“ಶಮಿ ಬೌಲಿಂಗ್’ಗೆ ಫ್ಯಾನ್ ಆಗ್ಬಿಟ್ಟೆ…”- ಲಂಕಾ ವಿರುದ್ಧ ಅಬ್ಬರಿಸಿದ ಶಮಿ ಬಗ್ಗೆ ಶೋಯೆಬ್ ಅಖ್ತರ್ ಹೇಳಿದ್ದು ಹೀಗೆ…
Shoaib Akhtar Statement on Mohammad Shami: ಟೀಂ ಇಂಡಿಯಾದ ಈ ಅದ್ಭುತ ಗೆಲುವಿನಿಂದ ಅಚ್ಚರಿಗೊಂಡ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಹೇಳಿಕೆಯೊಂದನ್ನು ನೀಡಿದ್ದಾರೆ.
Shoaib Akhtar Video: ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ವಿಶ್ವಕಪ್ 2023ರ ಸೆಮಿಫೈನಲ್’ಗೆ ಪ್ರವೇಶಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ಶ್ರೀಲಂಕಾ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ಕಿಲ್ಲರ್ ಬೌಲಿಂಗ್’ನಿಂದ ಭಾರತ ತಂಡ 302 ರನ್’ಗಳ ಜಯ ಸಾಧಿಸಿತು.
ಇದನ್ನೂ ಓದಿ: ಭಾರತದ ಗೆಲುವಿನೊಂದಿಗೆ ವಿಶೇಷ ದಾಖಲೆ ಬರೆದ ಬುಮ್ರಾ- ಸಿರಾಜ್
ಇನ್ನು ಟೀಂ ಇಂಡಿಯಾದ ಈ ಅದ್ಭುತ ಗೆಲುವಿನಿಂದ ಅಚ್ಚರಿಗೊಂಡ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಹೇಳಿಕೆಯೊಂದನ್ನು ನೀಡಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಮೊಹಮ್ಮದ್ ಶಮಿ ಅದ್ಭುತ ಬೌಲಿಂಗ್ ಮಾಡಿ 5 ಓವರ್’ಗಳಲ್ಲಿ ಕೇವಲ 18 ರನ್ ನೀಡಿ 5 ವಿಕೆಟ್ ಪಡೆದಿದ್ದರು.
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಜೀ ನ್ಯೂಸ್’ನ ಕ್ರಿಕೆಟ್ ಕಾರ್ಯಕ್ರಮ 'ದಿ ಕ್ರಿಕೆಟ್ ಶೋ' ಜೊತೆ ಮಾತನಾಡಿದ್ದಾರೆ.
ರಾವಲ್ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಶೋಯೆಬ್ ಅಖ್ತರ್ ಶಮಿ ಬಗ್ಗೆ ಮಾತನಾಡಿ, “ಶಮಿ5 ರನ್’ಗೆ 5 ವಿಕೆಟ್ ಕಬಳಿಸಬೇಕು ಎಂಬುದು ನನ್ನ ಆಸೆಯಾಗಿತ್ತು. ಆದರೆ ಹಾಗಾಗಲ್ಲಿ ಎಂದು ಬೇಸರಪಟ್ಟೆ. ನನ್ನ ಸಹೋದರ.. ಶಮಿಗೆ ಸೆಲ್ಯೂಟ್. ಭಾರತ ನಿಮ್ಮಿಂದ ಏನನ್ನು ನಿರೀಕ್ಷಿಸಿತ್ತು ಅದನ್ನೇ ಮಾಡಿದ್ದೀರಿ. ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್’ನಲ್ಲಿ ಶಮಿಯನ್ನು ಸೇರಿಸಿ ಅವರಿಗೆ ಆಡಲು ಅವಕಾಶ ನೀಡಿದ ಭಾರತೀಯ ತಂಡದ ಆಡಳಿತಕ್ಕೆ ನಾನು ಧನ್ಯವಾದ ಹೇಳುತ್ತೇನೆ” ಎಂದು ಹೇಳಿದ್ದಾರೆ.
“ಮೊಹಮ್ಮದ್ ಶಮಿ ಎಂತಹ ಅದ್ಭುತ ಕಂಬ್ಯಾಕ್ ಮಾಡಿದ್ದಾರೆ…! ಅವರ ಆಟದ ಮೂಲಕವೇ ಎಲ್ಲಾ ಟೀಕಾಕಾರರಿಗೆ ತಕ್ಕ ಉತ್ತರವನ್ನು ನೀಡಿದ್ದಾರೆ. ತನ್ನನ್ನು ತಿರಸ್ಕರಿಸಿದವರಿಗೂ ಇದು ಸರಿಯಾದ ಉತ್ತರ. ನಿಮ್ಮ ಬೌಲಿಂಗ್’ಗೆ ಫ್ಯಾನ್ ಆಗ್ಬಿಟ್ಟೆ” ಎಂದು ಕೊಂಡಾಡಿದ್ದಾರೆ.
ಇದನ್ನೂ ಓದಿ: ವಿಶ್ವಕಪ್’ನಲ್ಲಿ ಈ ಶ್ರೇಷ್ಠ ದಾಖಲೆ ಬರೆದ ವಿಶ್ವದ ಎರಡನೇ ತಂಡ ಭಾರತ
ಇನ್ನು ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಅತ್ಯುತ್ತಮ ಪ್ರದರ್ಶನದ ಕುರಿತು ಮಾತನಾಡಿದ ಅವರು, “ನೀವು ಗೆಲ್ಲುತ್ತಿದ್ದೀರಿ… ಅದರ ಜೊತೆಗೆ ನಮ್ಮನ್ನು ಹಿಂದೆ ಸರಿಯಲು ಹೇಳುತ್ತಿದ್ದೀರಿ. ವಾಂಖೆಡೆಯಲ್ಲಿ ಟೀಂ ಇಂಡಿಯಾ ಕಡಿಮೆ ಪಂದ್ಯಗಳಲ್ಲಿ ಸೋತಿದೆ ಮತ್ತು ಹೆಚ್ಚು ಪಂದ್ಯಗಳನ್ನು ಗೆದ್ದಿದೆ. ನನ್ನ ಪ್ರಕಾರ, ಭಾರತವು ಇದೀಗ ಅತ್ಯಂತ ಅಪಾಯಕಾರಿ ತಂಡವಾಗಿ ಕಾಣುತ್ತಿದೆ. ಈ ಟೂರ್ನಿಯಲ್ಲಿ ಭಾರತಕ್ಕೆ ಇನ್ನೂ ಯಾವುದೇ ಪೈಪೋಟಿ ಇಲ್ಲ” ಎಂದು ಶ್ಲಾಘಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.