುವೆದರ್ ಪ್ರಕಾರ, ನವೆಂಬರ್ 4 ರಂದು ಬೆಂಗಳೂರಿನ ಹವಾಮಾನವು ತುಂಬಾ ಸ್ಪಷ್ಟವಾಗಿದೆ. ಗರಿಷ್ಠ ತಾಪಮಾನವು 26 ಡಿಗ್ರಿ ಸೆಲ್ಸಿಯಸ್ ಇದ್ದು, ಕನಿಷ್ಠ 21 ಆಗಿರುತ್ತದೆ. ನ್ಯೂಜಿಲೆಂಡ್-ಪಾಕಿಸ್ತಾನ ಪಂದ್ಯದಲ್ಲಿ ಮಳೆಯ ಸಾಧ್ಯತೆ ಕಡಿಮೆ. ಅಂದರೆ ಮಳೆಯ ಸಂಭವನೀಯತೆ ಕೇವಲ 3 ಪ್ರತಿಶತ ಇದೆ. ಆದರೆ, ಮಧ್ಯಾಹ್ನ 2ರ ನಂತರ ಮಳೆಯಾಗುವ ಸಾಧ್ಯತೆ ಶೇ.50ಕ್ಕಿಂತ ಹೆಚ್ಚಿದೆ.
World Cup 2023, Pakistan vs New Zealand: ವಿಶ್ವಕಪ್ 2023ರ 35 ನೇ ಪಂದ್ಯವು ಇಂದು ನವೆಂಬರ್ 4 ರಂದು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ಬೆಳಿಗ್ಗೆ 10:30 ರಿಂದ ನಡೆಯಲಿದೆ. ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಉಭಯ ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ ಸೋತಲ್ಲಿ, ಸಂಪೂರ್ಣ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಇದೆ.
ಇದನ್ನೂ ಓದಿ: ವಿಶ್ವಕಪ್ ಇತಿಹಾಸದ ಎಲ್ಲಾ ಟೂರ್ನಿ ಆಡಿದ್ರೂ ಒಂದೇ ಒಂದು ಬಾರಿಯೂ ಟ್ರೋಫಿ ಗೆದ್ದಿಲ್ಲ ಈ ಏಕೈಕ ತಂಡ: ಯಾವುದು ಗೊತ್ತಾ?
ಅಕ್ಯುವೆದರ್ ಪ್ರಕಾರ, ನವೆಂಬರ್ 4 ರಂದು ಬೆಂಗಳೂರಿನ ಹವಾಮಾನವು ತುಂಬಾ ಸ್ಪಷ್ಟವಾಗಿದೆ. ಗರಿಷ್ಠ ತಾಪಮಾನವು 26 ಡಿಗ್ರಿ ಸೆಲ್ಸಿಯಸ್ ಇದ್ದು, ಕನಿಷ್ಠ 21 ಆಗಿರುತ್ತದೆ. ನ್ಯೂಜಿಲೆಂಡ್-ಪಾಕಿಸ್ತಾನ ಪಂದ್ಯದಲ್ಲಿ ಮಳೆಯ ಸಾಧ್ಯತೆ ಕಡಿಮೆ. ಅಂದರೆ ಮಳೆಯ ಸಂಭವನೀಯತೆ ಕೇವಲ 3 ಪ್ರತಿಶತ ಇದೆ. ಆದರೆ, ಮಧ್ಯಾಹ್ನ 2ರ ನಂತರ ಮಳೆಯಾಗುವ ಸಾಧ್ಯತೆ ಶೇ.50ಕ್ಕಿಂತ ಹೆಚ್ಚಿದೆ.
ಪಂದ್ಯದ ವೇಳೆ ಮಳೆ ಸುರಿದು ಪಂದ್ಯ ರದ್ದಾದರೆ ಪಾಕಿಸ್ತಾನ ತಂಡ ಟೂರ್ನಿಯಿಂದ ಹೊರಬೀಳಲಿದೆ. ಏಕೆಂದರೆ ಕೇವಲ 1 ಅಂಕವನ್ನಷ್ಟೇ ಪಡೆಯುತ್ತದೆ. ಇನ್ನೊಂದೆಡೆ ನ್ಯೂಜಿಲೆಂಡ್ ತಂಡ 9 ಅಂಕಗಳೊಂದಿಗೆ 3ನೇ ಸ್ಥಾನಕ್ಕೆ ಬರಲಿದೆ.
ಪಾಕಿಸ್ತಾನ ತಂಡ: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಫಖರ್ ಜಮಾನ್, ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಇಫ್ತಿಕರ್ ಅಹ್ಮದ್, ಸಲ್ಮಾನ್ ಅಲಿ ಅಗಾ, ಸೌದ್ ಶಕೀಲ್, ಎಂ ನವಾಜ್, ಶಾಹೀನ್ ಶಾ ಅಫ್ರಿದಿ, ಹಾರಿಸ್ ರೌಫ್, ಹಸನ್ ಅಲಿ, ಉಸಾಮಾ ಮಿರ್ ಮತ್ತು ವಾಸಿಂ ಜೂನಿಯರ್.
ಇದನ್ನೂ ಓದಿ: “ಸೆಮಿಫೈನಲ್’ನಲ್ಲಿ ಟೀಂ ಇಂಡಿಯಾ ಸೋತರೆ ಡ್ಯಾನ್ಸ್ ಮಾಡ್ತೇನೆ”-ಪಾಕ್ ಆಟಗಾರನ ಶಾಕಿಂಗ್ ಹೇಳಿಕೆ
ನ್ಯೂಜಿಲೆಂಡ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೆ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್ (ಉಪನಾಯಕ, ವಿಕೆಟ್ ಕೀಪರ್), ಡ್ಯಾರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್ ಇಶ್ ಸೋಧಿ, ಟಿಮ್ ಸೌಥಿ, ವಿಲ್ ಯಂಗ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.