Mohammed Shami mother Health Update: ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್‌ ಪಂದ್ಯ ಆರಂಭಕ್ಕೂ ಮುನ್ನ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರ ತಾಯಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವರದಿಗಳ ಪ್ರಕಾರ, ಶಮಿ ಅವರ ತಾಯಿ ಅಂಜುಮ್ ಆರಾ ಜ್ವರದಿಂದ ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಪ್ರಸ್ತುತ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ICC ವಿಶ್ವಕಪ್ ಟ್ರೋಫಿಯ ಬೆಲೆ ಎಷ್ಟು ಕೋಟಿ ಗೊತ್ತಾ? ನೈಜ ದರ ತಿಳಿದರೆ ದಂಗಾಗೋದು ಖಂಡಿತ


ಭಾರತ ಕ್ರಿಕೆಟ್ ತಂಡದೊಂದಿಗೆ ಶಮಿ ಅಹಮದಾಬಾದ್‌’ನಲ್ಲಿದ್ದು, ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಫೈನಲ್‌’ನಲ್ಲಿ ಭಾಗವಹಿಸಿದ್ದಾರೆ. ಇನ್ನು ಕ್ರಿಕೆಟಿಗನಿಗೆ ತನ್ನ ತಾಯಿಯ ಅನಾರೋಗ್ಯದ ಬಗ್ಗೆ ತಿಳಿದಿದೆಯೇ ಎಂಬುದು ಸ್ಪಷ್ಟವಾಗಿಲ್ಲ.


ಪ್ರಸ್ತುತ ಶಮಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮೊದಲ ನಾಲ್ಕು ಪಂದ್ಯಗಳಲ್ಲಿ ಭಾಗವಹಿಸದಿದ್ದರೂ ಸಹ ಆ ಬಳಿಕ ಮಿಂಚಿದ್ದರು. ಇನ್ನು ಶಮಿ ಕೇವಲ ಏಳು ಪಂದ್ಯಗಳಲ್ಲಿ 22 ವಿಕೆಟ್‌’ಗಳನ್ನು ಕಬಳಿಸುವ ಮೂಲಕ ಪ್ರಮುಖ ವಿಕೆಟ್ ಟೇಕರ್ ಆಗಿದ್ದಾರೆ.


ಇದನ್ನೂ ಓದಿ: 47 ರನ್ ಗಳಿಸಿ ಔಟಾದ್ರೂ ಶ್ರೇಷ್ಠ ದಾಖಲೆ ಬರೆದ ರೋಹಿತ್: ಯಾವ ನಾಯಕನೂ ಮಾಡಲು ಸಾಧ್ಯವಾಗದ ರೆಕಾರ್ಡ್


ಪಂದ್ಯ ಪ್ರಾರಂಭವಾಗುವ ಗಂಟೆಗಳ ಮೊದಲು, ನ್ಯೂಸ್ ಏಜೆನ್ಸಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ, ಅಂಜುಮ್ ಅರಾ ಅವರು ಶಮಿ ಮತ್ತು ಟೀಮ್ ಇಂಡಿಯಾ ಫೈನಲ್‌ಗೆ ಮುಂಚಿತವಾಗಿ ಶುಭ ಹಾರೈಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. “ವಿಶ್ವಕಪ್ ಗೆದ್ದು ದೇಶಕ್ಕೆ ಮೆರಗು ತರಲಿ ಎಂದು ಹಾರೈಸುತ್ತೇನೆ: ಎಂದು ಅಂಜುಮ್ ಅರಾ ತಮ್ಮ ಸಂಕ್ಷಿಪ್ತ ಸಂದೇಶದಲ್ಲಿ ತಿಳಿಸಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.