World Cup 2023 : ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ 2023 ರ ವಿಶ್ವಕಪ್‌ನಲ್ಲಿ ಭಾರತ ಪಾಲಿನ ಚಿನ್ನವೇ ಸರಿ. ಭಾನುವಾರ ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಕೆಎಲ್ ರಾಹುಲ್ ಚೆನ್ನೈನ ಕಠಿಣ ಪಿಚ್‌ನಲ್ಲಿಯೂ  ಅದ್ಭುತ ಪ್ರದರ್ಶನ ನೀಡಿದ್ದಾರೆ. ಅಜೇಯ 97 ರನ್‌ಗಳನ್ನು ಕಲೆ ಹಾಕುವ ಮೂಲಕ   ಪಂದ್ಯದ ಗೆಲುವಿಗೆ ಕಾರಣವಾದರು. ಆದರೆ ಹಿಂದೆ,  ಬಹುತೇಕ ಸಂದರ್ಭಗಳಲ್ಲಿ ಕೆಎಲ್ ರಾಹುಲ್ ಅಭಿಮಾನಿಗಳಿಂದ ಕೋಪ ಮತ್ತು ಟ್ರೋಲಿಂಗ್‌ಗೆ ಒಳಗಾದ ಸ್ಥಿತಿ ನಿರ್ಮಾಣವಾಗಿತ್ತು. ಹೇಳಿಕೊಳ್ಳುವಂಥಹ ಕೆಟ್ಟ ಪ್ರದರ್ಶನ ನೀಡದೆ ಹೋದರೂ ಕೆಎಲ್ ರಾಹುಲ್ ನಿರಂತರ ಟೀಕೆಗೆ ಗುರಿಯಾಗುತ್ತಿದ್ದರು. 


COMMERCIAL BREAK
SCROLL TO CONTINUE READING

ಮ್ಯಾಚ್ ವಿನ್ನರ್ ರಾಹುಲ್ ಕಥೆ : 
ಮೇ 2023 ರಲ್ಲಿ IPL ಸಮಯದಲ್ಲಿ ಗಾಯಗೊಂಡ ಕಾರಣ ಕ್ರಿ ಹಲವು ತಿಂಗಳುಗಳ ಕಾಲ ಕೆ ಎಲ್ ರಾಹುಲ್ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗಿತ್ತು.  ತನ್ನ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡ ರಾಹುಲ್  ಕಳೆದ ತಿಂಗಳು ಏಷ್ಯಾಕಪ್‌ ಟೂರ್ನಿ ವೇಳೆ ತಂಡಕ್ಕೆ ಮರಳಿದರು. ಏಷ್ಯಾಕಪ್‌ ಟೂರ್ನಿಯಲ್ಲಿ ರಾಹುಲ್ ಮೂರನೇ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇಷ್ಟೆಲ್ಲಾ ನಡೆದ ಬಳಿಕ ಇದೀಗ ರಾಹುಲ್ ತನ್ನ ಬದುಕಿನ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. 'ಸ್ಟಾರ್ ಸ್ಪೋರ್ಟ್ಸ್'ಗೆ ನೀಡಿದ ಸಂದರ್ಶನದ ವೇಳೆ ರಾಹುಲ್, ತನ್ನ ಬದುಕಿನ ಕೆಟ್ಟ ದಿನಗಳ ಬಗ್ಗೆ ಮೆಲುಕು ಹಾಕಿದ್ದಾರೆ.  ಪ್ರತಿ ಪಂದ್ಯ ಮತ್ತು ಸನ್ನಿವೇಶದಲ್ಲಿ ಜನರು ನನ್ನ ಪ್ರದರ್ಶನದ ಬಗ್ಗೆ ಕಾಮೆಂಟ್ ಮಾಡುತ್ತಿದ್ದರು. ಅದು ಕೂಡಾ ಕೆಟ್ಟ ಕಾಮೆಂಟ್. ಯಾಕೆ ಹೀಗಾಗುತ್ತಿದೆ ಎನ್ನುವುದೇ ನನಗೆ ಅರ್ಥವಾಗುತ್ತಿರಲಿಲ್ಲ. ಪ್ರದರ್ಶನ ಉತ್ತಮವಾಗಿದ್ದ ವೇಳೆಯೂ ಜನರಿಂದ ಕೆಟ್ಟ ಮಾತುಗಳೇ ಬರುತ್ತಿತ್ತು.  ಆ ಸಂದರ್ಭಗಳಲ್ಲಿ ಬಹಳ ನೋವಾಗುತ್ತಿತ್ತು ಎಂದು ತಮ್ಮ ಮನದ ನೋವನ್ನು ಹೊರ ಹಾಕಿದ್ದಾರೆ. 


ಇದನ್ನೂ ಓದಿ : 128 ವರ್ಷಗಳ ನಂತರ ಒಲಿಂಪಿಕ್ಸ್’ಗೆ ಕ್ರಿಕೆಟ್ ಸೇರ್ಪಡೆ! ಐಸಿಸಿಯ 2 ವರ್ಷಗಳ ಪರಿಶ್ರಮಕ್ಕೆ ಸಿಕ್ಕೇಬಿಡ್ತು ಫಲ


"ಅತಿಯಾಗಿ ಕಾಡಿದ್ದೇ  ಈ ನೋವು"  : 
ಗಾಯದ ನೋವು ಮತ್ತು ಚೇತರಿಸಿಕೊಳ್ಳುವ ಪ್ರಕ್ರಿಯೆ ನನಗೆ ತಿಳಿದಿದೆ. ನಾನು ಐಪಿಎಲ್ ಸಮಯದಲ್ಲಿ ಗಾಯಗೊಂಡಿದ್ದ ಕಾರಣ ನಾಲ್ಕೈದು ತಿಂಗಳ ನಷ್ಟವನ್ನು ಅನುಭವಿಸುವಂತಾಗಿತ್ತು ಎಂದು ರಾಹುಲ್ ಹೇಳಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ವಿಶ್ವಕಪ್‌ನಲ್ಲಿ ಆಡುವುದು ಸಾಧ್ಯವಾಗುವುದೇ, ತಂಡ ತನ್ನನ್ನು ಆಯ್ಕೆ ಮಾಡುವುದೇ ಎನ್ನುವ ಆತಂಕ ಕೂಡಾ ರಾಹುಲ್ ಅವರನ್ನು ಅತಿಯಾಗಿ ಕಾಡಿತ್ತಂತೆ.  ಈ ಸಮಯ ಅತ್ಯಂತ ಕಷ್ಟಕರ ಸಮಯ ಎನ್ನುತ್ತಾರೆ ರಾಹುಲ್. ಈ 


ರಾಹುಲ್ ಪ್ರದರ್ಶನ : 
31 ವರ್ಷದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಭಾರತದ ಮೊದಲ ಪಂದ್ಯದಲ್ಲಿ 97 ರನ್‌ಗಳ ಅಜೇಯ ಇನ್ನಿಂಗ್ಸ್  ಆಡಿದರು. ಇದರಿಂದಾಗಿ ಆತಿಥೇಯ ತಂಡವು ಆರು ವಿಕೆಟ್‌ಗಳ ಗೆಲುವು ಸಾಧಿಸುವಂತಾಯಿತು. ಇನ್ನು ಸಣ್ಣ ಗಾಯದ ಕಾರಣದಿಂದ ಏಷ್ಯಾ ಕಪ್‌ನ ಮೊದಲ ಎರಡು ಪಂದ್ಯಗಳಿಂದ  ರಾಹುಲ್ ಹೊರಗುಳಿಡಿದ್ದರು. ನಂತರ, ರಾಹುಲ್ ಮೂರು ಇನ್ನಿಂಗ್ಸ್‌ಗಳಲ್ಲಿ 84.50 ಸರಾಸರಿ ಮತ್ತು 89.41 ಸ್ಟ್ರೈಕ್ ರೇಟ್‌ನಲ್ಲಿ 169 ರನ್ ಗಳಿಸಿದರು. ಇದರಲ್ಲಿ ಶತಕವೂ ಸೇರಿದೆ. 


ಇದನ್ನೂ ಓದಿ : ವಿಶ್ವಕಪ್ ನಿರೂಪಣೆಗೆ ಬಂದಿದ್ದ ಪಾಕ್ ನಿರೂಪಕಿ ಭಾರತದಿಂದ ಗಡಿಪಾರು! ಬಾಬರ್ ಆಜಂ ಜೊತೆಗೂ ಈಕೆಯ ಕಿತ್ತಾಟ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.