ಫೈನಲ್ ಗೂ ಮುನ್ನ ಭಯ ಬಿದ್ದ ಕಾಂಗರೂ ಪಡೆ ! ಮ್ಯಾಚ್ ವಿನ್ನರ್ ಬಾಯಿಯಿಂದ ಬಂತು ಈ ಮಾತು !
Mitchell Starc Statement: 2003 ರ ವಿಶ್ವಕಪ್ ನಂತರ ಮೊದಲ ಬಾರಿಗೆ ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. 2003ರ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ ಟೀಂ ಇಂಡಿಯಾ.
Mitchell Starc Statement : ದಕ್ಷಿಣ ಆಫ್ರಿಕಾವನ್ನು 3 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಆಸ್ಟ್ರೇಲಿಯಾ ಎಂಟನೇ ಬಾರಿಗೆ ವಿಶ್ವಕಪ್ ಫೈನಲ್‌ಗೆ ಪ್ರವೇಶಿಸಿದೆ. ವಿಶ್ವಕಪ್ ಫೈನಲ್ ಪಂದ್ಯ ನವೆಂಬರ್ 19 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ ಮ್ಯಾಚ್ ವಿನ್ನರ್ ಆಟಗಾರ ಹೇಳಿಕೆಯೊಂದನ್ನು ನೀಡಿದ್ದಾರೆ. 2003 ರ ವಿಶ್ವಕಪ್ ನಂತರ ಮೊದಲ ಬಾರಿಗೆ ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. 2003ರ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ ಟೀಂ ಇಂಡಿಯಾ.
ಮ್ಯಾಚ್ ವಿನ್ನರ್ ಬಾಯಿಯಿಂದ ಬಂತು ಈ ಮಾತು :
ಟೀಂ ಇಂಡಿಯಾ ವಿರುದ್ಧದ ಫೈನಲ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಹೇಳಿಕೆಯೊಂದನ್ನು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸ್ಟಾರ್ಕ್, 'ಇದು ವಿಶ್ವಕಪ್‌ನ ಅಂತಿಮ ಪಂದ್ಯ. ಇದು ದೊಡ್ಡ ಪಂದ್ಯವಾಗಲಿದೆ ಎಂದಿದ್ದಾರೆ. ವಿಶ್ವಕಪ್ ಫೈನಲ್ ಮೋಜು ಮಸ್ತಿಯಿಂದ ಕೂಡಿರಲಿದೆ. ಆದರೆ ಇಲ್ಲಿ ಒಂದು ರೀತಿಯ ಒತ್ತಡ ಇದ್ದೇ ಇರುತ್ತದೆ ಎನ್ನುವುದು ಸುಳ್ಳಲ್ಲ ಎಂದಿದ್ದಾರೆ. ಆದರೂ ಇದು ಕ್ರಿಕೆಟ್‌ನ ಶ್ರೇಷ್ಠ ಪಂದ್ಯವಾಗಲಿದೆ ಎನ್ನುವ ಭಾವನೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಏಕದಿನ ಕ್ರಿಕೆಟ್ ಗೆ ಸ್ಟಾರ್ ಪ್ಲೇಯರ್ ನಿವೃತ್ತಿ! ಕಣ್ಣೀ ರಿನ ಮೂಲಕ ವಿದಾಯ ಹೇಳಿದ ಆಟಗಾರ
ಟೀಂ ಇಂಡಿಯಾ ಬಗ್ಗೆ ಹೇಳಿರುವುದೇನು ? :
ಈ ಟೂರ್ನಿಯಲ್ಲಿ ಟೀಂ ಇಂಡಿಯಾದ ನಿರಂತರ ಅತ್ಯುತ್ತಮ ಪ್ರದರ್ಶನದ ಕುರಿತು ಮಾತನಾಡಿದ ಸ್ಟಾರ್ಕ್, 'ಈ ಪಂದ್ಯಾವಳಿಯಲ್ಲಿ ಇಲ್ಲಿಯವರೆಗೆ ಭಾರತ ಅತ್ಯುತ್ತಮವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಟೂರ್ನಿಯ ಮೊದಲ ಪಂದ್ಯವನ್ನು ಭಾರತದ ವಿರುದ್ಧ ಆಡಿದ್ದೇವೆ, ಕೊನೆಯ ಪಂದ್ಯ ಕೂಡಾ ಭಾರತದ ವಿರುದ್ಧವೇ ಆಡಲಿದ್ದೇವೆ. ವಿಶ್ವಕಪ್ ನ ಫೈನಲ್ ಪಂದ್ಯ ಎಷ್ಟು ಅದ್ಭುತವಾಗಿರಲಿದೆ ಎನ್ನುವುಡು ಕುತೂಹಲಕಾರಿಯಾಗಿದೆ ಎಂದಿದ್ದಾರೆ.
ಮರುಕಳಿಸುವುದೇ 1983, 2011 ರ್ ವೈಭವ ? :
2011 ರ ವಿಶ್ವಕಪ್ ನಂತರ ಮೊದಲ ಬಾರಿಗೆ 2023 ರ ವಿಶ್ವಕಪ್‌ನ ಫೈನಲ್ ಪಂದ್ಯವನ್ನು ಟೀಮ್ ಇಂಡಿಯಾ ಆಡುತ್ತಿದೆ. ಆ ಸಮಯದಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ತಂಡ ವಿಶ್ವ ಚಾಂಪಿಯನ್ ಆಗಿತ್ತು. ಈಗ ರೋಹಿತ್ ಶರ್ಮಾ ನಾಯಕತ್ವದಲ್ಲಿ ತಂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಇದುವರೆಗೂ ಟೂರ್ನಿಯಲ್ಲಿ ತಂಡ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಇಂತಹ ಪರಿಸ್ಥಿತಿಯಲ್ಲಿ 1983 ಮತ್ತು 2011ರ ವೈಭವ ಮತ್ತೆ ಮರಳುವುದೇ ನೋಡಬೇಕು.
ಇದನ್ನೂ ಓದಿ : ICC World Cup 2023: 20 ವರ್ಷಗಳ ನಂತರ ವಿಶ್ವಕಪ್ ಫೈನಲ್‌ನಲ್ಲಿ ಭಾರತ vs ಆಸ್ಟ್ರೇಲಿಯಾ ಮುಖಾಮುಖಿ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.