ಬೆಂಗಳೂರು : ವಿಶ್ವಕಪ್‌ 2023 ರ ಫೈನಲ್‌ ಹಣಾಹಣಿ ಇಂದು ನಡೆಯಲಿದೆ. ಫೈನಲ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯವನ್ನು ಎದುರಿಸಲಿದೆ. ಮಹೇಂದ್ರ ಸಿಂಗ್ ಧೋನಿ ಅವರನ್ನು ಕ್ಯಾಪ್ಟನ್ 'Cool' ಎಂದು ಕರೆದರೆ ರೋಹಿತ್ ಶರ್ಮಾ ಕ್ಯಾಪ್ಟನ್ 'Calm' ಎನ್ನಬಹುದು. ವಿಶ್ವಕಪ್‌ನಲ್ಲಿ ಟೀಮ್‌ ಇಂಡಿಯಾ ಇದುವರೆಗೆ ಉತ್ತಮ ಪ್ರದರ್ಶನ ನೀಡಿದೆ. ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋತಿಲ್ಲ ಮತ್ತು 10 ಪಂದ್ಯಗಳನ್ನು ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟಿದೆ. ಇದರ ಶ್ರೇಯಸ್ಸು ನಾಯಕ ರೋಹಿತ್ ಶರ್ಮಾ ಅವರಿಗೆ ಸಲ್ಲುತ್ತದೆ. 


COMMERCIAL BREAK
SCROLL TO CONTINUE READING

ಆಟಗಾರರ ಪ್ರದರ್ಶನದ ಹೊರತಾಗಿ, ಅವರ ನಾಯಕತ್ವವೂ ಅದ್ಭುತವಾಗಿದೆ. ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ರೋಹಿತ್ 11 ಬಾರಿ ‘Calm’ ಪದ ಬಳಸಿದ್ದರು. ಅದೇ ಸಮಯದಲ್ಲಿ 'Pressure' ಪದವನ್ನು 13 ಬಾರಿ ಬಳಸಿದರು. 35 ನಿಮಿಷಗಳ ಈ ಮಾಧ್ಯಮ ಸಂವಾದದಲ್ಲಿ ರೋಹಿತ್ ತಂಡ ಮತ್ತು ಆಟದ ಬಗ್ಗೆ ಸಾಕಷ್ಟು ಹೇಳಿದ್ದಾರೆ.


ಇದನ್ನೂ ಓದಿ : India vs Australia Playing 11: ಈ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ ಟೀಮ್ ಇಂಡಿಯಾ.. ಭಾರತದ ಪ್ಲೇಯಿಂಗ್‌ 11 ಇದೇ


ರೋಹಿತ್ ಶರ್ಮಾ ಈ ಫೈನಲ್ ಪಂದ್ಯವನ್ನು ತಮ್ಮ ವೃತ್ತಿಜೀವನದ ಅತ್ಯಂತ ದೊಡ್ಡ ಕ್ಷಣ ಎಂದು ಬಣ್ಣಿಸಿದ್ದಾರೆ. ರೋಹಿತ್ ಶರ್ಮಾ, 'ನಾನು ಚಿಂತಾಕ್ರಾಂತ ಮುಖಗಳ ಜೊತೆಗೆ ನಗುವ ಮುಖಗಳನ್ನು ಸಹ ನೋಡುತ್ತೇನೆ. ಅದಕ್ಕಾಗಿಯೇ ಈ ಆಟವು ವಿಭಿನ್ನವಾಗಿದೆ. ಏಕೆಂದರೆ ಅದರಲ್ಲಿ ನೀವು ವಿವಿಧ ರೀತಿಯ ಭಾವನೆಗಳನ್ನು ನೋಡುತ್ತೀರಿ. ಪ್ರತಿಯೊಬ್ಬರೂ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ. ವಿಮಾನ ನಿಲ್ದಾಣಗಳಲ್ಲಿ, ಹೋಟೆಲ್‌ಗಳಲ್ಲಿ, ವಿಶ್ವಕಪ್ ಗೆಲ್ಲಬೇಕು, ಶತಕ ಬಾರಿಸಬೇಕು ಅಥವಾ 5 ವಿಕೆಟ್‌ಗಳನ್ನು ಕಬಳಿಸಬೇಕು ಎಂದು ಜನರು ಹೇಳುತ್ತಲೇ ಇರುತ್ತಾರೆ. ಇದು ಯಾವಾಗಲೂ ನಮ್ಮ ಕಿವಿಯಲ್ಲಿದೆ ಎಂದಿದ್ದಾರೆ.


ವಿಶ್ವಕಪ್ ಫೈನಲ್‌ ಗೆ ಭಾರತ ತಂಡ : ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ರವಿಚಂದ್ರನ್ ಅಶ್ವಿನ್, ಪ್ರಸಿದ್ ಕೃಷ್ಣ.


ವಿಶ್ವಕಪ್ ಫೈನಲ್‌ ಗೆ ಆಸ್ಟ್ರೇಲಿಯಾದ ತಂಡ : ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್ (WK), ಸೀನ್ ಅಬಾಟ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋನಿಸ್, ಡೇವಿಡ್ ವಾರ್ನರ್, ಆಡಮ್ ಝಂಪಾ, ಮಿಚೆಲ್ ಸ್ಟಾರ್ಕ್, ಮಾರ್ನಸ್.


ಇದನ್ನೂ ಓದಿ : IND vs AUS Final Weather Report: ಭಾರತ - ಆಸ್ಟ್ರೇಲಿಯಾ ಫೈನಲ್ ಪಂದ್ಯ ಮಳೆಯಿಂದ ರದ್ದಾದರೆ ಗೆಲುವು ಯಾರಿಗೆ? 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.