ಈಗ ಏಷ್ಯಾದ ನಂಬರ್-1 ಬ್ಯಾಟ್ಸ್‌ಮನ್ ಕೊಹ್ಲಿ! ಕೇವಲ ಒಂದು ಪಂದ್ಯದಲ್ಲಿ ಹಲವು ದಾಖಲೆ ಮುರಿದ ವಿರಾಟ್

Rahul-Kohli Biggest Partnership: ಈ ರನ್‌ಗಳೊಂದಿಗೆ, ವಿರಾಟ್ ಕೊಹ್ಲಿ ಮತ್ತೊಮ್ಮೆ ತಮ್ಮ ಹೆಸರನ್ನು ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಸಾಲಿಗೆ ಸೇರಿಸಿದ್ದಾರೆ. 

Written by - Ranjitha R K | Last Updated : Oct 9, 2023, 12:35 PM IST
  • ವಿರಾಟ್ ಕೊಹ್ಲಿ ಏಷ್ಯಾದ ನಂಬರ್ 1 ಬ್ಯಾಟ್ಸ್‌ಮನ್
  • ರಾಹುಲ್ ಜೊತೆಗೂಡಿ ಈ ದಾಖಲೆ
  • ಈ ದಿಗ್ಗಜ್ಜರನ್ನು ಹಿಂದಿಕ್ಕಿ ಹೊಸ ದಾಖಲೆ
ಈಗ ಏಷ್ಯಾದ ನಂಬರ್-1 ಬ್ಯಾಟ್ಸ್‌ಮನ್ ಕೊಹ್ಲಿ! ಕೇವಲ ಒಂದು ಪಂದ್ಯದಲ್ಲಿ ಹಲವು ದಾಖಲೆ ಮುರಿದ ವಿರಾಟ್  title=

Rahul-Kohli Biggest Partnership: ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ನ 5ನೇ ಪಂದ್ಯದಲ್ಲಿ ಭಾರತದ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ ಅತಿ ದೊಡ್ಡ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿ ಒಂದಲ್ಲ, ಎರಡಲ್ಲ ಹಲವು ಅದ್ಭುತ ದಾಖಲೆಗಳನ್ನು ಮುರಿದಿದ್ದಾರೆ. ಈ ಮೂಲಕ ಕೊಹ್ಲಿ ಏಷ್ಯಾದ ನಂಬರ್-1ಬ್ಯಾಟ್ಸ್‌ಮನ್ ಸ್ಥಾನಕ್ಕೆ ಏರಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ದೊಡ್ಡ ದಾಖಲೆಯನ್ನು  ಕೂಡಾ ಕೊಹ್ಲಿ ಬದಿಗಟ್ಟಿದ್ದಾರೆ.  

ವಿರಾಟ್ ಕೊಹ್ಲಿ ಏಷ್ಯಾದ ನಂಬರ್ 1 ಬ್ಯಾಟ್ಸ್‌ಮನ್ : 
ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 116 ಎಸೆತಗಳನ್ನು ಎದುರಿಸಿ 85 ರನ್‌ಗಳನ್ನು ಬಾರಿಸಿದ್ದಾರೆ. 6 ಬೌಂಡರಿಗಳ ನೆರವಿನಿಂದ ಕೊಹ್ಲಿ ಈ ರನ್ ಗಳಿಸುವುದು ಸಾಧ್ಯವಾಯಿತು. ಈ ರನ್‌ಗಳೊಂದಿಗೆ, ವಿರಾಟ್ ಕೊಹ್ಲಿ ಮತ್ತೊಮ್ಮೆ ತಮ್ಮ ಹೆಸರನ್ನು ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಸಾಲಿಗೆ ಸೇರಿಸಿದ್ದಾರೆ. ಕೊಹ್ಲಿ ಇದೀಗ ಏಷ್ಯಾದಲ್ಲೇ ಅತಿ ವೇಗವಾಗಿ 15,000 ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. 

ಇದನ್ನೂ ಓದಿ : World cup 2023 : ಮೊದಲ ಗೆಲುವಿನ ನಂತರ ತಂಡಕ್ಕೆ ದೊಡ್ಡ ಆಘಾತ! ಈ ಮ್ಯಾಚ್ ವಿನ್ನರ್ ಮುಂದಿನ ಪಂದ್ಯದಿಂದ ಔಟ್

ರಾಹುಲ್ ಜೊತೆಗೂಡಿ ಈ ದಾಖಲೆ :
ಏಷ್ಯಾದಲ್ಲಿ ನಂಬರ್-1 ಆಗುವುದರೊಂದಿಗೆ ರಾಹುಲ್ ಜೊತೆಗೆ ಕೊಹ್ಲಿ ಮತ್ತೊಂದು ದೊಡ್ಡ ದಾಖಲೆಯನ್ನೂ ಮಾಡಿದ್ದಾರೆ. ವಾಸ್ತವವಾಗಿ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಮತ್ತು ರಾಹುಲ್ ಜೋಡಿ ನಾಲ್ಕನೇ ವಿಕೆಟ್‌ಗೆ 165 ರನ್‌ಗಳ ಮ್ಯಾಚ್ ವಿನ್ನಿಂಗ್ ಜೊತೆಯಾಟ ನೀಡಿತ್ತು. ಇದರೊಂದಿಗೆ ಈ ಜೋಡಿ ವಿಶ್ವಕಪ್ ಇತಿಹಾಸದಲ್ಲಿ ಅತಿ ದೊಡ್ಡ ಜೊತೆಯಾಟದ ಜೋಡಿ ಎನಿಸಿಕೊಂಡಿದೆ.  

 ಈ ದಿಗ್ಗಜ್ಜರನ್ನು ಹಿಂದಿಕ್ಕಿ ಹೊಸ ದಾಖಲೆ : 
165 ರನ್‌ಗಳ ಜೊತೆಯಾಟದಲ್ಲಿ ಕೊಹ್ಲಿ-ರಾಹುಲ್ ಅಜಯ್ ಜಡೇಜಾ ಮತ್ತು ರಾಬಿನ್ ಸಿಂಗ್ ಅವರ ದಾಖಲೆಯನ್ನು ಮುರಿದಿದ್ದಾರೆ. ಜಡೇಜಾ-ರಾಬಿನ್ ಜೋಡಿ 1999ರಲ್ಲಿ 141 ರನ್‌ಗಳ ಜೊತೆಯಾಟ ನೀಡಿದ್ದರೆ, 2019ರಲ್ಲಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ 127 ರನ್  ಬಾರಿಸಿದ್ದರು. ಆದರೆ ನಿನ್ನೆಯ ಪಂದ್ಯದಲ್ಲಿ ನಾಲ್ಕನೇ ವಿಕೆಟ್‌ಗೆ ರಾಹುಲ್-ಕೊಹ್ಲಿ ನೀಡಿದ ಜೊತೆಯಾಟವು ವಿಶ್ವಕಪ್‌ನಲ್ಲಿ ಎರಡನೇ ಅತಿದೊಡ್ಡ ಜೊತೆಯಾಟವಾಗಿದೆ. 2015 ರಲ್ಲಿ ಆಕ್ಲೆಂಡ್‌ನಲ್ಲಿ ಜಿಂಬಾಬ್ವೆ ವಿರುದ್ಧ ಅಜೇಯ 196 ರನ್‌ಗಳನ್ನು ಸೇರಿಸಿದ್ದ ಧೋನಿ ಮತ್ತು ರೈನಾ ಜೋಡಿ, ಜೊತೆಯಾಟದಲ್ಲಿ ಮೊದಲ ಸ್ಥಾನದಲ್ಲಿದೆ.

ಇದನ್ನೂ ಓದಿ : ಗೆದ್ದರೂ ಕಳಪೆ ದಾಖಲೆ ಬರೆದ ಭಾರತ: ಕ್ರಿಕೆಟ್ ಇತಿಹಾಸದಲ್ಲೇ ಯಾರೂ ಮಾಡಿರದ ಕೆಟ್ಟ ರೆಕಾರ್ಡ್ ಇದು…!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News