ICC Cricket World Cup 2023 Points Table: ಇಂದು ಐಸಿಸಿ ವಿಶ್ವಕಪ್ 2023ರಲ್ಲಿ ಎರಡು ಪಂದ್ಯಗಳು ನಡೆದಿದ್ದವು. ಟೂರ್ನಿಯ ರೋಚಕ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ತಂಡವನ್ನು ಐದು ರನ್ಗಳಿಂದ ಸೋಲಿಸಿದರೆ, ಕೋಲ್ಕತ್ತಾದ ಈಡನ್ ಗಾರ್ಡನ್’ನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 87 ರನ್’ಗಳಿಂದ ಸೋಲಿಸಿದ ನೆದರ್ಲೆಂಡ್ಸ್ ಅಚ್ಚರಿಯ ಗೆಲುವು ಸಾಧಿಸಿದೆ.
ಇದನ್ನೂ ಓದಿ: “20 ವರ್ಷಗಳಿಂದ ಆಂಗ್ಲರ ವಿರುದ್ಧ ಗೆದ್ದಿಲ್ಲ ಭಾರತ”- ಈ ವಿಚಾರದ ಬಗ್ಗೆ ರೋಹಿತ್ ಶರ್ಮಾ ಹೇಳಿದ್ದೇನು
ಇನ್ನು ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಸೆಮಿಫೈನಲ್’ನತ್ತ ಸಾಗಿದೆ. ಮತ್ತೊಂದೆಡೆ ನ್ಯೂಜಿಲೆಂಡ್’ನ ಸತತ ಎರಡನೇ ಸೋಲಿನಿಂದಾಗಿ ಪಾಕಿಸ್ತಾನದ ಕೊನೆಯ ಭರವಸೆ ಇನ್ನೂ ಉಳಿದಂತಾಗಿದೆ.
ಪಾಯಿಂಟ್ಸ್ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸಮಾನ ಅಂಕಗಳನ್ನು ಪಡೆದಿವೆ. ಆದರೆ ಉತ್ತಮ ನೆಟ್ ರನ್ ರೇಟ್ನಿಂದಾಗಿ ನ್ಯೂಜಿಲೆಂಡ್ ಮೂರನೇ ಸ್ಥಾನದಲ್ಲಿದೆ ಮತ್ತು ಆಸ್ಟ್ರೇಲಿಯಾ ನಾಲ್ಕನೇ ಸ್ಥಾನದಲ್ಲಿದೆ. ನೆದರ್ಲೆಂಡ್ಸ್ ಗೆಲುವಿನ ಬಳಿಕ ಹಾಲಿ ಚಾಂಪಿಯನ್ ಇಂಗ್ಲೆಂಡ್ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಉಳಿದುಕೊಂಡಿದೆ.
ನ್ಯೂಜಿಲೆಂಡ್ ಆರು ಪಂದ್ಯಗಳಲ್ಲಿ ನಾಲ್ಕು ಗೆಲುವು ಮತ್ತು ಎರಡು ಸೋಲನ್ನು ಅನುಭವಿಸಿದೆ. ಇನ್ನು ಈ ತಂಡದ ನೆಟ್ ರನ್ ರೇಟ್ +1.232 ಆಗಿದ್ದು, ಎಂಟು ಅಂಕಗಳನ್ನು ಪಡೆದಿವೆ.
ಆರು ಪಂದ್ಯಗಳಲ್ಲಿ ನಾಲ್ಕು ಗೆಲುವು ಮತ್ತು ಎರಡು ಸೋಲಿನ ನಂತರ ಆಸ್ಟ್ರೇಲಿಯಾ ಎಂಟು ಅಂಕಗಳನ್ನು ಪಡೆದಿದ್ದು, ನೆಟ್ ರನ್ ರೇಟ್ +0.970 ಆಗಿದೆ.
ಪ್ರಸ್ತುತ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆರು ಪಂದ್ಯಗಳಲ್ಲಿ ಐದು ಗೆಲುವು ಮತ್ತು ಒಂದು ಸೋಲನ್ನು ಕಂಡ ಈ ತಂಡ 10 ಅಂಕಗಳನ್ನು ಪಡೆದಿದೆ. ಅಂದಹಾಗೆ ಇವರ ನೆಟ್ ರನ್ ರೇಟ್ +2.032 ಆಗಿದೆ.
ಇದೀಗ ಭಾರತ ಪಾಯಿಂಟ್ಸ್ ಟೇಬಲ್’ನಲ್ಲಿ ಎರಡನೇ ಸ್ಥಾನದಲ್ಲಿದೆ. ಐದು ಪಂದ್ಯಗಳಲ್ಲಿ ಐದು ಗೆಲುವಿನೊಂದಿಗೆ ಟೀಂ ಇಂಡಿಯಾ 10 ಅಂಕ ಹೊಂದಿದೆ. ಇನ್ನು ನೆಟ್ ರನ್ ರೇಟ್ +1.353 ಆಗಿದೆ.
ಪಾಕ್’ಗೆ ಇನ್ನೂ ಉಳಿದಿದೆ ಭರವಸೆ:
ನ್ಯೂಜಿಲೆಂಡ್ ಸೋಲಿನ ನಂತರ ಪಾಯಿಂಟ್ ಪಟ್ಟಿಯ ಪ್ರಕಾರ, ವಿಶ್ವಕಪ್’ನ ಸೆಮಿಫೈನಲ್’ಗೆ ಹೋಗುವ ಪಾಕಿಸ್ತಾನದ ಆಸೆ ಹಾಗೆಯೇ ಉಳಿದಿದೆ. ಪಾಕಿಸ್ತಾನಕ್ಕೆ ಇನ್ನೂ ಮೂರು ಪಂದ್ಯಗಳು ಬಾಕಿ ಇವೆ. ಈ ಮೂರು ಪಂದ್ಯಗಳು ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧ ನಡೆಯಲಿವೆ. ಈ ಮೂರು ಪಂದ್ಯಗಳನ್ನು ಒಂದು ವೇಳೆ ಗೆದ್ದರೆ ಪಾಕಿಸ್ತಾನ 10 ಅಂಕ ಪಡೆಯಲಿದೆ. ಮತ್ತೊಂದೆಡೆ, ನ್ಯೂಜಿಲೆಂಡ್’ನ ಮುಂದಿನ ಮೂರು ಪಂದ್ಯಗಳು ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಇದೆ. ನ್ಯೂಜಿಲೆಂಡ್ ತನ್ನ ಎಲ್ಲಾ ಮೂರು ಪಂದ್ಯಗಳಲ್ಲಿ ಸೋತರೆ, ಅದು ಕೇವಲ ಎಂಟು ಅಂಕಗಳನ್ನು ಹೊಂದಿರುತ್ತದೆ. ಈ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಸೆಮಿಫೈನಲ್’ಗೆ ಅರ್ಹತೆ ಪಡೆಯಲಿದೆ. ಆದರೆ ಪಾಕಿಸ್ತಾನ ಒಂದೇ ಒಂದು ಪಂದ್ಯದಲ್ಲೂ ಸೋತರೆ, ಅದರ ಕೊನೆಯ ಭರವಸೆ ಕೂಡ ಕೊನೆಗೊಳ್ಳುತ್ತದೆ.
ಇದನ್ನೂ ಓದಿ: ಆಸ್ಟ್ರೇಲಿಯಾ vs ನ್ಯೂಜಿಲ್ಯಾಂಡ್ ಪಂದ್ಯದಲ್ಲಿ ಬರೋಬ್ಬರಿ 771 ರನ್ ದಾಖಲು
ಇದಲ್ಲದೆ ನಾಲ್ಕನೇ ಕ್ರಮಾಂಕದಲ್ಲಿರುವ ಆಸ್ಟ್ರೇಲಿಯಾ ಪ್ರಸ್ತುತ ಎಂಟು ಅಂಕಗಳನ್ನು ಹೊಂದಿದೆ. ಆಸ್ಟ್ರೇಲಿಯಾ ತನ್ನ ಮುಂದಿನ ಮೂರು ಪಂದ್ಯಗಳಲ್ಲಿ ಸೋತರೂ ಪಾಕಿಸ್ತಾನ ಅರ್ಹತೆ ಪಡೆಯುತ್ತದೆ. ಅದೇ ಸಮಯದಲ್ಲಿ, ಆಸ್ಟ್ರೇಲಿಯಾ ಒಂದು ಪಂದ್ಯವನ್ನು ಗೆದ್ದರೆ ಮತ್ತು ಪಾಕಿಸ್ತಾನವು ಎಲ್ಲಾ ಮೂರು ಪಂದ್ಯಗಳನ್ನು ಗೆದ್ದರೆ, ನಂತರ ಎರಡೂ ತಂಡಗಳು ತಲಾ 10 ಅಂಕಗಳನ್ನು ಹೊಂದಿರುತ್ತವೆ. ಈ ಪರಿಸ್ಥಿತಿಯಲ್ಲಿ, ಉತ್ತಮ ನೆಟ್ ರನ್ ರೇಟ್ ಹೊಂದಿರುವ ತಂಡ ಸೆಮಿಫೈನಲ್’ಗೆ ಅರ್ಹತೆ ಪಡೆಯುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ