Quinton de Kock Retirement : ವಿಶ್ವಕಪ್ 2ನೇ ಸೆಮಿಫೈನಲ್ನಲ್ಲಿ ದಕ್ಷಿಣಾ ಆಫ್ರಿಕಾ ವಿರುದ್ದ ಆಸ್ಟ್ರೇಲಿಯಾ ಗೆಲುವು ಸಾಧಿಸಿದೆ. ಈ ಮೂಲಕ ಆಸ್ಟ್ರೇಲಿಯಾ ಎಂಟನೇ ಬಾರಿಗೆ ಫೈನಲ್ ತಲುಪಿದೆ. ದಕ್ಷಿಣಾ ಆಫ್ರಿಕಾ ಫೈನಲ್ ತಲುಪುವಲ್ಲಿ ಮತ್ತೊಮ್ಮೆ ಮುಗ್ಗರಿಸಿದೆ. ಇದರೊಂದಿಗೆ ದಕ್ಷಿಣ ಆಫ್ರಿಕಾ ಫೈನಲ್ ಗೆ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ 5ನೇ ಬಾರಿಗೆ ವಿಫಲವಾಗಿದೆ. ಸೆಮಿ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸೋಲುವುದರೊಂದಿಗೆ ತಂಡದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಏಕದಿನ ಕ್ರಿಕೆಟ್ ವೃತ್ತಿಜೀವನಕ್ಕೆ ಕೊನೆ ಹಾಡಿದ್ದಾರೆ.
ಕಾಂಗರೂಗಳಿಗೆ ಶರಣಾದ ಹರಿಣಗಳು :
ಈ ಬಾರಿಯ್ ವಿಶ್ವಕಪ್ ತಂಡಗಳಲ್ಲಿ ಅತ್ಯಂತ ಬಲಿಷ್ಠ ತಂಡಗಳಲ್ಲಿ ಒಂದಾಗಿತ್ತು ದಕ್ಷಿಣ ಆಫ್ರಿಕಾ. ಆದರೆ ಈ ಬಾರಿ ಕೂಡಾ ಸೆಮಿ ಫೈನಲ್ ನಲ್ಲಿ ತಂದ ಎಡವಿದೆ. ಆಸ್ಟ್ರೇಲಿಯಾ ವಿರುದ್ದ 3 ವಿಕೆಟ್ಗಳಿಗೆ ಶರಣಾದ ಹರಿಣಗಳ ಫೈನಲ್ ಪ್ರವೇಶದ ಕನಸು ನನಸಾಗಲೇ ಇಲ್ಲ.
ಇದನ್ನೂ ಓದಿ : ಟೀಂ ಇಂಡಿಯಾದ ಈ ಆಟಗಾರನೇ ಜಗತ್ತಿನ ಅತ್ಯುತ್ತಮ ಬೌಲರ್: ಕೀವೀಸ್ ನಾಯಕ ಕೇನ್ ವಿಲಿಯಮ್ಸನ್ ಶ್ಲಾಘಿಸಿದ್ದು ಯಾರನ್ನು?
ಕ್ವಿಂಟನ್ ಡಿ ಕಾಕ್ ಕಣ್ಣೀರ ವಿದಾಯ :
ಈ ಸೋಲಿನ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್, ಏಕದಿನ ಕ್ರಿಕೆಟ್ ಮಾದರಿಗೆ ವಿದಾಯ ಹಾಡಿದ್ದಾರೆ. ವಿಶ್ವಕಪ್ ಪಂದ್ಯಾವಳಿ ಆರಂಭಕ್ಕೆ ಮುನ್ನವೇ ಕ್ವಿಂಟನ್ ಡಿ ಕಾಕ್, ವರ್ಲ್ಡ್ ಕಪ್ ಟೂ ರ್ನಿ ಬಳಿಕ ಏಕದಿನ ಪಂದ್ಯಕ್ಕೆ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದರು. ಆದರೆ ಸೋಲಿನ ಮೂಲಕ ಏಕ ದಿನ ಕ್ರಿಕೆಟ್ ಗೆ ವಿದಾಯ ಹೇಳುತ್ತಿರುವೂ ಅವರಿಗೆ ಕಣ್ಣೀರು ತರಿಸಿದೆ.
ಟಿ20 ಯತ್ತ ಗಮನ :
ಟೂರ್ನಿಯುದ್ದಕ್ಕೂ ಅಬ್ಬರಿಸಿದ್ದ ಡಿ ಕಾಕ್, ತಂಡದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಟಿ20 ಅಂತಾರಾಷ್ಟ್ರೀಯ ಮತ್ತು ಪ್ರಾಂಚೈಸಿ ಲೀಗ್‌ನತ್ತ ಗಮನಹರಿಸುವ ಸಲುವಾಗಿ ಅವರು ಏಕದಿನ ಪಂದ್ಯದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರವಾಗಿ ಡಿ ಕಾಕ್, ಮೈದಾನಕ್ಕೆ ಇಳಿಯಲಿದ್ದಾರೆ. ಇವರು ಟೆಸ್ಟ್ ಕ್ರಿಕೆಟ್ ಗೆ 2021ರಲ್ಲಿಯೇ ನಿವೃತ್ತಿ ಘೋಷಿಸಿದ್ದರು.
ಇದನ್ನೂ ಓದಿ : ವಿರಾಟ್ ಮಣಿಕಟ್ಟಿನಲ್ಲಿರುವ ಈ ಸಾಧನವೇ 50ನೇ ಶತಕದ ದಾಖಲೆಗೆ ಕಾರಣ! ಏನಿದು ಅಂತಾ ತಿಳಿದರೆ ಶಾಕ್ ಆಗೋದು ಖಚಿತ
ವಿಶ್ವಕಪ್ನಲ್ಲಿ ಡಿ ಕಾಕ್ ಪ್ರದರ್ಶನ :
ವಿಶ್ವಕಪ್ ನಲ್ಲಿ ಡಿ ಕಾಕ್ ಉತ್ತಮ ಪ್ರದರ್ಶನ ತೋರಿದ್ದರು. ಆಡಿದ 10 ಪಂದ್ಯಗಳಲ್ಲಿ 4 ಶತಕ ಸಿಡಿಸಿದ್ದಾರೆ. ವಿಕೆಟ್ ಕೀಪರ್ ಆಗಿರುವ ಇವರು 20 ಮಂದಿಯನ್ನು ಪೆವಿಯನ್ ಗೆ ಕಳುಹಿಸುವಲ್ಲಿ ಮಹತ್ತರ ಪಾತ್ರ ಕೂಡಾ ವಹಿಸಿದ್ದಾರೆ. 155 ಏಕದಿನ ಪಂದ್ಯಗಳಲ್ಲಿ 6,770 ರನ್ ಸಿಡಿಸಿದ್ದಾರೆ. ಇದರಲ್ಲಿ 21 ಶತಕ, 30 ಅರ್ಧಶತಕಗಳು ಸೇರಿವೆ. 54 ಟೆಸ್ಟ್ ಪಂದ್ಯಗಳಲ್ಲಿ 3300 ರನ್ ಗಳಿಸಿದ್ದಾರೆ. 80 ಟಿ20 ಪಂದ್ಯಗಳಲ್ಲಿ 2277 ರನ್ ಬಾರಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ