ICC World Cup 2023 Points Table List: ಪ್ರಸ್ತುತ, ಭಾರತ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಪಾಯಿಂಟ್‌’ಗಳ ಪಟ್ಟಿಯಲ್ಲಿ ತಲಾ ಎರಡು ಅಂಕಗಳನ್ನು ಪಡೆದಿವೆ. ಇನ್ನು ನ್ಯೂಜಿಲೆಂಡ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.


COMMERCIAL BREAK
SCROLL TO CONTINUE READING

ಭಾರತ ಏಕದಿನ ವಿಶ್ವಕಪ್‌’ನ ತನ್ನ ಮೊದಲ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವನ್ನು ಆರು ವಿಕೆಟ್‌ಗಳಿಂದ ಸೋಲಿಸಿತ್ತು. ಗೆಲುವಿಗೆ ನೀಡಿದ್ದ 200 ರನ್‌’ಗಳ ಗುರಿಯನ್ನು ಟೀಂ ಇಂಡಿಯಾ 41.2 ಓವರ್‌’ಗಳಲ್ಲಿ ಸಾಧಿಸಿತು. ಈ ಪಂದ್ಯದೊಂದಿಗೆ ಎಲ್ಲಾ 10 ತಂಡಗಳು ತಲಾ ಒಂದು ಪಂದ್ಯವನ್ನು ಆಡಿವೆ.


ಇದನ್ನೂ ಓದಿ: ಈಗ ಏಷ್ಯಾದ ನಂಬರ್-1 ಬ್ಯಾಟ್ಸ್‌ಮನ್ ಕೊಹ್ಲಿ! ಕೇವಲ ಒಂದು ಪಂದ್ಯದಲ್ಲಿ ಹಲವು ದಾಖಲೆ ಮುರಿದ ವಿರಾಟ್ 


ಇಲ್ಲಿಯವರೆಗೆ, ಐದು ತಂಡಗಳು ಪಾಯಿಂಟ್ ಪಟ್ಟಿಯಲ್ಲಿ ಖಾತೆಗಳನ್ನು ತೆರೆದಿವೆ. ಉಳಿದ ಐದು ತಂಡಗಳು ಖಾತೆ ತೆರೆಯಲು ಕಾಯುತ್ತಿವೆ.


ಪಾಯಿಂಟ್ ಪಟ್ಟಿಯಲ್ಲಿ ಯಾವ ತಂಡಕ್ಕೆ ಯಾವ ಸ್ಥಾನ?


ಪ್ರಸ್ತುತ ಅಂಕಪಟ್ಟಿಯಲ್ಲಿ ಭಾರತ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಲಾ ಎರಡು ಅಂಕಗಳನ್ನು ಹೊಂದಿವೆ. ಸದ್ಯ ನ್ಯೂಜಿಲೆಂಡ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌’ನ್ನು ಒಂಬತ್ತು ವಿಕೆಟ್‌’ಗಳಿಂದ ಸೋಲಿಸಿದ ಕಿವೀಸ್ ತಂಡ, ಅತ್ಯುತ್ತಮ ನೆಟ್ ರನ್’ರೇಟ್ ಹೊಂದಿದೆ. ತಂಡದ ನಿವ್ವಳ ರನ್ ರೇಟ್ +2.149 ಆಗಿದೆ


ಇನ್ನೊಂದೆಡೆ, ದಕ್ಷಿಣ ಆಫ್ರಿಕಾ ತಂಡವು +2.040 ನೆಟ್ ರನ್ ರೇಟ್‌’ನೊಂದಿಗೆ ಎರಡನೇ ಸ್ಥಾನದಲ್ಲಿದೆ. ಆಫ್ರಿಕಾ ತಂಡ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು 102 ರನ್‌’ಗಳಿಂದ ಸೋಲಿಸಿತ್ತು.


ಪಾಕಿಸ್ತಾನ ತಂಡ ಮೂರನೇ ಸ್ಥಾನದಲ್ಲಿದೆ. ಈ ತಂಡದ ನಿವ್ವಳ ರನ್ ರೇಟ್ +1.620 ಆಗಿದೆ. ತನ್ನ ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್ ಅನ್ನು 81 ರನ್’ಗಳಿಂದ ಸೋಲಿಸಿತ್ತು.


ಬಾಂಗ್ಲಾದೇಶ ತಂಡವು ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ತನ್ನ ಮೊದಲ ಪಂದ್ಯದಲ್ಲಿ ಆರು ವಿಕೆಟ್‌’ಗಳಿಂದ ಅಫ್ಘಾನಿಸ್ತಾನವನ್ನು ಸೋಲಿಸಿದ್ದು, ಶಕೀಬ್ ಅಲ್ ಹಸನ್ ತಂಡದ ನಿವ್ವಳ ರನ್ ರೇಟ್ +1.438 ಆಗಿದೆ.


ಇನ್ನು ಟೀಂ ಇಂಡಿಯಾ ಪಾಯಿಂಟ್ ಟೇಬಲ್’ನಲ್ಲಿ ಐದನೇ ಸ್ಥಾನದಲ್ಲಿದೆ. ಭಾರತದ ನಿವ್ವಳ ರನ್ ರೇಟ್ +0.883. ಆದರೆ, ಟೂರ್ನಿಯ ಆರಂಭಿಕ ಹಂತವಾಗಿದ್ದರಿಂದ ನೆಟ್ ರನ್ ರೇಟ್ ಕದನ ಇನ್ನೂ ಆರಂಭವಾಗಿಲ್ಲ. ಮುಂದಿನ ದಿನಗಳಲ್ಲಿ ಬದಲಾವಣೆಗಳನ್ನು ಕಾಣಬಹುದು.


ವಿಶ್ವಕಪ್‌’ನ ಮುಂದಿನ ಐದು ಪಂದ್ಯಗಳು ಈ ಕೆಳಗಿನಂತಿವೆ:


  • 9 ಅಕ್ಟೋಬರ್- ನ್ಯೂಜಿಲೆಂಡ್ ವಿರುದ್ಧ ನೆದರ್ಲ್ಯಾಂಡ್ಸ್- ಹೈದರಾಬಾದ್

  • 10 ಅಕ್ಟೋಬರ್ -ಇಂಗ್ಲೆಂಡ್ ವಿರುದ್ಧ ಬಾಂಗ್ಲಾದೇಶ -ಧರ್ಮಶಾಲಾ

  • ಅಕ್ಟೋಬರ್ 10 -ಪಾಕಿಸ್ತಾನ ವಿರುದ್ಧ ಶ್ರೀಲಂಕಾ -ಹೈದರಾಬಾದ್

  • 11 ಅಕ್ಟೋಬರ್- ಭಾರತ ವಿರುದ್ಧ ಅಫ್ಘಾನಿಸ್ತಾನ- ದೆಹಲಿ

  • 12 ಅಕ್ಟೋಬರ್- ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ- ಲಕ್ನೋ


ಈ ತಂಡಗಳಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನ:


ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ನೆದರ್ಲ್ಯಾಂಡ್ಸ್, ಶ್ರೀಲಂಕಾ ಮತ್ತು ಇಂಗ್ಲೆಂಡ್ ಯಾವುದೇ ಅಂಕಗಳನ್ನು ಪಡೆದಿಲ್ಲ. ಭಾರತ ವಿರುದ್ಧ ಸೋತ ಆಸ್ಟ್ರೇಲಿಯಾದ ನಿವ್ವಳ ರನ್ ರೇಟ್ -0.883 ಆಗಿದ್ದು, ಪಾಯಿಂಟ್ ಟೇಬಲ್’ನಲ್ಲಿ 6ನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ ವಿರುದ್ಧ ಸೋತಿರುವ ಅಫ್ಘಾನಿಸ್ತಾನ ಏಳನೇ ಸ್ಥಾನದಲ್ಲಿದೆ. ಈ ತಂಡದ ನಿವ್ವಳ ರನ್ ರೇಟ್ -1.438. ನೆದರ್ಲೆಂಡ್ಸ್ 1.620 ನಿವ್ವಳ ರನ್ ರೇಟ್‌’ನೊಂದಿಗೆ ಎಂಟನೇ ಸ್ಥಾನದಲ್ಲಿದೆ, ಶ್ರೀಲಂಕಾ 2.040 ನೆಟ್ ರನ್ ರೇಟ್‌ನೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋತ ಇಂಗ್ಲೆಂಡ್ ತಂಡ -2.149 ನೆಟ್ ರನ್ ರೇಟ್‌’ನೊಂದಿಗೆ 10 ನೇ ಸ್ಥಾನದಲ್ಲಿದೆ.


ಇದನ್ನೂ ಓದಿ: ಚಿನ್ನದ ದರದ ಮೇಲೂ ಕಂಡು ಬಂತು ಇಸ್ರೇಲ್ ಮತ್ತು ಪ್ಯಾಲೆಸ್ತೀನ್  ಯುದ್ದದ ಪರಿಣಾಮ ! ಇಂದು ಎಷ್ಟಾಗಿದೆ ಗೊತ್ತಾ ಬಂಗಾರದ ಬೆಲೆ ? 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.