World Cup 2023, Team India: ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ. 48 ವರ್ಷಗಳ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಟೀಂ ಇಂಡಿಯಾ ಹೊಸ ಇತಿಹಾಸ ಸೃಷ್ಟಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ ಶ್ರೀಲಂಕಾವನ್ನು 302 ರನ್’ಗಳ ಬೃಹತ್ ಅಂತರದಿಂದ ಸೋಲಿಸಿತು. ಈ ಮೂಲಕ ಇತಿಹಾಸ ನಿರ್ಮಿಸಿದೆ. ಇದು ವಿಶ್ವಕಪ್ ಇತಿಹಾಸದಲ್ಲಿ ಯಾವುದೇ ತಂಡದ ರನ್’ಗಳ ವಿಷಯದಲ್ಲಿ ಎರಡನೇ ಅತಿ ದೊಡ್ಡ ಗೆಲುವಿನ ದಾಖಲೆಯಾಗಿದೆ.
ಇದನ್ನೂ ಓದಿ: ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಒಂದು ಪಂದ್ಯವನ್ನೂ ಸೋಲದೆ ವಿಶ್ವಕಪ್ ಟ್ರೋಫಿ ಗೆದ್ದಿದ್ದು ಕೇವಲ ಎರಡೇ ತಂಡ: ಯಾವುದದು ಗೊತ್ತಾ?
48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಭಾರತ 302 ರನ್’ಗಳಿಂದ ಎರಡನೇ ಅತಿ ದೊಡ್ಡ ಗೆಲುವನ್ನು ದಾಖಲಿಸಿದೆ. ODI ವಿಶ್ವಕಪ್ನಲ್ಲಿ ರನ್’ಗಳ ವಿಷಯದಲ್ಲಿ ಅತಿದೊಡ್ಡ ಗೆಲುವು ದಾಖಲಿಸಿದ ವಿಶ್ವದಾಖಲೆ ಆಸ್ಟ್ರೇಲಿಯಾ ಹೆಸರಿನಲ್ಲಿದೆ. ಅಕ್ಟೋಬರ್ 25 ರಂದು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ 2023 ಆವೃತ್ತಿಯಲ್ಲಿ ಆಸ್ಟ್ರೇಲಿಯಾ ನೆದರ್ಲೆಂಡ್ಸ್ ತಂಡವನ್ನು 309 ರನ್’ಗಳಿಂದ ಸೋಲಿಸಿತ್ತು. ಇದು ವಿಶ್ವಕಪ್ ಇತಿಹಾಸದಲ್ಲಿ ಅತಿದೊಡ್ಡ ಗೆಲುವಿನ ವಿಶ್ವ ದಾಖಲೆಯಾಗಿದೆ.
ಇದಕ್ಕೂ ಮುನ್ನ 2015ರ ಮಾರ್ಚ್’ನಲ್ಲಿ ನಡೆದ ವಿಶ್ವಕಪ್’ನಲ್ಲಿ ಆಸ್ಟ್ರೇಲಿಯಾ ಅಫ್ಘಾನಿಸ್ತಾನವನ್ನು 275 ರನ್’ಗಳಿಂದ ಸೋಲಿಸಿತ್ತು. ಭಾರತ ಈ ಹಿಂದೆ ಮಾರ್ಚ್ 2007 ರಲ್ಲಿ ವಿಶ್ವಕಪ್’ನಲ್ಲಿ ಬರ್ಮುಡಾವನ್ನು 257 ರನ್’ಗಳಿಂದ ಸೋಲಿಸಿತ್ತು. 2015ರ ವಿಶ್ವಕಪ್’ನಲ್ಲಿ ದಕ್ಷಿಣ ಆಫ್ರಿಕಾ ಕೂಡ ವೆಸ್ಟ್ ಇಂಡೀಸ್ ತಂಡವನ್ನು ಇಷ್ಟೇ ರನ್ಗಳ ಅಂತರದಿಂದ ಸೋಲಿಸಿತ್ತು.
ODI ವಿಶ್ವಕಪ್ ಇತಿಹಾಸದಲ್ಲಿ ಅತಿ ದೊಡ್ಡ ಗೆಲುವು (ರನ್’ಗಳ ವಿಷಯದಲ್ಲಿ)
1. ಆಸ್ಟ್ರೇಲಿಯಾ vs ನೆದರ್ಲೆಂಡ್ಸ್ - ಆಸ್ಟ್ರೇಲಿಯಾಗೆ 309 ರನ್’ಗಳ ಗೆಲುವು (2023 ವಿಶ್ವಕಪ್)
2. ಭಾರತ vs ಶ್ರೀಲಂಕಾ - ಭಾರತ 302 ರನ್’ಗಳ ಗೆಲುವು (2023 ವಿಶ್ವಕಪ್)
3. ಆಸ್ಟ್ರೇಲಿಯಾ vs ಅಫ್ಘಾನಿಸ್ತಾನ - ಆಸ್ಟ್ರೇಲಿಯಾ 275 ರನ್’ಗಳ ಗೆಲುವು (2015 ವಿಶ್ವಕಪ್)
4. ಭಾರತ vs ಬರ್ಮುಡಾ - ಭಾರತ 257 ರನ್’ಗಳ ಗೆಲುವು (2007 ವಿಶ್ವಕಪ್)
5. ದಕ್ಷಿಣ ಆಫ್ರಿಕಾ vsವೆಸ್ಟ್ ಇಂಡೀಸ್ - ದಕ್ಷಿಣ ಆಫ್ರಿಕಾ 257 ರನ್’ಗಳ ಗೆಲುವು (2015 ವಿಶ್ವಕಪ್)
6. ಆಸ್ಟ್ರೇಲಿಯಾ vs ನಮೀಬಿಯಾ - ಆಸ್ಟ್ರೇಲಿಯಾ 256 ರನ್’ಗಳ ಗೆಲುವು (2003 ವಿಶ್ವಕಪ್)
ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಭಾರತದ ಅತಿ ದೊಡ್ಡ ಗೆಲುವಿನ ದಾಖಲೆ:
ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ನ ಇತಿಹಾಸದಲ್ಲಿ ರನ್ಗಳ ವಿಷಯದಲ್ಲಿ ಅತಿ ದೊಡ್ಡ ಗೆಲುವನ್ನು ದಾಖಲಿಸಿದ ದಾಖಲೆ ಭಾರತದ ಹೆಸರಿನಲ್ಲಿದೆ. 2023ರ ಜನವರಿಯಲ್ಲಿ ತಿರುವನಂತಪುರಂನಲ್ಲಿ ನಡೆದ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಭಾರತ ಶ್ರೀಲಂಕಾವನ್ನು 317 ರನ್’ಗಳ ಬೃಹತ್ ಅಂತರದಿಂದ ಸೋಲಿಸಿತ್ತು. ಆಸ್ಟ್ರೇಲಿಯ ನೆದರ್ಲೆಂಡ್ಸ್ ವಿರುದ್ಧ 309 ರನ್ಗಳ ಬೃಹತ್ ಅಂತರದ ಗೆಲುವು ಸಾಧಿಸಿದ್ದು, ಇದು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ರನ್ಗಳ ವಿಷಯದಲ್ಲಿ ಎರಡನೇ ಅತಿ ದೊಡ್ಡ ಗೆಲುವಾಗಿದೆ.
ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ದೊಡ್ಡ ಗೆಲುವು (ರನ್’ಗಳ ವಿಷಯದಲ್ಲಿ)
- ಭಾರತ vs ಶ್ರೀಲಂಕಾ - ಭಾರತ 317 ರನ್’ಗಳ ಗೆಲುವು (2023)
- ಆಸ್ಟ್ರೇಲಿಯಾ vs ನೆದರ್ಲೆಂಡ್ಸ್ - ಆಸ್ಟ್ರೇಲಿಯಾ 309 ರನ್’ಗಳ ಗೆಲುವು (2023)
- ಜಿಂಬಾಬ್ವೆ vs ಯುಎಇ - ಜಿಂಬಾಬ್ವೆ 304 ರನ್’ಗಳ ಗೆಲುವು (2023)
- ಭಾರತ vs ಶ್ರೀಲಂಕಾ - ಭಾರತ 302 ರನ್’ಗಳ ಗೆಲುವು (2023)
- ನ್ಯೂಜಿಲೆಂಡ್ vs ಐರ್ಲೆಂಡ್ - ನ್ಯೂಜಿಲೆಂಡ್ 290 ರನ್’ಗಳ ಗೆಲುವು (2008)
- ಆಸ್ಟ್ರೇಲಿಯಾ vs ಅಫ್ಘಾನಿಸ್ತಾನ - ಆಸ್ಟ್ರೇಲಿಯಾ 275 ರನ್’ಗಳ ಗೆಲುವು (2015)
ಇದನ್ನೂ ಓದಿ: ಭಾರತದ ಗೆಲುವಿನೊಂದಿಗೆ ವಿಶೇಷ ದಾಖಲೆ ಬರೆದ ಬುಮ್ರಾ- ಸಿರಾಜ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.