T20 World Cup : ODI ವಿಶ್ವಕಪ್ 2024 ರ  ಫೈನಲ್ ನಲ್ಲಿ ಕಾದಾಡುವ ತಂಡಗಳು ಯಾವುವು ಎನ್ನುವುದು ಇದೀಗ ಬಹಿರಂಗವಾಗಿದೆ. ನವೆಂಬರ್ 19 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ನಡುವೇ ವಿಶ್ವಕಪ್ ಅಂತಿಮ ಹಣಾಹಣಿ ನಡೆಯಲಿದೆ. 2003ರ ನಂತರ ಮೊದಲ ಬಾರಿಗೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ  ಮತ್ತೊಂದು ಸುದ್ದಿ ಹೊರಬಿದ್ದಿದೆ.  ಮುಂದಿನ ವರ್ಷ T20 ವಿಶ್ವಕಪ್ 2024 ನಡೆಯಲಿದೆ. ಇದೀಗ ತಂಡವೊಂದು  T20 ವಿಶ್ವಕಪ್ 2024 ಅರ್ಹತಾ ಪಂದ್ಯಗಳಿಗೆ ತನ್ನ ತಂಡವನ್ನು ಪ್ರಕಟಿಸಿದೆ. 


COMMERCIAL BREAK
SCROLL TO CONTINUE READING

ಟಿ20 ವಿಶ್ವಕಪ್ ತಂಡ ಪ್ರಕಟ : 
ನವೆಂಬರ್ 22 ರಿಂದ 30 ರವರೆಗೆ ವಿಂಡ್‌ಹೋಕ್‌ನಲ್ಲಿ T20 ವಿಶ್ವಕಪ್ ಅರ್ಹತಾ ಪಂದ್ಯವನ್ನು ಆಡಲಾಗುವುದು. ನಾಲ್ಕು ಗುಂಪುಗಳಾಗಿ ವಿಂಗಡಿಸಲಾದ ಈ ಬೃಹತ್ ಟೂರ್ನಿಯಲ್ಲಿ 20 ತಂಡಗಳು ಭಾಗವಹಿಸಲಿವೆ. ಆತಿಥೇಯರಾಗಿದ್ದು, ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ನೇರವಾಗಿ ಅರ್ಹತೆ ಪಡೆದಿವೆ. ಇವುಗಳನ್ನು ಹೊರತುಪಡಿಸಿ, ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಕೂಡ ಅರ್ಹತೆ ಪಡೆದಿವೆ. ನೇಪಾಳ ಮತ್ತು ಒಮಾನ್ ಕೂಡಾ ಅರ್ಹತೆ ಪಡೆದಿರುವ ತಂಡಗಳಲ್ಲಿ ಸೇರಿದೆ. 


ಇದನ್ನೂ ಓದಿ : ಟೀಂ ಇಂಡಿಯಾದ ಈ ಆಟಗಾರನೇ ಜಗತ್ತಿನ ಅತ್ಯುತ್ತಮ ಬೌಲರ್: ಕೀವೀಸ್ ನಾಯಕ ಕೇನ್ ವಿಲಿಯಮ್ಸನ್ ಶ್ಲಾಘಿಸಿದ್ದು ಯಾರನ್ನು?


ಅರ್ಹತೆ ಪಡೆಯಲಿರುವ ಎರಡು ತಂಡ : 
2024 ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ಅರ್ಹತಾ ಸ್ಥಾನಗಳಿಗಾಗಿ ಏಳು ತಂಡಗಳು ಪ್ರಸ್ತುತ ಸ್ಪರ್ಧಿಸುತ್ತಿವೆ. ಪ್ರಾದೇಶಿಕ ಫೈನಲ್‌ನಲ್ಲಿ ನಮೀಬಿಯಾ, ಜಿಂಬಾಬ್ವೆ ಮತ್ತು ಉಗಾಂಡ ಜೊತೆಗೆ ಎರಡು ಉಪ-ಪ್ರಾದೇಶಿಕ ಅರ್ಹತಾ ಪಂದ್ಯಗಳಿಂದ ನಾಲ್ಕು ತಂಡಗಳು ಭಾಗವಹಿಸಲಿವೆ. ಇದರಲ್ಲಿ ಕೀನ್ಯಾ, ರುವಾಂಡಾ, ತಾಂಜಾನಿಯಾ ಮತ್ತು ನೈಜೀರಿಯಾದ ಹೆಸರುಗಳು ಸೇರಿವೆ. ಟೂರ್ನಿಯಲ್ಲಿ ಅಗ್ರ-2 ತಂಡಗಳು ,2024ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯಲಿವೆ.


ತಂಡ ಪ್ರಕಟ : 
ಐಸಿಸಿ ಪುರುಷರ ಟಿ20 ವಿಶ್ವಕಪ್ ಅರ್ಹತಾ ಸುತ್ತಿಗೆ ನಮೀಬಿಯಾ ಕ್ರಿಕೆಟ್ ಮಂಡಳಿ ಗುರುವಾರ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಇದಕ್ಕಾಗಿ ನಮೀಬಿಯಾ ನಾಯಕತ್ವದ ಜವಾಬ್ದಾರಿಯನ್ನು ಗೆರ್ಹಾರ್ಡ್ ಎರಾಸ್ಮಸ್ ಗೆ ವಹಿಸಿದೆ. 


ಇದನ್ನೂ ಓದಿ : ವಿರಾಟ್ ಮಣಿಕಟ್ಟಿನಲ್ಲಿರುವ ಈ ಸಾಧನವೇ 50ನೇ ಶತಕದ ದಾಖಲೆಗೆ ಕಾರಣ! ಏನಿದು ಅಂತಾ ತಿಳಿದರೆ ಶಾಕ್ ಆಗೋದು ಖಚಿತ


T20 ವಿಶ್ವಕಪ್ ಅರ್ಹತಾ ಪಂದ್ಯಕ್ಕಾಗಿ ನಮೀಬಿಯಾ ತಂಡ : 
ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಜಾನ್ ಗ್ರೀನ್, ಮೈಕೆಲ್ ವ್ಯಾನ್ ಲಿಂಗೆನ್, ನಿಕೋಲ್ ಲೋಫ್ಟಿ-ಈಟನ್, ಹೆಲಾವೊ ಯ್ಫ್ರಾನ್ಸ್, ಶಾನ್ ಫೌಚೆ, ಬೆನ್ ಶಿಕೊಂಗೊ, ಟಂಗೆನಿ ಲುಂಗಮೆನಿ, ನಿಕೊ ಡೆವ್ಲಿನ್, ಜೆಜೆ ಸ್ಮಿತ್, ಜಾನ್ ಫ್ರೈಲಿಂಕ್, ಜೆಪಿ ಕೋಟ್ಜ್, ಡೇವಿಡ್ ವೈಸ್, ಮಲನ್ ಸ್ಕೊಲ್ಟ್ಜ್, .


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ