Rohit Sharma Health Update: 2023ರ ಏಕದಿನ ವಿಶ್ವಕಪ್‌’ನಲ್ಲಿ ಟೀಂ ಇಂಡಿಯಾದ ಅಬ್ಬರ ಮುಂದುವರಿದಿದೆ. ಇಲ್ಲಿಯವರೆಗೆ ಆಡಿರುವ ಐದು ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ 10 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಅಂದಹಾಗೆ ಇಂದು ಅಂದರೆ ಅಕ್ಟೋಬರ್ 29ರಂದು ಭಾರತ, ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಈ ಹಣಾಹಣಿ ಲಕ್ನೋದ ಏಕನಾ ಮೈದಾನದಲ್ಲಿ ನಡೆಯಲಿದ್ದು, ಕಳೆದ 20 ವರ್ಷಗಳಲ್ಲಿ ಭಾರತ ಒಂದೂ ಬಾರಿಯು ಇಂಗ್ಲೆಂಡ್ ವಿರುದ್ಧ ಗೆದ್ದಿಲ್ಲ ಎಂಬುದು ಇಲ್ಲಿ ಉಲ್ಲೇಖನೀಯ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ನೆದರ್ಲ್ಯಾಂಡ್ಸ್-ಆಸೀಸ್ ಗೆಲುವಿನಿಂದ ಪಾಯಿಂಟ್ಸ್ ಟೇಬಲ್’ನಲ್ಲಿ ಬದಲಾವಣೆ! ಈಗ ಎಷ್ಟನೇ ಸ್ಥಾನದಲ್ಲಿದೆ ಭಾರತ?


ಒಂದು ವೇಳೆ ಈ ಪಂದ್ಯದಲ್ಲಿ ಗೆದ್ದರೆ ಟೀಂ ಇಂಡಿಯಾ ನೇರವಾಗಿ ಸೆಮಿಸ್ ಪ್ರವೇಶಿಸಲಿದೆ. ಸದ್ಯ ಸಖತ್ ಜೋಶ್’ನಲ್ಲಿರುವ ಟೀಂ ಇಂಡಿಯಾಗೆ ಶಾಕಿಂಗ್ ಸುದ್ದಿಯೊಂದು ಬಂದಿದೆ. ನಿರ್ಣಾಯಕ ಪಂದ್ಯಕ್ಕೂ ಮುನ್ನ ನಾಯಕ ರೋಹಿತ್ ಶರ್ಮಾ ಗಾಯಗೊಂಡಿದ್ದಾರೆ. ಶನಿವಾರ ಲಕ್ನೋದಲ್ಲಿ ನೆಟ್ಸ್’ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದ ಸಂದರ್ಭದಲ್ಲಿ ರೋಹಿತ್ ಶರ್ಮಾ ಗಾಯಗೊಂಡಿದ್ದರು.


ಬ್ಯಾಟಿಂಗ್ ಅಭ್ಯಾಸದ ವೇಳೆ ಬೌಲರ್ ಎಸೆದ ಬೌನ್ಸರ್ ರೋಹಿತ್ ಶರ್ಮಾ ಬಲ ಮಣಿಕಟ್ಟಿಗೆ ಬಲವಾಗಿ ಬಡಿದಿದೆ ಎಂದು ವರದಿಯಾಗಿದೆ. ನೋವಿನಿಂದ ಕಂಗೆಟ್ಟಿದ್ದ ರೋಹಿತ್ ಶರ್ಮಾ ಫಿಸಿಯೋಗಳ ಸಹಾಯದಿಂದ ಅಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ್ದರು.


ಇನ್ನು ರೋಹಿತ್ ಶರ್ಮಾ ಆರೋಗ್ಯ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಇದುವರೆಗೆ ಬಂದಿಲ್ಲ. ಒಂದು ವೇಳೆ ಗಾಯ ಗಂಭೀರವಾಗಿದ್ದರೆ ರೋಹಿತ್ ಶರ್ಮಾ ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಆಗ ಕೆಎಲ್ ರಾಹುಲ್ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.


ಏಕೆಂದರೆ, ಟೀಂ ಇಂಡಿಯಾದ ಉಪನಾಯಕ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಗಾಯದಿಂದ ಬಳಲುತ್ತಿದ್ದು, ಅವರ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾದ ಜವಬ್ದಾರಿ ಕೆಎಲ್ ರಾಹುಲ್ ಹೆಗಲೇರಲಿದೆ.


ರೋಹಿತ್ ಶರ್ಮಾ ಶ್ರೇಷ್ಠ ದಾಖಲೆ:


ಒಂದು ವೇಳೆ ರೋಹಿತ್ ಶರ್ಮಾ ಈ ಪಂದ್ಯಕ್ಕೆ ಎಂಟ್ರಿಯಾದಲ್ಲಿ, ಶ್ರೇಷ್ಠ ದಾಖಲೆ ಬರೆಯುವ ಸಾಧ್ಯತೆ ಇದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ 47 ರನ್ ಗಳಿಸಿದರೆ 18,000 ಅಂತಾರಾಷ್ಟ್ರೀಯ ರನ್ ಪೂರೈಸಲಿದ್ದಾರೆ. 36ರ ಹರೆಯದ ರೋಹಿತ್ ಇದುವರೆಗೆ 456 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 43.36ರ ಸರಾಸರಿಯಲ್ಲಿ 17963 ರನ್ ಸೇರಿಸಿದ್ದಾರೆ. 52 ಟೆಸ್ಟ್‌’ಗಳಲ್ಲಿ 3677 ರನ್ ಮತ್ತು 256 ODIಗಳಲ್ಲಿ 10423 ರನ್ ಗಳಿಸಿದ್ದಾರೆ. ಇನ್ನು 148 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 3853 ರನ್ ಕಲೆ ಹಾಕಿದ್ದಾರೆ.


ಇದನ್ನೂ ಓದಿ: ಆಸ್ಟ್ರೇಲಿಯಾ vs ನ್ಯೂಜಿಲ್ಯಾಂಡ್ ಪಂದ್ಯದಲ್ಲಿ ಬರೋಬ್ಬರಿ 771 ರನ್ ದಾಖಲು: ಇದು ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಸ್ಕೋರ್


ಈ ದಾಖಲೆ ಬರೆದರೆ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ಅವರ ಕ್ಲಬ್ ಸೇರುವ ಸುವರ್ಣಾವಕಾಶ ರೋಹಿತ್’ಗೆ ಲಭಿಸಲಿದೆ. ಇದುವರೆಗೆ ಟೀಂ ಇಂಡಿಯಾದ ನಾಲ್ವರು ಬ್ಯಾಟ್ಸ್‌ಮನ್‌’ಗಳು 18 ಸಾವಿರ ಅಥವಾ ಅದಕ್ಕಿಂತ ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿದ್ದಾರೆ. ಪ್ರಸಕ್ತ ವಿಶ್ವಕಪ್‌’ನಲ್ಲಿ ರೋಹಿತ್ 5 ಪಂದ್ಯಗಳಲ್ಲಿ 311 ರನ್ ಗಳಿಸಿದ್ದಾರೆ. ಅದರಲ್ಲಿ ಶತಕ ಮತ್ತು ಅರ್ಧ ಶತಕವೂ ಸೇರಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ