ವಿಶ್ವಕಪ್ ನಲ್ಲಿ ಸತತ ಸೋಲಿನಿಂದ ಕಂಗೆಟ್ಟ ಇಂಗ್ಲೆಂಡ್ ಗೆ ಈಗ ಚಾಂಪಿಯನ್ ಟ್ರೋಪಿಯದ್ದೇ ಚಿಂತೆ..? ಕಾರಣವೇನು ಗೊತ್ತೇ?
ಈ ಬಾರಿಯ ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ಇಂಗ್ಲೆಂಡ್‌ನ ಕನಸು ಭಗ್ನಗೊಂಡಿದೆ. ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡ ಇದುವರೆಗೆ 6 ಪಂದ್ಯಗಳನ್ನು ಆಡಿದ್ದು, 5ರಲ್ಲಿ ಸೋಲು ಕಂಡಿದೆ. ಈಗ ಇಂಗ್ಲೆಂಡ್ ಈ ಟೂರ್ನಿಯಲ್ಲಿ ಇನ್ನೂ 3 ಪಂದ್ಯಗಳನ್ನು ಆಡಬೇಕಿದ್ದು, ವಿಶ್ವಕಪ್ ಗೆಲ್ಲುವುದು ಅವರ ಗುರಿಯಲ್ಲ, ಬದಲಾಗಿ 2025ರ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯುವುದಾಗಿದೆ.
ನವದೆಹಲಿ: ಈ ಬಾರಿಯ ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ಇಂಗ್ಲೆಂಡ್‌ನ ಕನಸು ಭಗ್ನಗೊಂಡಿದೆ. ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡ ಇದುವರೆಗೆ 6 ಪಂದ್ಯಗಳನ್ನು ಆಡಿದ್ದು, 5ರಲ್ಲಿ ಸೋಲು ಕಂಡಿದೆ. ಈಗ ಇಂಗ್ಲೆಂಡ್ ಈ ಟೂರ್ನಿಯಲ್ಲಿ ಇನ್ನೂ 3 ಪಂದ್ಯಗಳನ್ನು ಆಡಬೇಕಿದ್ದು, ವಿಶ್ವಕಪ್ ಗೆಲ್ಲುವುದು ಅವರ ಗುರಿಯಲ್ಲ, ಬದಲಾಗಿ 2025ರ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯುವುದಾಗಿದೆ.
ವಾಸ್ತವವಾಗಿ, 2023 ರ ವಿಶ್ವಕಪ್‌ನ ಟಾಪ್-7 ರಲ್ಲಿ ಇರುವ ತಂಡಗಳು ಮಾತ್ರ ಆತಿಥೇಯ ಪಾಕಿಸ್ತಾನದೊಂದಿಗೆ ಚಾಂಪಿಯನ್ಸ್ ಟ್ರೋಫಿ 2025 ಗೆ ಅರ್ಹತೆ ಪಡೆಯುತ್ತವೆ ಎಂದು ಐಸಿಸಿ ದೃಢಪಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಇಂಗ್ಲೆಂಡ್ ತಂಡವು ಪ್ರಸ್ತುತ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವುದರಿಂದ ಇಂಗ್ಲೆಂಡ್ ತಂಡವು ಟಾಪ್ ಏಳನೇ ಸ್ಥಾನಕ್ಕೆ ಬರುವುದು ಅನಿವಾರ್ಯವಾಗಿದೆ.ಒಂದುವೇಳೆ ಅವರ ತಂಡ ಟಾಪ್-7ರಲ್ಲಿ ಬರದಿದ್ದರೆ ಮುಂದಿನ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: ಅರಣ್ಯ ಇಲಾಖೆ ಅಧಿಕಾರಿಗಳಿಗೆ ಲೋಕಾ ಅಧಿಕಾರಿಗಳ ಶಾಕ್
ಚಾಂಪಿಯನ್ ಟ್ರೋಪಿಯಿಂದ ಹೊರಕ್ಕೆ..?
ಇಂಗ್ಲೆಂಡ್ ಪ್ರಸ್ತುತ ODI ವಿಶ್ವಕಪ್ ಮತ್ತು T20 ವಿಶ್ವಕಪ್ ಎರಡರಲ್ಲೂ ಚಾಂಪಿಯನ್ ಆಗಿದೆ, ಮತ್ತು ಈ ವಿಶ್ವಕಪ್ ಪ್ರಾರಂಭವಾಗುವ ಮೊದಲು, ಅವರು ವಿಶ್ವಕಪ್ 2023 ಗೆಲ್ಲಲು ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿತ್ತು, ಆದರೆ ಹಾಗಾಗಲಿಲ್ಲ,ಒಂದು ಗೆಲುವಿನ ನಂತರ ಇಂಗ್ಲೆಂಡ್ ಸತತ ನಾಲ್ಕು ಪಂದ್ಯಗಳಲ್ಲಿ ಸೋತಿದೆ. ಈ ಮೂಲಕ ಇಂಗ್ಲೆಂಡ್ ಇದುವರೆಗೆ 5 ಪಂದ್ಯಗಳಲ್ಲಿ ಸೋತಿದ್ದು, ಇದೀಗ ಮೂರು ಪಂದ್ಯಗಳು ಬಾಕಿ ಉಳಿದಿವೆ.
ಇಂಗ್ಲೆಂಡ್‌ನ ಮುಂದಿನ ಪಂದ್ಯಗಳು ಆಸ್ಟ್ರೇಲಿಯಾ, ನೆದರ್ಲೆಂಡ್ಸ್ ಮತ್ತು ಶ್ರೀಲಂಕಾ ವಿರುದ್ಧ ನಡೆಯಲಿವೆ. ಇಂತಹ ಪರಿಸ್ಥಿತಿಯಲ್ಲಿ ಈ ಬಾರಿಯ ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪುವುದು ಅಸಾಧ್ಯ ಎನಿಸುತ್ತಿದೆ. ಆದರೆ ಐಸಿಸಿ ನಿಯಮದ ಪ್ರಕಾರ 2025ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಗ್ಲೆಂಡ್ ಆಡಬೇಕಾದರೆ ಉಳಿದ ಮೂರು ಪಂದ್ಯಗಳನ್ನು ಗೆಲ್ಲಲೇಬೇಕು.ಭಾರತ ವಿರುದ್ಧದ ಸೋಲಿನ ನಂತರ, ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಅವರನ್ನು ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯುವ ಬಗ್ಗೆ ಯೋಚಿಸಿದ್ದೀರಾ? ಎಂದು ಕೇಳಿದಾಗ, ಇದಕ್ಕೆ ಬಟ್ಲರ್ ಅವರು ಇನ್ನೂ ಹೆಚ್ಚಿನ ಪಂದ್ಯಗಳನ್ನು ಆಡುವುದಿದೆ ಎಂದು ಹೇಳಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ