ನೀವು ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಹೋಗುವ ಪ್ಲಾನ್ ಇದೆಯಾ?...ಹಾಗಾದ್ರೆ ಈ 10 ಆಸಕ್ತಿಕರ ವಿಷಯಗಳನ್ನು ಮೊದಲು ತಿಳಿಯಿರಿ

Written by - Manjunath N | Last Updated : Oct 30, 2023, 09:05 AM IST
  • ಈ ರಾಷ್ಟ್ರೀಯ ಉದ್ಯಾನವನವು ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಮೂರು ರಾಜ್ಯಗಳ ಟ್ರೈ-ಜಂಕ್ಷನ್ ಪ್ರದೇಶದಲ್ಲಿ ಹರಡಿದೆ.
  • ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ಮೈಸೂರು ಆನೆ ಸಂರಕ್ಷಿತ ಪ್ರದೇಶದ ಭಾಗವಾಗಿದೆ.
  • ಈ ಉದ್ಯಾನವನವು ಉತ್ತರದಲ್ಲಿ ಕಬಿನಿ ನದಿ ಮತ್ತು ದಕ್ಷಿಣದಲ್ಲಿ ಮೋಯರ್ ನದಿಯ ನಡುವೆ ಇದೆ.
ನೀವು ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಹೋಗುವ ಪ್ಲಾನ್ ಇದೆಯಾ?...ಹಾಗಾದ್ರೆ ಈ 10 ಆಸಕ್ತಿಕರ ವಿಷಯಗಳನ್ನು ಮೊದಲು ತಿಳಿಯಿರಿ title=
Photo: Twitter (Incredible India)

ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ದೇಶದ ಮೂಲೆ ಮೂಲೆಗಳಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ.ಈ ಹುಲಿ ಸಂರಕ್ಷಿತ ಪ್ರದೇಶವು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಗಡಿಯೊಳಗೆ ಬರುತ್ತದೆ.ಈ ಹುಲಿ ಸಂರಕ್ಷಿತಾರಣ್ಯದ ಅರ್ಧದಷ್ಟು ತಮಿಳುನಾಡಿನಲ್ಲಿ ಮತ್ತು ಉಳಿದರ್ಧ ಕರ್ನಾಟಕದಲ್ಲಿದೆ.ಒಂದಾನೊಂದು ಕಾಲದಲ್ಲಿ ಈ ಪ್ರದೇಶ ರಾಜರ ಬೇಟೆಯ ತಾಣವಾಗಿತ್ತು. ನಂತರ ಇದನ್ನು ರಾಷ್ಟ್ರೀಯ ಉದ್ಯಾನವನವಾಗಿ ಅಭಿವೃದ್ಧಿಪಡಿಸಲಾಯಿತು.ನಂತರ 1973 ರಲ್ಲಿ ಈ ರಾಷ್ಟ್ರೀಯ ಉದ್ಯಾನವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಯಿತು.ಈ ಪ್ರದೇಶದಲ್ಲಿ ಪ್ರವಾಸಿಗರು ಅಳಿವಿನಂಚಿನಲ್ಲಿರುವ ಅನೇಕ ರೀತಿಯ ಸಸ್ಯ ಮತ್ತು ವನ್ಯಜೀವಿಗಳನ್ನು ಹತ್ತಿರದಿಂದ ನೋಡಬಹುದು.ಜೊತೆಗೆ ಪ್ರವಾಸಿಗರು ಇಲ್ಲಿ ಜೀಪ್ ಸಫಾರಿಯನ್ನು ಸಹ ಆನಂದಿಸಬಹುದು.

ಇದನ್ನೂ ಓದಿ- ತತ್ಕಾಲ್ ಪಾಸ್ಪೋರ್ಟ್ ಪಡೆಯುವುದು ಹೇಗೆ ಗೊತ್ತೇ?

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಂಬಂಧಿಸಿದ 10 ಆಸಕ್ತಿಕರ ವಿಷಯಗಳು

1) 1973ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಬಂಡೀಪುರವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಿದ್ದರು.

2) ಹುಲಿಗಳ ಸಂಖ್ಯೆ ಕಡಿಮೆಯಾಗುವುದನ್ನು ತಡೆಯಲು ಈ ರಾಷ್ಟ್ರೀಯ ಉದ್ಯಾನವನವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಯಿತು.

3) ಈ ವರ್ಷ ಏಪ್ರಿಲ್ 1, 2023 ರಂದು, ಇದು ಪ್ರಾಜೆಕ್ಟ್ ಟೈಗರ್ ರಿಸರ್ವ್ ಆಗಿ 50 ವರ್ಷಗಳನ್ನು ಪೂರೈಸಿದೆ.

4) ಪ್ರಾಜೆಕ್ಟ್ ಟೈಗರ್ ಆರಂಭಿಸಿದಾಗ ಬಂಡೀಪುರದಲ್ಲಿ 12 ಹುಲಿಗಳಿದ್ದವು. ಪ್ರಸ್ತುತ ಈ ಸಂಖ್ಯೆ 724 ಕ್ಕಿಂತ ಹೆಚ್ಚಿದೆ.

5) ಬಂಡೀಪುರ ರಾಷ್ಟ್ರೀಯ ಉದ್ಯಾನವನವನ್ನು ರಚಿಸಿದಾಗ ಅದರ ವಿಸ್ತೀರ್ಣ 90 ಚದರ ಕಿಲೋಮೀಟರ್ ಆಗಿತ್ತು, ನಂತರ ಅದನ್ನು 873 ಕ್ಕೆ ಹೆಚ್ಚಿಸಲಾಯಿತು.

6) ಬಂಡೀಪುರ ಕರ್ನಾಟಕದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ವ್ಯಾಪಿಸಿದೆ.

7) ಈ ರಾಷ್ಟ್ರೀಯ ಉದ್ಯಾನವನವು ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಮೂರು ರಾಜ್ಯಗಳ ಟ್ರೈ-ಜಂಕ್ಷನ್ ಪ್ರದೇಶದಲ್ಲಿ ಹರಡಿದೆ.

8) ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ಮೈಸೂರು ಆನೆ ಸಂರಕ್ಷಿತ ಪ್ರದೇಶದ ಭಾಗವಾಗಿದೆ.

9) ಈ ಉದ್ಯಾನವನವು ಉತ್ತರದಲ್ಲಿ ಕಬಿನಿ ನದಿ ಮತ್ತು ದಕ್ಷಿಣದಲ್ಲಿ ಮೋಯರ್ ನದಿಯ ನಡುವೆ ಇದೆ.

10) ಈ ಉದ್ಯಾನವನದ ಮೂಲಕ ನುಗು ನದಿ ಹರಿಯುತ್ತದೆ.

ಇದನ್ನೂ ಓದಿ: ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿದ ಅರ್ಜುನ್ ಸರ್ಜಾ ಪುತ್ರಿಯ ನಿಶ್ಚಿತಾರ್ಥ

ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರು ಆನೆ, ಹುಲಿ, ನಾಲ್ಕು ಕೊಂಬಿನ ಹುಲ್ಲೆ, ಮೊಸಳೆ ಮತ್ತು ಭಾರತೀಯ ರಾಕ್ ಹೆಬ್ಬಾವು ಮುಂತಾದ ಪ್ರಾಣಿಗಳನ್ನು ನೋಡಬಹುದು. ಪ್ರವಾಸಿಗರು ತೇಗ, ರೋಸ್‌ವುಡ್, ಶ್ರೀಗಂಧದ ಮರ, ಬಿದಿರು ಮತ್ತು ಗ್ರೀವಿಯಾ ಟಿಬಿಯಾ ಫೋಲಿಯಾ ಮುಂತಾದ ಸಸ್ಯಗಳನ್ನು ಸಹ ಇಲ್ಲಿ ನೋಡಬಹುದು. ಈ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರು ಜೀಪ್ ಸಫಾರಿ ಮತ್ತು ಬಸ್ ಸಫಾರಿ ಮತ್ತು ದೋಣಿ ವಿಹಾರವನ್ನು ಆನಂದಿಸಬಹುದು. ಈ ರಾಷ್ಟ್ರೀಯ ಉದ್ಯಾನವನವು ಬೆಳಿಗ್ಗೆ 6:30 ರಿಂದ ಸಂಜೆ 8:30 ರವರೆಗೆ ತೆರೆದಿರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News