ಭಾರತದ ಗೆಲುವಿನೊಂದಿಗೆ ವಿಶೇಷ ದಾಖಲೆ ಬರೆದ ಬುಮ್ರಾ- ಸಿರಾಜ್: ವಿಶ್ವಕಪ್ ಇತಿಹಾಸದಲ್ಲೇ ಯಾರೂ ಮಾಡದ ಸಾಧನೆ ಇದು

Mohammed Siraj and Jasprit Bumrah Record: ನವೆಂಬರ್ 2 ಅಂದರೆ ಇಂದು ವಾಂಖೆಡೆ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 357 ರನ್‌’ಗಳ ಬೃಹತ್ ಸ್ಕೋರ್ ಕಲೆಹಾಕಿತು. ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಶುಭಮನ್ ಗಿಲ್ ಶತಕಗಳನ್ನು ಮಿಸ್ ಮಾಡಿಕೊಂಡರೂ ಕೂಡ ಟೀಂ ಇಂಡಿಯಾಗೆ ಉತ್ತಮ ಸ್ಕೋರ್ ನೀಡಲು ಸಹಕರಿಸಿದರು

Written by - Bhavishya Shetty | Last Updated : Nov 2, 2023, 11:23 PM IST
    • ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ 302 ರನ್’ಗಳ ಅಂತರದಲ್ಲಿ ಗೆಲುವು
    • ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 357 ರನ್‌’ಗಳ ಬೃಹತ್ ಸ್ಕೋರ್ ಕಲೆಹಾಕಿತು
    • ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಒಟ್ಟಾಗಿ ಅದ್ಭುತ ದಾಖಲೆ ನಿರ್ಮಿಸಿದ್ದಾರೆ
ಭಾರತದ ಗೆಲುವಿನೊಂದಿಗೆ ವಿಶೇಷ ದಾಖಲೆ ಬರೆದ ಬುಮ್ರಾ- ಸಿರಾಜ್: ವಿಶ್ವಕಪ್ ಇತಿಹಾಸದಲ್ಲೇ ಯಾರೂ ಮಾಡದ ಸಾಧನೆ ಇದು title=
Jasprit Bumrah- Mohammad Siraj

Mohammed Siraj and Jasprit Bumrah Record: ಟೀಂ ಇಂಡಿಯಾ ಆಡಿದ ಏಳೂ ಪಂದ್ಯಗಳಲ್ಲಿ ಅಬ್ಬರಿಸಿ, ಸೆಮಿಫೈನಲ್ ಪ್ರವೇಶ ಮಾಡಿದೆ. ಇಂದು ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ 302 ರನ್’ಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಇನ್ನು ಈ ಗೆಲುವಿನ ಹೊರತಾಗಿ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ವಿಶೇಷ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.

ಇದನ್ನೂ ಓದಿ: ಗಿಲ್‌ ಶತಕ ಮಿಸ್‌ ಮಾಡಿಕೊಂಡಿದ್ದಕ್ಕೆ ಬೇಸಗೊಂಡ ಸಾರಾ ತೆಂಡೂಲ್ಕರ್..! ವಿಡಿಯೋ ವೈರಲ್

ನವೆಂಬರ್ 2 ಅಂದರೆ ಇಂದು ವಾಂಖೆಡೆ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 357 ರನ್‌’ಗಳ ಬೃಹತ್ ಸ್ಕೋರ್ ಕಲೆಹಾಕಿತು. ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಶುಭಮನ್ ಗಿಲ್ ಶತಕಗಳನ್ನು ಮಿಸ್ ಮಾಡಿಕೊಂಡರೂ ಕೂಡ ಟೀಂ ಇಂಡಿಯಾಗೆ ಉತ್ತಮ ಸ್ಕೋರ್ ನೀಡಲು ಸಹಕರಿಸಿದರು.

ಬ್ಯಾಟಿಂಗ್ ಒಂದೆಡೆ ಅಬ್ಬರಿಸಿದ್ದರೂ ಸಹ ಬೌಲರ್’ಗಳು ಮತ್ತಷ್ಟು ಶ್ರೀಲಂಕಾದ ಪರಿಸ್ಥಿತಿಯನ್ನು ಹದಗೆಡುವಂತೆ ಮಾಡಿದ್ದರು.  

ಈ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಒಟ್ಟಾಗಿ ಅದ್ಭುತ ದಾಖಲೆ ನಿರ್ಮಿಸಿದ್ದಾರೆ. ಅಂದಹಾಗೆ ಈ ದಾಖಲೆ ನಿರ್ಮಾಣಗೊಂಡಿರುವುದು ODI ಕ್ರಿಕೆಟ್‌’ನ ಇತಿಹಾಸದಲ್ಲಿ ಮೊದಲ ಬಾರಿಗೆ… ಇಬ್ಬರೂ ಆರಂಭಿಕ ಬೌಲರ್‌’ಗಳು ತಮ್ಮ ಮೊದಲ ಎಸೆತದಲ್ಲಿಯೇ ವಿಕೆಟ್ ಪಡೆದಿದ್ದರು. ಹೀಗಾಗಿ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಮೊದಲ ಬಾರಿಗೆ, ಭಾರತವು ಆರಂಭಿಕರಿಬ್ಬರನ್ನು ಗೋಲ್ಡನ್ ಡಕ್‌’ನೊಂದಿಗೆ ಅಂದರೆ ಮೊದಲ ಎಸೆತದಲ್ಲಿಯೇ ಖಾತೆ ತೆರೆಯದೆ ಔಟ್ ಮಾಡಿದ್ದರು.

ಈ ದಾಖಲೆ ಬರೆದ ಬಳಿಕವೂ ಸಿರಾಜ್ ತಮ್ಮ ಆಟವನ್ನು ಮುಂದುವರೆಸಿದ್ದು, ಕೇವಲ 7 ಎಸೆತಗಳಲ್ಲಿ ಶ್ರೀಲಂಕಾದ ಅಗ್ರ ಕ್ರಮಾಂಕವನ್ನು ಕೆಡವಿದ್ದರು. ಅದೇ ಓವರ್‌’ನ ಐದನೇ ಎಸೆತದಲ್ಲಿ ಸದೀರ ಸಮರವಿಕ್ರಮ ಅವರನ್ನು ಸಿರಾಜ್ ಪೆವಿಲಿಯನ್‌ಗೆ ಕಳುಹಿಸಿದರು. ಅಂದಹಾಗೆ ಈ ಓವರ್‌’ನಲ್ಲಿ ಸಿರಾಜ್ ಯಾವುದೇ ರನ್ ನೀಡದೆ 2 ವಿಕೆಟ್ ಪಡೆದಿದ್ದರು.

ಇದನ್ನೂ ಓದಿ: ವಿಶ್ವಕಪ್’ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಜಹೀರ್ ಖಾನ್ ರೆಕಾರ್ಡ್ ಬ್ರೇಕ್ ಮಾಡಿದ ಮೊಹಮ್ಮದ್ ಶಮಿ

ಮರುಕಳಿಸಿತು ಏಷ್ಯಾಕಪ್ ಫೈನಲ್ ನೆನಪು:

ಅಂದು ಕೊಲಂಬೊದಲ್ಲಿ ನಡೆದ ಏಷ್ಯಾಕಪ್ ಫೈನಲ್‌’ನಲ್ಲಿಯೂ ಟೀಂ ಇಂಡಿಯಾ ಇದೇ ಶ್ರೀಲಂಕಾ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿ ಟ್ರೋಫಿಯನ್ನು ಗೆದ್ದಿತ್ತು. ಆ ಸಂದರ್ಭದಲ್ಲಿ ಮೊಹಮ್ಮದ್ ಸಿರಾಜ್ ಕೇವಲ 21 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು. ಅಷ್ಟೇ ಅಲ್ಲದೆ, ಶ್ರೀಲಂಕಾ ಕೇವಲ 50 ರನ್’ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತ್ತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News